ನೂತನ ಸಮಿತಿ ರಚಿಸುವಂತೆ ಮನವಿ
ಹಗರಿಬೊಮ್ಮನಹಳ್ಳಿ 01 : ಪಟ್ಟಣದಲ್ಲಿನ ಗುರುಭವನದ 6ವರ್ಷಗಳ ಹಣಕಾಸು ಲೆಕ್ಕ ಪತ್ರವನ್ನು ಶಿಕ್ಷಕರ ಮಹಾಜನ ಸಭೆಯಲ್ಲಿ ಮಂಡಿಸುವ ಹಾಗೂ ಅವಧಿ ಪೂರ್ಣಗೊಂಡಿರುವ ಗುರುಭವನ ಸಮಿತಿಯನ್ನು ನೂತನವಾಗಿ ರಚಿಸಲು ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಘಟಕವು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ನೀಡಿದರು.
ಈ ಸಂಧರ್ಭದಲ್ಲಿ ಕೆಎಸ್ಪಿಎಸ್ಟಿಎ ತಾಲೂಕು ಘಟಕದ ಉಪಾಧ್ಯಕ್ಷ ಜಿ.ಹನುಮರೆಡ್ಡಿ ಮಾತನಾಡಿ ತಾಲೂಕು ಗುರುಭವನವು ತಾಲೂಕಿನಸಮಸ್ತ ಶಿಕ್ಷಕರ ತನು,ಮನ,ಧನ ಸಹಕಾರದ ಅರ್ಪಣೆಯ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ, ಗುರುಭವನದ ಖಾಯಂ ಅಧ್ಯಕ್ಷತೆಯನ್ನು ವಹಿಸಿದ ತಾವು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ಶೀಘ್ರವೇ ಗುರುಭವನದ ಸಮಿತಿ ಸದಸ್ಯ ಹೊಂದಿರುವ ಎಲ್ಲಾ ಶಿಕ್ಷಕರ ಮಹಾಜನ ಸಭೆ ಕರೆದು ತಲೂಕಿನ ಸಮಸ್ತ ಶಿಕ್ಷಕೆಸ್ವಾಭಿಮಾನದ ಆಸ್ತಿಯಾದ ಗುರುಭವನದ 6ವರ್ಷಗಳ ಹಣಕಾಸು ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡಿಸಿಅವಧಿ ಪೂರ್ಣಗೊಂಡಿರುವ ಸಮಿತಿಯನ್ನು ವಿಸರ್ಜಿಸಿ ಪ್ರಜಾ ಪ್ರಭುತ್ವದ ನಿಯಮಗಳನ್ವಯ ಯಾವುದೇ ಪ್ರಭಾವಕ್ಕೊಳಗಾಗದೇ ಹಸ್ತಕ್ಷೇಪವಿಲ್ಲದಂತೆ 13ವಲಯಗಳ ಸಮಸ್ತ ಶಿಕ್ಷಕರು ತಮ್ಮ ವಲಯದ ಸದಸ್ಯರನ್ನು ಪಾರದರ್ಶಕವಾಗಿ ಆಯ್ಕೆ ಮಾಡಿ ಗುರುಭವನದ ನೂತನ ಸಮಿತಿಯನ್ನು ರಚಿಸುವ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಬೆಕೆಂದರು.
ಈ ಸಂಧರ್ಭದಲ್ಲಿ ಕೆಎಸ್ಪಿಎಸ್ಟಿಎ ತಾಲೂಕು ಸಂಘದ ಗೌರವಾಧ್ಯಕ್ಷ ವಿ.ನಾಂಗೇಂದ್ರಪ್ಪ,ಸಹ ಕಾರ್ಯದರ್ಶಿ ಇಟಗಿ ಮಂಜಿನಾಥ್,ಸಂಘಟನಾ ಕಾರ್ಯದರ್ಶಿ ಇಟಗಿ ಪ್ರಭಾಕರ,ಚುನಾಯಿತ ಪ್ರತಿನಿಧಿ ದೀಪಿಕಾ,ಮಹಾಂತೇಶ್ ನಾಯ್ಕ್,ಹರೀಶ್,ನಿಕಟ ಪೂರ್ವ ಉಪಾಧ್ಯಕ್ಷ ಬೆಟ್ಟಪ್ಪ,ಮುಖ್ಯ ಶಿಕ್ಷಕ ರುದ್ರಪ್ಪ,ಸಿ.ವೈ.ಮೋರ್ನಾಳ್,ಪಂಪನಗೌಡ,ತೀರ್ಥಾಚಾರ್ಯ,ಬಿಷ್ಟಪಯ್ಯ, ಸಹಶಿಕ್ಷಕ ಎಂ.ಯೋಗೇಶ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.