ಕಜಾವಿವಿಯಲ್ಲಿ ಒನಕೆ ಓಬವ್ವ ಅಧ್ಯಯನ ಪೀಠ ರಚಿಸಲು ಮನವಿ
ಶಿಗ್ಗಾವಿ 27: ಒನಕೆ ಓಬವ್ವ ಕೇವಲ ಅದೊಂದು ಹೆಸರಲ್ಲ ಅವಳೊಂದು ಶಕ್ತಿ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಸುವುದರ ಜೊತೆಗೆ ತನ್ನ ಸಮುದಾಯಕ್ಕೆ ಸಿಗಬೇಕಾದ ಗೌರವದ ಬಗ್ಗೆ ಅಂದೇ ಮದಕರಿ ನಾಯಕರಿಗೆ ತಿಳಿಸಿ ಸಮುದಾಯದ ರಕ್ಷಣೆಗೆ ಕೆಲಸ ಮಾಡಿದ್ದರು ಎಂದು ಸಾಮಾಜಿಕ ಹೋರಟಗಾರ್ತಿ ಅಕ್ಷತಾ ಕೆ.ಸಿ ಹೇಳಿದರು.
ನಗರದಲ್ಲಿ ಛಲವಾದಿ ಮಹಾಸಭಾ ಶಿಗ್ಗಾಂವ ತಾಲೂಕ ಹಾಗೂ ಛಲವಾದಿ ನೌಕರರ ಬಳಗ ಕನ್ನಡ ಮತ್ತು ಸಂಸ್ರ್ಕತಿ ಇಲಾಖೆ ಹಾವೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಟೋಲ್ಗೇಟನಲ್ಲಿ ಇದ್ದ ನಾನು ಇಂದು ಇಷ್ಟೊಂದು ಜನಸಾಗರದ ಮಧ್ಯೆ ಉಪನ್ಯಾಸ ನೀಡುತ್ತಿದ್ದೇನೆ ಎಂದರೆ ಅದು ಡಾ.ಬಿ.ಆರ್ಅಂಬೇಡ್ಕರ್ ಅವರ ಸಂವಿಧಾನ ಕಾರಣ ತಲೆ ತಲಾಂತರಗಳಿಂದ ವಿವಿಧ ಕಾರಣಗಳಿಂದ ದಲಿತರ ಮೇಲೆ ಶೋಷಣೆಗಳು ನಡೆಯುತ್ತಿವೆ ಅವೆಲ್ಲ ಮನುವಾದಿಗಳ ಕುತಂತ್ರಗಳು ಇವೆಲ್ಲ ನಿಲ್ಲಬೇಕೆಂದರೆ ನಾವೆಲ್ಲ ಸಂವಿಧಾನವನ್ನು ಓದಬೇಕು ಸಂವಿಧಾನವನ್ನು ರಕ್ಷಿಸಬೇಕು. ಛಲವಾದಿ ಸಮುದಾಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಒನಕೆ ಓಬವ್ವ ನಮ್ಮ ಸಮಾಜದಎರಡು ಕಣ್ಣುಗಳು ಇವರ ಹೆಸರಿನಲ್ಲಿ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ಯೋಜನೆ ರೂಪಿಸಬೇಕು ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಮ್ ಭಾಸ್ಕರ್ ಅವರು ಮಾತನಾಡಿ ನಮ್ಮ ಸಮುದಾಯದ ಬಹುತೇಕ ಜನರು ಇಂದು ಮಧ್ಯ ಮತ್ತು ಮೌಢ್ಯಗಳಲ್ಲಿ ಬಿದ್ದು ಹೊರಳಾಡುತ್ತಿದ್ದಾರೆ ಹಾಗಾಗಿ ನಮ್ಮ ಮಕ್ಕಳು ಶಿಕ್ಷಣದ ಕಡೆಗೆ ಗಮನಹರಿಸುತ್ತಿಲ್ಲ ಇದರಿಂದ ನಾವು ಅಭಿವ್ರದ್ದಿ ಹೊಂದಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಾವು ಭಗವಾನ ಬುದ್ದರ ಚಿಂತನೆಗಳನ್ನು ಬಾಬಾಸಾಹೇಬರ ಜೀವನ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆ ಹಿನ್ನೆಲೆಯಲ್ಲಿ ಇಂದು ಛಲವಾದಿ ಸಮುದಾಯದ ಸಾಂಸ್ರ್ಕತಿಕ ನಾಯಕಿ ಒನಕೆ ಓಬವ್ವಜಯಂತಿ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿ ಜಾಗ್ರತಿ ಮೂಡಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಮಾಜಿ ಶಾಸಕ ಅಜ್ಜಂಪೀರಖಾದ್ರಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಪರಶುರಾಮ ಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶಿಗ್ಗಾಂವ ನಗರದಗಂಗೀಭಾವಿ ಕ್ರಾಸ್ ಇಂದ ಅಂಬೇಡ್ಕರ ನಗರದವರೆಗೂ ಕುಂಭ ಮೇಳಗಳೊಂದಿಗೆ ಛಲವಾದಿ ಕಹಳೆಯವರು ಕಹಳೆ ಊದುವುದರ ಮೂಲಕ ಮೆರವಣಿಗೆಗೆ ಉತ್ಸಾಹ ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಶ್ರೀಕಾಂತ ದುಂಡಿಗೌಡ್ರ,ತಿಪ್ಪಣ್ಣ ಸಾತಣ್ಣವರ, ಶಿವಾನಂದ ಮ್ಯಾಗೇರಿ, ಮಂಜುನಾಥ ಬ್ಯಾಹಟ್ಟಿ, ಬಸನಗೌಡ ಮೇಲಿನಮನಿ, ಶಿವಾನಂದ ಬಾಗೂರ,ಛಲವಾದಿ ಮಹಾಸಭಾತಾಲೂಕಅಧ್ಯಕ್ಷ ಪ್ರಮೋಧ ಚಲವಾದಿ, ಶಂಕರ ಇಂಗಳಗಿ, ವೀರೇಶ, ಅಶೋಕ ಕಾಳೆ, ನೀಲವ್ವ ಕಾಲವಾಡ,ಕರೆಪ್ಪಕಟ್ಟಿಮನಿ, ಎನ್.ಬಿ.ಕಾಳೆ, ಮಾಂತೇಶ ಮಾಕಾಪುರ, ಮಲ್ಲೆಶಪ್ಪ ಮದ್ಲೆರ, ಹಾಗೂ ಹಾವೇರಿಜಿಲ್ಲೆಯಎಲ್ಲ ತಾಲೂಕಗಳಛಲವಾದಿ ಸಮುದಾಯದ ಮುಖಂಡರು ಹಾಜರಿದ್ದರು.
ಕಾರ್ಯಕ್ರಮಆರಂಭಕ್ಕೂ ಮುನ್ನ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋದಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶ್ರೀ ಜೋಡಿ ಬಸವೇಶ್ವರಜನಪದ ಕಲಾ ತಂಡದಕಲಾವಿದರುಅಂಬೇಡ್ಕರ್ ಹಾಗೂ ಒನಕೆ ಓಬವ್ವರಗೀತೆಗಳನ್ನು ಹಾಡಿದರು ಶಿಕ್ಷಕ ಬಿ.ಎಚ್.ಚಲವಾದಿ ಸ್ವಾಗತಿಸಿದರು ಶರೀಫ ಮಾಕಪ್ಪನವರಕಾರ್ಯಕ್ರಮ ನಿರೂಪಿಸಿದರು ಮಹೇಶ ಕಳಸದ ವಂದಿಸಿದರು.