ಬಳ್ಳಾರಿ

ಸಾರ್ವಜನಿಕ ರಸ್ತೆಯನ್ನು ತೆರವುಗಳಿಸುವಂತೆ ಆಗ್ರಹ

ಸಾರ್ವಜನಿಕ ರಸ್ತೆಯನ್ನು ತೆರವುಗಳಿಸುವಂತೆ ಆಗ್ರಹ

ಬಳ್ಳಾರಿ 4: ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡದ್ದನ್ನು ತೆರವುಗಳಿಸುವಂತೆ ಒತ್ತಾಯಿಸಿ ಸ್ಥಳೀಯರು ಆಗ್ರಹಿಸಿದ್ದಾರೆ. ಬಳ್ಳಾರಿ ನಗರದ ವಾರ್ಡ್ ನಂ 16, 2ನೇ ಕ್ರಾಸ್, ವಿಶಾಲನಗರದಲ್ಲಿ ಸಾಯಿ ಬಾಬಾ ದೇವಸ್ಥಾನದ ಹತ್ತಿರ ಬ್ರೆಡ್ ಫ್ಯಾಕ್ಟರಿಗೆ ಹೋಗುವ ರಸ್ತೆಯಲ್ಲಿ ಕೆ ರಾಘವೇಂದ್ರ ಪ್ರಸಾದ್ ಎನ್ನುವವರು ತಮ್ಮ ಮನೆ ಮುಂದಿನ ರಸ್ತೆಯಲ್ಲಿ ಮೂರು  ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುತ್ತಾರೆ. ಇದಕ್ಕೆ ಉಪಯೋಗಿಸಲು ತಮ್ಮ ಮನೆ ಕಾಂಪೌಂಡ್ ಹೊರಗಡೆ ಸಾರ್ವಜನಿಕ ರಸ್ತೆಯ ಫುಟ್‍ಬಾತನಲ್ಲಿ ಸ್ಟೇರ್‍ಕೇಸ್‍ನ್ನು ನಿರ್ಮಿಸಿಕೊಂಡಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಈ ಕುರಿತು ಹಿರಿಯ ನಾಗರಿಕರು ಜಿಲ್ಲಾಧಿಕಾರಿ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮತ್ತು ಜೆಸ್ಕಾಂ ಕಛೇರಿಗೆ ದೂರು ಸಲ್ಲಿಸಿದರೂ ಕೂಡ ಇಲ್ಲಿಯವರೆಗೆ ಯವುದೇ ಕ್ರಮಕೈಗೊಂಡಿರುವುದಿಲ್ಲ. ಹಗರಿ ನಾಗೇಶ್ ಮತ್ತು ಉಪ್ಪಾರ್ ಮಲ್ಲಪ್ಪ ಇವರು ಪ್ರಕಟಣೆ ಮೂಲಕ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

ಸುದ್ದಿ ಓದಿ