ಮುಂಡರಗಿಯಿಂದ ಮಣಿಪಾಲಗೆ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಮನವಿ
ಮುಂಡರಗಿ 27: ಕೆಎಸ್ಆರ್ಟಿಸಿ ಘಟಕ ಮುಂಡರಗಿಯಿಂದ ಮಣಿಪಾಲಗೆ ಬಸ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಮುಂಡರಗಿ ತಾಲ್ಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಕಾರ್ಯಕರ್ತರಿಂದ ಘಟಕ ವ್ಯವಸ್ಥಾಪಕರಿ ಕೆ.ಎಸ್.ಜಗಳೂರ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಂಡರಗಿ ತಾಲ್ಲೂಕಾ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ಕರ್ನಾಟಕ ರಾಜ್ಯದ ಮಣಿಪಾಲನಲ್ಲಿ ಸುಸಜ್ಜಿತ ಆರೋಗ್ಯ ತಪಾಸಣೆಗಳು ಇರುವುದರಿಂದ ಮುಂಡರಗಿಯಿಂದ ಬಹಳ ಕುಟುಂಬಗಳು ಆರೋಗ್ಯ ತಪಾಸಣೆಗಾಗಿ ಮಣಿಪಾಲಗೆ ಮುಂಡರಗಿಯಿಂದ ತೆರಳುತ್ತಿದ್ದು, ಮುಂಡರಗಿ ತಾಲೂಕು ಬಹಳ ಹಿಂದುಳಿದ ತಾಲೂಕು ಆಗಿರುವುದು ನಂಜುಂಡಪ್ಪ ವರದಿಯಲ್ಲಿ ಸೇರ್ಪಡೆ ಆಗಿರುತ್ತದೆ. ಮೇಲಾಗಿ ಪರಿಶಿಷ್ಟ, ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದೂಳಿದ ವರ್ಗಕ್ಕೆ ಸೇರಿದ ಕುಟುಂಬಗಳು ಹೆಚ್ಚಾಗಿವೆ.
ಪ್ರಸ್ತುತವಾಗಿ ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಇಲ್ಲಿಯ ಬಡಕುಟುಂಬಕ್ಕೆ ತಮ್ಮ ಆರೋಗ್ಯ ತಪಾಸಣೆಗಾಗಿ ಉಚಿತವಾಗಿ ಸಂಚರಿಸಲು ಈ ಭಾಗದ ಜನತೆಗೆ ಅನುಕೂಲವಾಗುತ್ತದೆ. ಕೂಡಲೇ ಕೆ.ಎಸ್.ಆರಿ್ಟ.ಸಿ ವ್ಯವಸ್ಥಾಪಕರು ಬಡಕುಟುಂಬದ ಮೇಲೆ ಹೆಚ್ಚು ಗಮನಹರಿಸುವದರೊಂದಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಅವರಿಗೆ ಸಹಾಯ ಮಾಡಬೇಕೆಂದು ಸುಭಾಷ ಕುಂಬಾರ ಹೇಳಿದರು.