ಮೈಕ್ರೋ ಫೈನಾನ್ಸ್‌ಗಳ ಮರುಪಾವತಿಗೆ ಕಾಲಾವಶಕಾಶ ನೀಡಲು ಮನವಿ
ಹಗರಿಬೊಮ್ಮನಹಳ್ಳಿ 28 : ಮೈಕ್ರೋ ಫೈನಾನ್ಸ್‌ಗಳು ನೀಡಿದ ಕಿರು ಸಾಲಗಳ ವಸೂಲಾತಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ, ಕರೋನಾ ಮಹಾಮಾರಿಯಿಂದ ಹೇರಿದ ಲಾಕ್‌ಡೌನ್‌ನಿಂದ ಜೀವನವೇ ದುಸ್ತರವಾಗಿದೆ, ದುಡಿಮೆಗಳಿಲ್ಲದ ಈ ಸಮಯದಲ್ಲಿ ಸಾಲ ಮರುಪಾವತಿ ಕಂತುಗಳಿಗೆ ಕಲಾವಕಾಶ ನೀಡುವಂತೆ ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಸಾಹೀರಾಬಾನು ಹೇಳಿದರು.
ತಹಶೀಲ್ದಾರ್ ಶರಣಮ್ಮ ಅವರಿಗೆ ಮನವಿಯನ್ನು ನೀಡಿ ಮಾತನಾಡಿ ಮೈಕ್ರೋ ಫೈನಾನ್ಸ್‌ಗಳು ಮಹಿಳೆಯರ ಗುಂಪುಗಳಿಗೆ ಕಿರು ಸಾಲಗಳನ್ನು ನೀಡಿ ಮರುಪಾವತಿಗಾಗಿ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ, ಹಾಗೂ ತಿಂಗಳಿಗೊಮ್ಮೆ ಸಾಲದ ಕಂತುಗಳ ಕಟ್ಟುವ ಮೂಲಕ ಮರುಪಾವತಿ ಮಾಡಿಕೊಳ್ಳುತ್ತಿದ್ದರು. ಲಾಕ್‌ಡೌನ್ ಸಂಕಷ್ಟ ಸಂದರ್ಭದಲ್ಲಿ ಗೃಹಿಣಿಯರು ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಇಂತಹ ದುಸ್ಥಿತಿಯಲ್ಲೂ ಸಹ ಮೈಕ್ರೋ ಫೈನಾನ್ಸ್‌ರವರು ಮಹಿಳೆಯರಿಗೆ ಕಿರುಕುಳ ನೀಡುತ್ತಾ ದೌರ್ಜನ್ಯವೆಸಗುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕೋವಿಡ್ ನಿಯಮಾವಳಿ ಅನುಸಾರ ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ಹಾಗಾಗಿ ಮೈಕ್ರೋ ಫೈನಾನ್ಸ್‌ರವರ ಕಂತುಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ, ಮುಂದಿನ ದಿನಗಳಲ್ಲಿ ಅದನ್ನು ಮರುಪಾವತಿ ಮಾಡುತ್ತೇವೆ.ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ತಿಳಿಸಿದರು.
ಸಿಪಿಐ ಮಲ್ಲಿಕಾರ್ಜುನ್ ಡಪ್ಪಿನ್ ರವರಿಗೂ ಸಹ ಅಮ್ಮ ಸಂಸ್ಥೆ ವತಿಯಿಂದ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ತಹಸೀಲ್ದಾರ್ ಶರಣಮ್ಮ ಹಾಗೂ ಸಿಪಿಐ ಮಲ್ಲಿಕಾರ್ಜುನ್ ಡಪ್ಪಿನ್ ಮಾತನಾಡಿ ಆದಷ್ಟು ಬೇಗನೆ ಮೈಕ್ರೋ ಫೈನಾನ್ಸ್‌ಗಳಿಗೆ ಸಂಬಂಧ ಪಟ್ಟವರ ಸಭೆ ಕರೆದು ಈ ಲಾಕ್‌ಡೌನ್ ಸಮಯದಲ್ಲಿ ಯಾರಿಗೂ ಸಾಲ ಮರುಪಾವತಿಗಾಗಿ ಒತ್ತಾಯ ಮಾಡುವಂತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವ ಮೂಲಕ ಮಹಿಳೆಯರಿಗೆ ಕಿರುಕುಳ ನೀಡದಂತೆ ಆದೇಶಿಸುತ್ತೇವೆ ಎಂದರು.
ಕೆ.ಬಾಳಮ್ಮ, ಭಾರತಿಬಾಯಿ, ಟಿ.ರೇಣುಕಾ, ರತ್ನಮ್ಮ, ಟಿ.ಬಾನುಬೀ, ಇಮಾಮ್‌ಬೀ, ಸೀಮಾ, ಪದ್ಮಾವತಿ, ಹಾತೀಮಾ, ರೇಖಾ, ಆಶಾ, ಪೊಟೋಗ್ರಾಫರ್ ರಫೀ ಮತ್ತಿತರರು ಇದ್ದರು.