ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಮನವಿ
ತಾಳಿಕೋಟಿ: ಪಟ್ಟಣ ತಾಲೂಕಾ ಕೇಂದ್ರವಾಗಿ ಕ್ಷಿಪ್ರವಾಗಿ ಬೆಳೆಯುತ್ತಿದೆ. ಇಲ್ಲಿರುವ ಪಿ.ಎಚ್.ಸಿ.ಯು ಇಲ್ಲಿಯವರೆಗೆ ತಾಲೂಕಾ ಆರೋಗ್ಯ ಕೇಂದ್ರವಾಗಿ ಪರಿವರ್ತನೆಯಾಗಿಲ್ಲ. ಇಲ್ಲಿ ಸಿಬ್ಬಂದಿ, ಅಂಬ್ಯುಲೆನ್ಸ್ ಹಾಗೂ ಹಲವಾರು ವೈದ್ಯಕೀಯ ಸೌಕರ್ಯಗಳಿಲ್ಲದಿರುವದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಹೇಳಿದರು.
ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಮೌಲನಾ ಅಬ್ದುಲ್ ಕಲಾಂ ಆಜಾದ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಇತರ ಸಂಸ್ಥೆಗಳ ಮುಖ್ಯಸ್ಥರು, ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಅವರ ನೇತೃತ್ವದಲ್ಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಇವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿ ಮಾತನಾಡಿದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಈ ಕೆಲಸ ನನ್ನ ಕಾರ್ಯ ಯೋಜನೆಯಲ್ಲಿ ಆದ್ಯತೆಯಲ್ಲಿದೆ. ಆದರೆ, ಹಣಕಾಸಿನ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗುತ್ತಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಈ ಸಮಯದಲ್ಲಿ ಸೈಯದ್ ಫಸಿಯುದ್ದೀನ ಖಾಜಿ, ಪುರಸಭೆ ಮಾಜಿ ಸದಸ್ಯರ ಗನಿಸಾಬ ಲಾಹೋರಿ, ಹಸನ್ ಮನಗೂಳಿ, ಮೊಹಮ್ಮದ ಶಫೀಕ್ ಇನಾಮದಾರ, ಜಾವೇದ ಕೆಂಬಾವಿ, ಗುಲಾಮ ಡೋಣಿ, ಮಹಿಬೂಬ ಲಾಹೋರಿ, ಮಂಜೂರ ಅಹ್ಮದ ಬೇಪಾರಿ, ತನ್ವೀರ ಮನಗೂಳಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್, ಖಾದ್ರಿ ಎಜ್ಯುಕೇಶನ್ ಸೊಸಾಯಿಟಿ ಹಾಗೂ ಪಿಂಜಾರ ಸಮಾಜದ ಪದಾಧಿಕಾರಿಗಳು ಇದ್ದರು