ದೇವಸ್ಥಾನ ಕಟ್ಟಡಕ್ಕೆ ಅನುದಾನ ಮಂಜೂರು ಮಾಡುವಂತೆ ಮನವಿ
ಬೈಲಹೊಂಗಲ 07: ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮದೇವಿ ದೇವಸ್ಥಾನ ಕಟ್ಟಡಕ್ಕೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಲ್ಲಿ ಅನುದಾನ ಮಂಜೂರು ಮಾಡುವಂತೆ ಗ್ರಾಮದೇವಿ ಜೀರ್ಣೋಧಾರ, ಟ್ರಸ್ಟ್ ಕಮಿಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.
ಸಂಗೊಳ್ಳಿ ಹೀರೆಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನ ರೇಸಕೊರ್ಸ ರಸ್ತೆಯ ಸಿಎಂ ಕಚೇರಿಯಲ್ಲಿ ಭೇಟಿಯಾಗಿ, ಕಿತ್ತೂರ ಚನ್ನಮ್ಮನ ಬಲಗೈ ಭಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಗ್ರಾಮದ ಐತಿಹಾಸಿಕ ಗ್ರಾಮದೇವಿ ದೇವಸ್ಥಾನ ಪುರಾತನದಿದ್ದು, ಸುಮಾರು 1ಕೋಟಿ 29 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಸ್ಥರು ಬೆಂಗಳೂರು ಬಿಳಿ ಕಲ್ಲಿನ ಕಟ್ಟಡ
ನಿರ್ಮಿಸಲು ತೀರ್ಮಾನಿಸಿ, ಪ್ರಾರಂಭಿಸಿದ್ದು, ಅನುದಾನ ನೀಡಬೇಕೆಂದು ತಿಳಿಸಿ, ದೇವಸ್ಥಾನ ನಿಮರ್ಾಣ ಕುರಿತು ವಿವರಿಸಿದರು
ಮುಖ್ಯಮಂತ್ರಿಗಳು ಮೊದಲ ಕಂತಿನಲ್ಲಿ 25 ಲಕ್ಷ ರೂ. ಮಂಜೂರಾತಿ ನೀಡುತ್ತಿದ್ದೆನೆ ನಂತರ ದಿನಗಳಲ್ಲಿ ಮತ್ತೆ ಮಂಜೂರಿಸುವ ಭರವಸೆ ನೀಡಿದರು.
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟ, ಟ್ರಸ್ಟ್ ಸದಸ್ಯರಾದ ಬಸವರಾಜ ಕೊಡ್ಲಿ, ಮಡಿವಾಳಪ್ಪ ಉರಬಿನ, ಬಸವರಾಜ ಕಮತ, ವಕೀಲ ಈರಣಗೌಡ ಪಾಟೀಲ ಇದ್ದರು.