ಬೆಳಗಾವಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ 

ಬೆಳಗಾವಿ 21: ಇ ಹಾಜರಾತಿ ತೊಂದರೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನವ ಕರ್ನಾಟಕ ಎಮ್‌ಆರ್‌ಡಬ್ಲೂ/ವಿಆರ್‌ಡಬ್ಲೂ/ಯುಆರ್‌ಡಬ್ಲೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ವತಿಯಿಂದ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಅರ​‍್ಿಸಲಾಯಿತು. 

ಮನವಿಯಲ್ಲಿ ರಾಜ್ಯದಲ್ಲಿ 6860 ಜನ ವಿಕಲಚೇತನರ ಕಾರ್ಯಕರ್ತರುಗಳು 2007-08ನೇ ಸಾಲಿನಿಂದ ಗೌರವಧನ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಎಲ್ಲ ವಿಕಲಚೇತನರಿಗೆ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಇದುವರೆಗೂ ಸರ್ಕಾರಗಳು ವಿಕಲಚೇತನ ಗೌರವಧನ ಕಾರ್ಯಕರ್ತರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲದಿರುವುದು ಖಂಡನೀಯ.  

ಪುನರ್ವಸತಿ ಕಾರ್ಯಕರ್ತರುಗಳಿಗೆ ಇಲಾಖೆಯ ನಿರ್ದೇಶನದಂತೆ ಇ ಹಾಜರಾತಿ ಮಾಡಲು ಅನುಕೂಲ ಮಾಡಿರುವುದು ಸಂತೋಷ. ಪುನರ್ವಸತಿ ಕಾರ್ಯಕರ್ತರುಗಳು ಇ ಹಾಜರಾತಿ ಸರಿಯಾಗಿ ನೀಡುತ್ತಿದ್ದು, ಗ್ರಾಮೀಣ ?ಭಾಗದಲ್ಲಿ ವಿದ್ಯುತ್, ಇಂಟರ್‌ನೆಟ್ ಸಮಸ್ಯೆ, ಕಂಪ್ಯೂಟರ ರಿಪೇರಿ,ಕಾರ್ಯಕರ್ತರುಗಳು ಕ್ಷೇತ್ರ ಭೇಟಿ, ವಿಕಲಚೇತನರ ಮನೆ ಭೇಟಿ, ಬೇರೆ ಬೇರೆ ಇಲಖೆ ಭೇಟಿ ಮಾಹಿತಿ ಸಲ್ಲಿಸುವಿಕೆ, ಸಭೆಗಳಿಗೆ ಹಾಜರಾಗುವುದು ಇಂಥ ಸಮಯದಲ್ಲಿ ಸರಿಯಾಗಿ ಇ ಹಾಜರಾತಿ ನೀಡುವಲ್ಲಿ ಸ್ವಲ್ಪ ವಿಳಂವಾಗಿರುತ್ತದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಜಿಲ್ಲಾ ಇಲಾಖೆಯವರು ಕಾರ್ಯಕರ್ತರುಗಳು ಗೌರವಧನ ಕಡಿತಗೊಳಿಸಿ ಅತಿ ಕಡಿಮೆ ಗೌರವಧನ ನೀಡುತ್ತಿರುವುದು ಖಂಡನೀಯ. ಅತಿ ಕಡಿಮೆ ಗೌರವಧನದಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಿಸುವುದು ನಮಗೆ ಮಾಡುತ್ತಿರುವ ಅನ್ಯಾಯವಾಗಿದೆ. ಗೌರವಧನ ಕಾರ್ಯಕರ್ತರು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಕೇಂದ್ರಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಯಾವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಶ್ರಮಕ್ಕೆ ತಕ್ಕ  ಗೌರವಧನ ನೀಡದೇ ಅನ್ಯಾಯವೆಸಗುತ್ತಿದೆ. ಆದ್ದರಿಂದ ತಾವು ಈ ಕುರಿತು ಪರೀಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.  ಇ ಹಾಜರಾತಿಯಿಂದ ಕಾರ್ಯಕರ್ತರ ಗೌರವಧನ ಕಡಿತಗೊಳಿಸುವುದನ್ನು ನಿಯಂತ್ರಿಸುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇಲಾಖೆಯಿಂದ ನೀಡುವ ಯಂತ್ರಚಾಲಿತ ವಾಹನವನ್ನು ಅರ್ಜಿ ಸಲ್ಲಿಸಿದ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ನೀಡಬೇಕು. ಮೀಸಲಾಗಿರುವ ಶೇ. 5 ಅನುದಾನ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆಯಾಗಬೇಕು ಎಂದು ಮನವಿಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಲಾಗಿದೆ. 


ಸುದ್ದಿ ಓದಿ