ಬಳ್ಳಾರಿ

ಸರಕು ವಾಹನ ತೆರಿಗೆಯಲ್ಲಿ ವಿನಾಯಿತಿ ನೀಡಲು ಮನವಿ

ಸರಕು ವಾಹನ ತೆರಿಗೆಯಲ್ಲಿ ವಿನಾಯಿತಿ ನೀಡಲು ಮನವಿ

ಲೋಕದರ್ಶನ ವರದಿ 

ಬಳ್ಳಾರಿ 22: ಕೋವಿಡ್‌-19 ಎರಡನೇ ಅಲೆಯ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ ನಾಲ್ಕು ಚಕ್ರದ ಪ್ರಯಾಣಿಕರ ಮತ್ತು ಸರಕು ವಾಣಿಜ್ಯ ವಾಹನಗಳ ಮಾಲಿಕರು ಮತ್ತು ಚಾಲಕರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ಇದರಿಂದಾಗಿ ನಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಇಂತ ಸಂದರ್ಭದಲ್ಲಿ ವಾಹನದ ರಸ್ತೆ ತೆರಿಗೆ ಸೇರಿದಂತೆ ಯಾವುದೇ ತೆರಿಗೆಗಳನ್ನು ಕಟ್ಟಲು ಬಹಳ ಕಷ್ಟವಾಗುತ್ತದೆ ಕಾರಣ ರಸ್ತೆ ತೆರಿಗೆಯಿಂದ ಈ ಸಾಲಿನ ಅಂದರೆ 2021 ಡಿಸೆಂಬರ್ ಅಂತ್ಯದವರೆಗೆ ಸಂಪೂರ್ಣ ವಿನಾಯಿತಿಯನ್ನು ನೀಡಬೇಕೆಂದು ಕಲ್ಯಾಣ ಕರ್ನಾಟಕ ಖಾಸಗಿ ಹಾಗೂ ವಾಣಿಜ್ಯ ಚಾಲಕರ ಸಂಘ ಮತ್ತು ಕರ್ನಾಟಕ ಚಾಲಕರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷ ಎಂ.ಡಿ ಮಸ್ತಾನ್ ಹಾಗೂ ಜಿಲ್ಲಾಧ್ಯಕ್ಷರಾದ ವೈ.ಎಸ್ ಇಕ್ಬಾಲ್ ರವರುಗಳು ಬಳ್ಳಾರಿ ಪ್ರಾದೇಶಿಕ ಸಾರಿಗೆ ವಲಯದ ಆರ್‌.ಟಿ.ಒ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.  

ಮುಖ್ಯಮಂತ್ರಿ ಯಡಿಯೂರ​‍್ಪನವರು ಯಲ್ಲೋ ಬೋರ್ಡ್‌ನ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳ ತೆರಿಗೆಯನ್ನು ಈ ವರ್ಷಾಂತ್ಯದವರೆಗೂ ವಿನಾಯಿತಿಯನ್ನು ನೀಡಿ ನಮ್ಮ ನೆರವಿಗೆ ಬರಬೇಕೆಂದು ವಿಂತಿಸಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲೆಯ ಪದಾಧಿಕಾರಿಗಳಾದ ಜಿ ರಘು, ಎಸ್‌.ಜಿ ಶರಣಬಸವ, ಶಾಂಭಶಿವರಾವ್, ಭಾಷಾವಲಿ, ಕನಕಾವಲಿ ಸೇರಿದಂತೆ ಹಲವಾರು ವಾಹನ ಮಾಲಿಕರು ಮತ್ತು ಚಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ