ಬೈಲಹೊಂಗಲ

ದೊಡವಾಡ ಗ್ರಾಮಕ್ಕೆ ನಿರಂತರ ವಿದ್ಯುತ್ ಸರಬರಾಜುಗೆ ಆಗ್ರಹಿಸಿ ಮನವಿ

ದೊಡವಾಡ ಗ್ರಾಮಕ್ಕೆ ನಿರಂತರ ವಿದ್ಯುತ್ ಸರಬರಾಜುಗೆ ಆಗ್ರಹಿಸಿ ಮನವಿ

ಬೈಲಹೊಂಗಲ16: ತಾಲೂಕಿನ ದೊಡವಾಡ ಗ್ರಾಮಕ್ಕೆ ಪೂರೈಸುವ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸ್ವತಂತ್ರಗೊಳಿಸಿ ವಿದ್ಯುತ್ ಸರಬರಾಜು ಮಾಡಲು ಹೆಸ್ಕಾಂನಿಂದ ಕ್ರಮ ಕೈಗೊಳ್ಳಬೇಕೆಂದು ಮಲ್ಲಮ್ಮನ ಬೆಳವಡಿಯಲ್ಲಿನ ಹೆಸ್ಕಾಂ ಶಾಖಾಧಿಕಾರಿಗೆ ಗ್ರಾಮಸ್ಥರ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. 

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಮಾತನಾಡುತ್ತಾ ತಾಲೂಕಿನಲ್ಲಿಯೇ ಹೆಚ್ಚಿನ ಜನಸಂಖ್ಯೆ ಮತ್ತು ಕೃಷಿ ಭೂಮಿಯನ್ನು ಹೊಂದಿರುವ ಗ್ರಾಮವಾಗಿದ್ದರೂ ಕೂಡ ಗ್ರಾಮಕ್ಕೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಅನೇಕ ವರ್ಷಗಳಿಂದ ಬಹಳ ತೊಂದರೆಯಾಗುತ್ತಿದ್ದು, ಜನರ ದೈನಂದಿನ ಚಟುವಟಿಕೆಗಳಿಗೆ ಮತ್ತು ರೈತರ ಕೃಷಿ ಕೆಲಸಗಳಿಗೆ ಅನಾನುಕೂಲವಾಗುತ್ತಿದೆ. ಸುಮಾರು 4 ಸಾವಿರ ವಿದ್ಯುತ್ ಸಂಪರ್ಕಗಳಿರುವ ಗ್ರಾಮವನ್ನು ಬೇರೆ ಗ್ರಾಮಗಳ ಜತೆ ಕ್ಲಬ್ ಮಾಡದೆ ಸ್ವತಂತ್ರ ಲೈನ್ ಪೂರೈಸಬೇಕು. ಕಡಸಗಟ್ಟಿ ಗ್ರಾಮದ ಬಳಿ ಹೊಸ ಎಸ್‌.ಓ ಶಾಖೆ ಆರಂಭವಾಗುತ್ತಿರುವುದರಿಂದ ದೊಡವಾಡ ಗ್ರಾಮಕ್ಕೆ ಸ್ವತಂತ್ರ ಲೈನ್ ಮಾಡಲು ಅವಕಾಶವಿದೆ. ಆದ್ದರಿಂದ ಮೇಲಾಧಿಕಾರಿಗಳ ಗಮನಕ್ಕೆ ತಂದು ಗ್ರಾಮಕ್ಕೆ ಸ್ವತಂತ್ರ ವಿದ್ಯುತ್ ಸರಬರಾಜು ಪೂರೈಕೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.  

ಗ್ರಾಮಸ್ಥರಾದ ರಾಚಯ್ಯ ಹಿರೇಮಠ, ಈರ​‍್ಪ ಗಂಟಿ, ವಿರುಪಾಕ್ಷಪ್ಪ ಜಮನೂರ, ಬಸಪ್ಪ ಗಂಟಿ ಮತ್ತಿತರರು ಉಪಸ್ಥಿತರಿದ್ದರು.   

ಪೋಟೊ ಕ್ಯಾಪ್ಸನ:ಎಚ್15-ಬಿಎಲ್‌ಎಚ್5 

ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮಕ್ಕೆ ವಿದ್ಯುತ್ ಸರಬರಾಜ ಸ್ವತಂತ್ರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಬೆಳವಡಿ ಹೆಸ್ಕಾಂ ಕಛೇರಿ ನಿರ್ವಾಹಕ ಶಾಖಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 


ಸುದ್ದಿ ಓದಿ