ಐದಬಾವಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ
ಲಿಂಗಸುಗೂರು 23: ತಾಲೂಕಿನ ಐದಬಾವಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ಜಿಲ್ಲಾಧ್ಯಕ್ಷ ಅಮರೇಶ ನಾಯಕ ಐದಬಾವಿ ಅವರ ನೇತೃತ್ವದಲ್ಲಿ ಐದಬಾವಿ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಾರಿಗೆ ಇಲಾಖೆಯ ಲಿಂಗಸುಗೂರು ಡಿಪೋ ಮ್ಯಾನೇಜರ್ಗೆ ಮನವಿ ಸಲ್ಲಿಸಿದರು.
ಐದಬಾವಿ ಗ್ರಾಮದಿಂದ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ - ಕಾಲೇಜಿಗೆ ಗ್ರಾಮದಿಂದ ದೂರದ ಲಿಂಗಸುಗೂರು ನಗರಕ್ಕೆ ಹೋಗಬೇಕಾಗಿದೆ. ಗ್ರಾಮಕ್ಕೆ ಸಾರಿಗೆ ಬಸ್ ಸೌಲಭ್ಯವಿಲ್ಲದ್ದರಿಂದ ವಿದ್ಯಾರ್ಥಿಗಳು ಖಾಸಗಿ ವಾಹನಗಳ (ಆಟೋ, ಟಂಟಂ) ಮೂಲಕ ಗುರುಗುಂಟಾಗೆ ಬಂದು ಗುರುಗುಂಟಾದಿಂದ ಲಿಂಗಸುಗೂರಿಗೆ ಹೋಗಲು ಬಸ್ ಕಾಯುವ ಪರಿಸ್ಥಿತಿ ಇದೆ. ದಿನನಿತ್ಯ ಆಟೋಗಳಿಗೆ ನೂರಾರು ರೂ. ಖರ್ಚು ಮಾಡಬೇಕಾಗಿದೆ.
ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ದುಬಾರಿ ಆಗುತ್ತಿದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಆಗುತ್ತಿಲ್ಲ. ಐದಬಾವಿ ಗ್ರಾಮಕ್ಕೆ ಬೆಳಗ್ಗೆ 08 ಗಂಟೆಗೆ ಮಧ್ಯಾಹ್ನ 02 ಗಂಟೆಗೆ ಸಂಜೆ 05.30 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಐದಬಾವಿ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು ಮನವಿ ಪತ್ರದ ಮೂಲಕ ಡಿಪೋ ಮ್ಯಾನೇಜರ್ಗೆ ಒತ್ತಾಯಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಜಿಲ್ಲಾಧ್ಯಕ್ಷ ಅಮರೇಶ ನಾಯಕ ಐದಬಾವಿ, ಗ್ರಾಮ ಪಂಚಾಯ್ತಿ ಸದಸ್ಯ ನಂದಪ್ಪ ಬೆನಕನಹಳ್ಳಿ, ವಿದ್ಯಾರ್ಥಿಗಳಾದ ಗಂಗಪ್ಪ, ಸಲಿಂಸಾಬ್, ಚನ್ನಯ್ಯ, ಜಹೀರ್, ಮಾಳಪ್ಪ, ಮೌನೇಶ, ಬಸವರಾಜ, ಖಾಸಿಂಸಾಬ್, ಚನ್ನಪ್ಪ, ವಿದ್ಯಾರ್ಥಿನಿಯರಾದ ಚನ್ನಮ್ಮ, ಸವಿತಾ, ಖಾಸಿಂಬಿ, ಮುತ್ತಮ್ಮ, ಮಾಳಮ್ಮ, ಮರೆಮ್ಮ, ದ್ಯಾಮಮ್ಮ, ರೇಣುಕಾ, ಅಂಬಿಕಾ, ಶಾರದಾ, ಚೈತ್ರಾ, ಭ್ಯಾಗ್ಯಶ್ರೀ, ಚನ್ನಮ್ಮ ಸೇರಿದಂತೆ ಅನೇಕರಿದ್ದರು.