ಬಳ್ಳಾರಿ

ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳುವಂತೆ ಒತ್ತಾಯಿಸಿ ಮನವಿ

ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳುವಂತೆ ಒತ್ತಾಯಿಸಿ ಮನವಿ

ಲೋಕದರ್ಶನವರದಿ

 ಕಂಪ್ಲಿ21ಸಮರ್ಪಕವಾಗಿ ದಾಖಲೆಗಳನ್ನು ಪರಿಶೀಲಿಸದೆ ಅಮಾಯಕ ರೈತನಿಗೆ ಸಾಲ ಮಂಜೂರು ಮಾಡಿ, ಪೂರ್ಣ ಹಣ ನೀಡದ ಬ್ಯಾಂಕ್ ವ್ಯವಸ್ಥಾಪಕರು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಕಿಸಾನ್ ಜಾಗೃತಿ ವಿಕಾಸ್ ಸಂಘದ ಅಧ್ಯಕ್ಷ ಪಿ.ಯುಗಂಧರ ನಾಯ್ಡು ಒತ್ತಾಯಿಸಿದರು.

      ತಾಲೂಕಿನ ಮೆಟ್ರಿ ಗ್ರಾಮದ ಕನರ್ಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಕೃಷ್ಣ ಅವರಿಗೆ, ಸೋಮವಾರ ಬಳ್ಳಾರಿಯ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಿಗೆ ಬರೆದ ಮನವಿ ಸಲ್ಲಿಸಿ, ಕಳೆದ ಒಂಬತ್ತು ವರ್ಷಗಳ ಹಿಂದೆ ಶ್ರೀರಾಮರಂಗಾಪುರದ ಹರಿಜನ ಶಿವಪ್ಪ ಎನ್ನುವವರಿಗೆ ಅವರ ತಂದೆ ಹೊನ್ನೂರಪ್ಪ ಅವರ ಜಮೀನಿನ ಮೇಲೆ ದಾಖಲೆಗಳನ್ನು ಪರಿಶೀಲಿಸದೆ ಒಂದು ಲಕ್ಷ ರೂ.ಗಳನ್ನು ಅಂದಿನ ಬ್ಯಾಂಕ್ ವ್ಯವಸ್ಥಾಪಕರು ಸಾಲ ಮಂಜೂರು ಮಾಡಿರುತ್ತಾರೆ. ಸಾಲದ ಮೊತ್ತ ನೀಡುವಾಗ ಲಂಚ ಪಡೆದು ನೀಡಿರುತ್ತಾರೆ. ಈಗ ಅಸಲು ಬಡ್ಡಿ ಸೇರಿ 3.20ಲಕ್ಷ ರೂ.ಗಳಾಗಿದ್ದು, ಈ ಹಣ ವಸೂಲಾತಿಗಾಗಿ ಅಮಾಯಕ ರೈತನ ಮೇಲೆ ನಾನಾ ಕಲಂಗಳಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೀರಿ. ಅಂದು ಲಂಚ ಪಡೆದು ಸಾಲ ನೀಡಿ, ಪೂರ್ಣ ಹಣ ಕೊಡದ ಬ್ಯಾಂಕ್ ವ್ಯವಸ್ಥಾಪಕರು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವೇ ಅಂದು ರೈತನಿಗೆ ಮಂಜೂರಾದ ಒಂದು ಲಕ್ಷ ರೂ.ಗಳ ಸಾಲವನು ಮಾತ್ರ ಹಿಂದುರಿಗಿಸಲು ರೈತನಿಗೆ ಅವಕಾಶ ಕೊಡಬೇಕು, ಆತನ ಮೇಲಿನ ದೂರನ್ನು ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವಲ್ಲಿ ಸಂಘದ ಕಾರ್ಯದಶರ್ಿ ವಿರುಪಾಕ್ಷಿ, ರಾಜ್ಯ ಅಧ್ಯಕ್ಷ ದೊಡ್ಡ ಬಸಪ್ಪ, ರೈತರಾದ ಶಿವಪ್ಪ, ಸೂರ್ಯ ಇತರರಿದ್ದರು. 


ಸುದ್ದಿ ಓದಿ