ಬಳ್ಳಾರಿ

ರೈತರಿಗೆ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ

ರೈತರಿಗೆ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ

ಬಳ್ಳಾರಿ 08: ತಾಲ್ಲೂಕು ಕಛೇರಿಯಲ್ಲಿ ರೈತ-ಕೃಷಿಕಾಮರ್ಿಕರ ಸಂಘಟನೆಯ ನಿಯೋಗದಲ್ಲಿ ದಿ. 08ರಂದು ಎಸ್.ಪಿ.ಭೋಗಿ (ಉಪ ನಿದರ್ೇಶಕರು ತೋಟಗಾರಿಕೆ ಇಲಾಖೆ) ರವರಿಗೆ, ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ ಸಲ್ಲಿಸಲಾಯಿತು.ಮುಂಗಾರು ಬಿತ್ತನೆ ಚುರುಕು ಪಡೆಯುತ್ತದೆ ಆದರೆ, ಮೆಣಸಿನಕಾಯಿ ಬಿತ್ತನೆ ಬೀಜ ಸಿಗದೇ ರೈತರು ಪರದಾಡುತ್ತಿದ್ದಾರೆ. ಗೋದಾಮಿನಲ್ಲಿ ಮೆಣಸಿನಕಾಯಿ ಬೀಜ ಸ್ಟಾಕ್ ಇದೆ, ಆದರೆ ಅದು ಕಾಳ ಸಂತೆಕೋರರಿಗೆ ಮಾರಾಟಮಾಡಲಾಗುತ್ತಿದೆ. ಒಂದು ಕೇ.ಜಿ ಮೆಣಸಿನಕಾಯಿ ಬಿತ್ತನೆ ಬೀಜದ ಬೆಲೆ ರೂ.50,000 ಇರುವ ಬೆಲೆಯನ್ನು ಕಾಳಸಂತೆಕೋರರು ರೂ. 1,30,000 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿದರ್ೇಶಕರು ಕಾಳಸಂತೆಕೋರರ ಮೇಲೆ ಸೂಕ್ತ ಕ್ರಮಕೈಗೊಂಡು ರೈತರಿಗೆ ಅವಶ್ಯಕವಿರುವಷ್ಟು ಮೆಣಸಿನಕಾಯಿ ಬಿತ್ತನೆ ಬೀಜ ಕಡಿಮೆ ದರದಲ್ಲಿ ವಿತರಿಸಬೇಕೆಂದು ರೈತ-ಕೃಷಿಕಾಮರ್ಿಕರ ಸಂಘಟನೆ (ಖಏಖ) ಬಳ್ಳಾರಿ ಜಿಲ್ಲಾ ಸಮಿತಿ  ಆಗ್ರಹಿಸುತ್ತದೆ 

ಸುದ್ದಿ ಓದಿ