ಬಳ್ಳಾರಿ

ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ

ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ

ಬಳ್ಳಾರಿ 15:  ಇಂದು ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಬಳ್ಳಾರಿ ತಾಲ್ಲೂಕು ಕಛೇರಿ ಬಳಿ ನೂರಾರು ರೈತರೊಂದಿಗೆ ಪ್ರತಿಭಟಿಸಲಾಯಿತು. ನಿನ್ನೆ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಳ್ಳಾರಿಗೆ ನೂರಾರು ರೈತರು ಮೆಣಸಿಕಾಯಿ ಬಿತ್ತನೆ ಬೀಜ ಖರೀದಿಸಲು ಬಂದಾಗ ಪೋಲೀಸರು ಅಮಾಯಕ ರೈತರ ಮೇಲೆ ಲಾಠಿ ಏಟು ಹೊಡೆದದಿರುವುದನ್ನು (ಖಏಖ) ಬಳ್ಳಾರಿ ಜಿಲ್ಲಾ ಸಮಿತಿ ಉಗ್ರವಾಗಿ ಖಂಡಿಸಲಾಯಿತು. ಈ ಕೂಡಲೇ ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಸಮಸ್ಯೆಯನ್ನು ಪರಿಹರಿಸಿ ರೈತರಿಗೆ ಸಮರ​‍್ಕವಾಗಿ ವಿತರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.  

ಪ್ರತಿಭಟನೆಯನ್ನು ಉದ್ದೇಶಿಸಿ ಖಏಖ ಜಿಲ್ಲಾ ಕಾರ್ಯದರ್ಶಿಗಳಾದ ಈ.ಹನುಮಂತಪ್ಪ ಮಾತನಾಡುತ್ತಾ- ಮುಂಗಾರು ಬಿತ್ತನೆ ಚುರುಕು ಪಡೆಯುತ್ತದೆ ಆದರೆ, ಮೆಣಸಿನಕಾಯಿ ಬಿತ್ತನೆ ಬೀಜ ಸಿಗದೇ ರೈತರು ಪರದಾಡುತ್ತಿದ್ದಾರೆ. ಗೋದಾಮಿನಲ್ಲಿ ಮೆಣಸಿನಕಾಯಿ ಬೀಜ ಸ್ಟಾಕ್ ಇದೆ, ಆದರೆ ಅದು ಕಾಳ ಸಂತೆಕೋರರಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಕೇ.ಜಿ ಮೆಣಸಿನಕಾಯಿ ಬಿತ್ತನೆ ಬೀಜದ ಬೆಲೆ ರೂ.50,000 ಇರುವ ಬೆಲೆಯನ್ನು ಕಾಳಸಂತೆಕೋರರು ರೂ.1,30,000 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ನಿನ್ನೆ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಳ್ಳಾರಿಗೆ ನೂರಾರು ರೈತರು ಮೆಣಸಿಕಾಯಿ ಬಿತ್ತನೆ ಬೀಜ ಖರೀದಿಸಲು ಬಂದಾಗ ಪೋಲೀಸರು ಅಮಾಯಕ ರೈತರ ಮೇಲೆ ಲಾಠಿ ಏಟು ಹೊಡೆದದಿರುವುದನ್ನು (ಖಏಖ) ಬಳ್ಳಾರಿ ಜಿಲ್ಲಾ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಈಗಾಗಲೇ ಕೊರೋನಾ ಮಹಾಮಾರಿಯು ಹಳ್ಳಿ-ನಗರಗಳಿಗೂ ಹರಡಿರುವುದರಿಂದ ಸರ್ಕಾರವೇ ಜನಗಳು ನಗರಕ್ಕೆ ಬರಬಾರದು ಎಂದು ಆದೇಶಿಸಿರುವುದರಿಂದ, ರೈತರು ಬಳ್ಳಾರಿಗೆ ಬರದಂತೆ ಹಳ್ಳಿಯಲ್ಲೇ ರೈತ ಸಂಪರ್ಕ ಕೇಂದ್ರದ ಮೂಲಕ ಮೆಣಸಿನಕಾಯಿ ಬಿತ್ತನನೆ ಬೀಜ ರೈತರಿಗೆ  ಸಿಗುವಂತೆ ವಿತರಿಸಲು ಕೃಷಿ ಇಲಾಖೆಗೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಆದೇಶಿಸಬೇಕೆಂದು ಮನವಿ. 

ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಕಾಳಸಂತೆಕೋರರ ಮೇಲೆ ಸೂಕ್ತ ಕ್ರಮಕೈಗೊಂಡು ರೈತರಿಗೆ ಅವಶ್ಯಕವಿರುವಷ್ಟು ಮೆಣಸಿನಕಾಯಿ ಬಿತ್ತನೆ ಬೀಜ ಕಡಿಮೆ ದರದಲ್ಲಿ ವಿತರಿಸಬೇಕೆಂದು ರೈತ-ಕೃಷಿಕಾರ್ಮಿಕರ ಸಂಘಟನೆ ಖಏಖ ಬಳ್ಳಾರಿ ಜಿಲ್ಲಾ ಸಮಿತಿ  ಆಗ್ರಹಿಸುತ್ತದೆ. 

ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು ಮೆಣಸಿಕಾಯಿ ಬಿತ್ತನೆ ಬೀಜವನ್ನು 5 ಹೋಬಳಿ ಕೇಂದ್ರಗಳಾದ ಕುರುಗೋಡು, ಕೋಳೂರು, ಮೋಕ, ರೂಪನಗುಡಿ, ಕೊರ‌್ಲಗುಂದಿ ಗಳಿಗೆ ಸೋಮವಾರದೊಳಗೆ ವಿತರಿಸುತ್ತೇವೆಂದು ಅಧಿಕಾರಿಗಳು ಖಏಖ ರೈತ ಮುಖಂಡರಿಗೆ ತಿಳಿಸಿದರು. 

ಈ ಪ್ರತಿಭಟನೆಯಲ್ಲಿ ಖಏಖ ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸಣ್ಣ ಮತ್ತು ರೈತರು ಭಾಗವಹಿಸಿದ್ದರು. 


ಸುದ್ದಿ ಓದಿ