ಬಳ್ಳಾರಿ

ಕುಡಿಯುವ ನೀರು ಒದಗಿಸಿ ಕೊಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಕುಡಿಯುವ ನೀರು ಒದಗಿಸಿ ಕೊಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಲೋಕದರ್ಶನ ವರದಿ  


ಮರಿಯಮ್ಮನಹಳ್ಳಿ 04: ಶಾಶ್ವತ ಕುಡಿಯುವ ನೀರನ್ನು ಒದಗಿಸಿ ಕೊಡುವಂತೆ ಒತ್ತಾಯಿಸಿ ವಿಜಯನಗರ ಅಪರ ಜಿಲ್ಲಾಧಿಕಾರಿ ಮೋಹನ ಅವರಿಗೆ ಮರಿಯಮ್ಮನಹಳ್ಳಿ ಸಾರ್ವಜನಿಕರು ಮನವಿ ಸಲ್ಲಿಸಿದರು.  

ಮರಿಯಮ್ಮನಹಳ್ಳಿ ಪಟ್ಟಣದ ಜನಸಂಖ್ಯೆ ಬೆಳೆಯುತ್ತಿದ್ದು ಕೂಗಳತೆ ದೂರದಲ್ಲಿ ತುಂಗಭದ್ರಾ ಆಣೆಕಟ್ಟು ಇದ್ದರೂ ಸಮರ​‍್ಕವಾಗಿ ಕುಡಿಯುವ ನೀರು ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.   

ಮರಿಯಮ್ಮನಹಳ್ಳಿ ಮುಖ್ಯ ವೃತ್ತದ ಮೂಲಕ ಹಾದು ಹೋಗುತ್ತಿರುವ ಪಾವಗಡ ಕುಡಿಯುವ ನೀರಿನ ಯೋಜನೆಯಿಂದ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸಿ ಕೊಡುವಂತೆ ಒತ್ತಾಯಿಸಲಾಯಿತು.  

ಮನವಿ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.  

ಈ ಸಂದರ್ಭದಲ್ಲಿ ಮುಖಂಡರಾದ ಬದರಿನಾಥ ಶೆಟ್ಟಿ, ಹೆಚ್ ಗೋಪಾಲ, ಕಾಳಿ ಮಂಜುನಾಥ, ಎಂ.ವೆಂಕಟೇಶ, ವಿ.ವಿಜಯಕುಮಾರ, ಸಮತಾ ಸೈನಿಕ ದಳಾದ ಎಲ್ ಮಂಜುನಾಥ, ಡಿ ಮಹಾಂತೇಶ, ಪತ್ರಕರ್ತರಾದ ಗೌಳೇರ ನಾಗರಾಜ್, ಸಿ.ಪ್ರಕಾಶ ಇದ್ದರು. 


ಸುದ್ದಿ ಓದಿ