ಬಳ್ಳಾರಿ

ನೀರು ಸರಬರಾಜು ನಿರ್ವಾಹಕರಿಗೆ ನೇರ ವೇತನ ನೀಡಲು ಸಿಎಂಗೆ ಮನವಿ

ನೀರು ಸರಬರಾಜು ನಿರ್ವಾಹಕರಿಗೆ ನೇರ ವೇತನ ನೀಡಲು ಸಿಎಂಗೆ ಮನವಿ

ಲೋಕದರ್ಶನ ವರದಿ 

ಬಳ್ಳಾರಿ 03: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ದುರಸ್ಥಿ ಮತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿರುವ 131ನೌಕರರಿಗೆ ಹೊರಗುತ್ತಿಗೆ ನೇರವಾಗಿ ವೇತನ ಬಟವಾಡೆ ನೀಡಲು ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.  


ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 25ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಟಿಎಸ್ ಮಾರೆಪ್ಪ, ಕೃಷ್ಣ ಮತ್ತು ಎಸ್‌.ಲೋಕೇಶ್ ಇವರ ನೇತೃತ್ವ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಕುರಿತು ವಿನಂತಿಸಿದ್ದಾರೆ. 1997 ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅಂದಿನ ನಗರಸಭೆಯು ನಿರ್ವಹಣಾ ಕಾರ್ಯ ವಹಿಸಿಕೊಂಡಿತ್ತು. ನಗರ ಭೂ ವಿಸ್ತೀರ್ಣ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ನಿರ್ವಹಣೆಯಲ್ಲಿ ಇದೀಗ 131 ಜನರು ಹೊರಗುತ್ತಿಗೆ ಕಾರ್ಮಿಕರ ಮೂಲಕ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರವು ಕೂಡ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಬಟವಾಡೆ ಮಾಡುವಂತೆ ಆದೇಶಿಸಿತ್ತು. ಆ ಪ್ರಕಾರ ನೀರು ಸರಬರಾಜು ವ್ಯವಸ್ಥೆ, ದುರಸ್ತಿ ಮತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಪೌರಾಡಳಿತ ನಿರ್ದೇಶನಾಲಯ ಮತ್ತು ಮಹಾನಗರ ಪಾಲಿಕೆ ನಿಯಮದನ್ವಯ ನೇರವಾಗಿ ವೇತನ ಸಂದಾಯ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳು ಸಂಬಂಧಿಸಿದ ಇಲಾಖೆಗೆ ಸೂಕ್ತ ನಿರ್ದೇಶನ ಹಾಗೂ ಶಿಫಾರಸ್ಸು ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.  


ಈ ಸಂದರ್ಭದಲ್ಲಿ ದೇವೇಂದ್ರ​‍್ಪ, ದಶರಥ, ಸೋಮಲಿಂಗಪ್ಪ, ಅಶೋಕ್, ಗಂಗಾಧರ್, ನಾಗರಾಜ, ಮಹೇಶ್, ಹೇಮಂತರಾಜ್, ರವಿ, ಲೋಕೇಶ್, ರಾಜು ಇನ್ನಿತರರು ಇದ್ದರು. 


ಸುದ್ದಿ ಓದಿ