ಕಾಲುವೆಯಲ್ಲಿ ಹೂಳು ತೆಗೆಯುವುದರಿಂದ ರೈತರ ಹೊಲಗಳಿಗೆ ನೀರು ಸುಲಭ ಉಪಾಧ್ಯಕ್ಷ ಟಿ ಗಂಗಣ್ಣ
ಲೋಕದರ್ಶನ ವರದಿ
ಕಂಪ್ಲಿ 13 : ವಿಜಯನಗರ ಕಾಲುವೆಯ ಕಂಪ್ಲಿ ಕಾಲುವೆಯ ಕಂಪ್ಲಿ ಭಾಗದಲ್ಲಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದ ಕಸ,ಗಿಡ, ಬೆಲಬಳ್ಳಿ, ಹಸಿರೆಲೆ ಸಸ್ಯಗಳು, ತ್ಯಾಜ್ಯ ಸೇರಿದಂತೆ ಹೂಳನ್ನು ತೆರವುಗೊಳಿಸುವ ಕಾರ್ಯವನ್ನು ಸ್ವತಃ ಕಾಲುವೆ ವ್ಯಾಪ್ತಿಯ ರೈತರೇ ಸ್ವಯಂ ಪ್ರೇರಿತರಾಗಿ ಶ್ರಮಧಾನ ಮಾಡುವ ಮೂಲಕ ಕೈಗೊಂಡಿದ್ದಾರೆ ನಂತರ ಕಂಪ್ಲಿ ನೀರು ಬಳಕೆದಾರ ಸಹಕಾರ ಸಂಘದ ಉಪಾಧ್ಯಕ್ಷ ಟಿ ಗಂಗಣ್ಣ ಮಾತನಾಡಿ ಭರದಿಂದ ಕೆಲಸ ಸಾಗಿದ್ದು, ಮೂರು ದಿನಗಳಲ್ಲಿ ಕೆಲಸ ಮುಗಿಸುವ ಪಣತೊಟ್ಟಿದ್ದಾರೆ.ಕಾಲುವೆಯ ಕೊನೆ ಭಾಗದ ಜಮೀನುಗಳಿಗೆ ನೀರು ಸಮರ್ಕವಾಗಿ ಪೂರೈಕೆಯಾಗದ ಕಾರಣ ರೈತರು ಸ್ವಯಂ ಪ್ರೇರಣೆಯಿಂದ ಈ ಹೂಳು ತೆಗೆಯುವ ಕಾರ್ಯವನ್ನು ಕೈಗೊಂಡಿದ್ದು, 0.ಕಿ.ಮೀನಿಂದ ಕಾಲುವೆ ವ್ಯಾಪ್ತಿಯ ಸುಮಾರು ಒಂದು ದಿನಕ್ಕೆ 130 ಜನ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ಮೂರು ದಿನಕ್ಕೆ 390 ಜನ ಸುಡುವ ಬಿಸಿಲು, ಲೆಕ್ಕಿಸದೇ ನಿಗಧಿತ ಸಮಯದಲ್ಲಿ ಕಾರ್ಯವನ್ನು ಪೂರ್ಣಗೊಳಿಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಕಾಲುವೆಯ ಹೂಳು ತುಂಬಿದ್ದರಿಂದ ಕಾಲವು ಕೊನೆಯ ಭಾಗದ ಗ್ರಾಮಗಳ ಹೊಲ ಗದ್ದೆಗಳಿಗೆ ನೀರು ತಲುಪುತ್ತಿರಲಿಲ್ಲ. ಅದಕ್ಕೆ ರೈತರು ಜೊತೆಗೂಡಿ ಹೂಳು ತೆರವಿಗೆ ನಿರ್ಧರಿಸಿದ್ದಾರೆ. ಕಳೆದೆರಡು ದಿನಗಳಿಂದ ಹೂಳು ತೆಗೆಯುವ ಕಾರ್ಯ ನಡೆದಿದೆ.ರೈತರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾಲುವೆಯ ಕೆಲಸವನ್ನು ಮಾಡಿದ ನಂತರ ತಮ್ಮದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. 0.ಕಿ.ಮೀನಿಂದ 4.1 ಕಿ.ಮೀ ರೈತರು ಹೊಳು ತೆಗೆದಿದ್ದಾರೆ ಕಾಲುವೆಯಲ್ಲಿನ ಹೂಳು ಸಂಪೂರ್ಣವಾಗಿ ತೆರವಾಗಿದೆ ಕಂಪ್ಲಿ ಕೋಟೆ ಪ್ರದೇಶ, ಬೆಳಗೋಡುಹಾಳು,ಅರಳಿಹಳ್ಳಿಸಣಾಪುರ ಮಾಗಾಣಿ ವ್ಯಾಪ್ತಿಯ ಸುಮಾರು 2 ಸಾವಿರ ಎಕರೆಯಷ್ಟು ಭತ್ತದ ಬೆಳೆಗೆ ನೀರಿನ ಅನುಕೂಲವಾಗಲಿದೆ. ನೀರು ಬಳಕೆದಾರ ಸಹಕಾರ ಸಂಘದ ಕಾರ್ಯದರ್ಶಿ ಎಂ ಅಶೋಕ ಬೆಳಗೋಡ ನೀರು ಬಳಕೆದಾರ ಸಹಕಾರ ಸಂಘದ ಅಧ್ಯಕ್ಷ ಗೋಂದಿ ಮಂಜುನಾಥ ಸದಸ್ಯರಾದ ವಿರುಪಾಕ್ಷಿ ಬಸವರಾಜ ಸೇರಿ ಅನೇಕ ರೈತರಿದ್ದರು