ಎಲ್ಲಾ ವಾದ್ಯ ಮೇಳ ಕಲಾವಿದರನ್ನು ಕನ್ನಡ ರಾಜ್ಯೋತ್ಸವ ದಿನ ಸ್ಮರಿಸಿ: ತಾಳಕೇರಿ
ಜಮಖಂಡಿ03: ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಸಾಹಿತಿಗಳು, ಬೈಲಾಟ, ಭಜನಾ ಕಲಾವಿದರು ಹಾಗೂ ಕರಡಿ ಮೇಳ ಸೇರಿದಂತೆ ಎಲ್ಲ ವಾದ್ಯಮೇಳ ಕಲಾವಿದರನ್ನು ಕನ್ನಡ ರಾಜ್ಯೋತ್ಸವ ದಿನದಂದು ಸ್ಮರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಹೇಳಿದರು.
ಸುಸಂಸ್ಕೃತ ಸಂಸ್ಕಾರ ಸೇವಾ ಮಂಚ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಾವಳಗಿ ವಲಯ ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗಾಗಿ ಸಾವಳಗಿ ಗ್ರಾಮದ ನಾಡ ಕಾರ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪಧರ್ೆಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ಇಂದಿನ ವಿದ್ಯಾಥರ್ಿಗಳು ಕೇವಲ ಅಕ್ಷರ ಸಾಕ್ಷರರಾದರೆ ಸಾಲದು. ಬದಲಾಗಿ ಪರಿಸರ, ಆರೋಗ್ಯ, ಕಾನೂನು, ಜಲ ಸೇರಿದಂತೆ ದಿನನಿತ್ಯದ ಜೀವನದಲ್ಲಿ ಬರುವ ಎಲ್ಲ ಕ್ಷೇತ್ರಗಳ ಸಾಕ್ಷರರಾಗಬೇಕು ಎಂದರು.
ತಿಕೋಟಾ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಮಾತನಾಡಿ, ಶಿಲೆ ತನ್ನಿಂದತಾನೆ ಮೂತರ್ಿಯಾಗಲು ಸಾಧ್ಯವಿಲ್ಲ. ಶಿಲೆಯಿಂದಾದ ಮೂರ್ತಿ ಗೋಚರಿಸುತ್ತದೆ. ಆದರೆ,ಮೂರ್ತಿ ಕೆತ್ತಿದ ಶಿಲ್ಪಿ ಗೋಚರಿಸುವುದಿಲ್ಲ. ಹಾಗೆಯೇ ಒಬ್ಬ ವಿದ್ಯಾರ್ಥಿ ಯ ವ್ಯಕ್ತಿತ್ವ ರೂಪಿಸುವಲ್ಲಿ ತ್ಯಾಗ ಮಾಡಿದವರು ಗೋಚರಿಸುವುದಿಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಮೊಬೈಲ್ ಫೋನ್ನಿಂದ ದೂರ ಉಳಿದು ಕಲಿಕೆಯಲ್ಲಿ ತೊಡಗಿಸಿಕೊಂಡು ಕಲಿತ ಶಾಲೆಯ ಹಾಗೂ ತಂದೆ-ತಾಯಿಗಳ ಕೀರ್ತಿ ತರಬೇಕು ಎಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮೋಹನ ಜಾಧವ ಮಾತನಾಡಿ, ಕನ್ನಡ ಸಂಸ್ಕೃತಿ ಶ್ರೀಮಂತವಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ್ದು ಪುಣ್ಯ. ನಮ್ಮತನ ಹಾಗೂ ಕನ್ನಡ ನೆಲ-ಜಲ ಉಳಿಸುವ ಕೆಲಸ ಮಾಡಬೇಕು ಎಂದರು. ಬಸವರಾಜ ಹೊನವಾಡ, ಗ್ರಾಮ ಪಂಚಾಯ್ತಿ ಸದಸ್ಯ ಸುಜಿತಗೌಡ ಪಾಟೀಲ, ಬಿಜೆಪಿ ಧುರೀಣ ಬಸವರಾಜ ಕಲೂತಿ, ಪತ್ರಕರ್ತ ವಿನೋದ ಲೋಣಿ, ಮುಖ್ಯ ಶಿಕ್ಷಕ ಶಂಕರ ಲಮಾಣಿ, ಎ.ಪಿ. ಬಾಹುಬಲಿ, ಶಿಂಧೆ ಮತ್ತಿತರರು ಇದ್ದರು. ಪಂಡಿತ ಉಪಾಧ್ಯೆ ನಿರೂಪಿಸಿದರು. ಶಿಕ್ಷಕ-ಶಿಕ್ಷಕಿಯರು ರಸಪ್ರಶ್ನೆ ಸ್ಪಧರ್ೆಯ ಯಶಸ್ಸಿಗೆ ಶ್ರಮಿಸಿದರು.