ಸಮಾನ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಸಂಸ್ಕಾರ ಅವಶ್ಯ: ಶ್ರೀಗಳು
ಬೈಲಹೊಂಗಲ 26: ನಾಗರಿಕ ಸಮಾಜದಲ್ಲಿ ಮನುಷ್ಯನಿಗೆ ಧಾರ್ಮಿಕ ಸಂಸ್ಕಾರ ಪಡೆದಾಗ ಮಾತ್ರ ವರ್ಣ, ಜಾತಿರಹಿತ ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಎಂದು ನಾಗನೂರ-ಬೆಳಗಾವಿ ರುದ್ರಾಕ್ಷಿಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಮಹಾಸ್ವಾಮಿಜಿ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಲಿಂಗೈಕ್ಯ ಗಂಗಮ್ಮ ಸಿದ್ದನಗೌಡರ ಹಾಗೂ ದಾಸೋಹಿ ಯಮನಮ್ಮ ಮುನವಳ್ಳಿ ಅವರ ಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಕೆಲ ಧರ್ಮದಲ್ಲಿ ಮಾರ್ಗದರ್ಶನ ಹಾಗೂ ಅವರಿಗೆ ಬೇಕಾದ ಸಾಹಿತ್ಯ ಧಾರ್ಮಿಕ ಆಚಾರ ವಿಚಾರಗಳ ಕೊರತೆಯಲ್ಲಿಯೂ ತಮ್ಮ ಧರ್ಮದ ಪಾಲನೆಗೆ ಕಟಿಬದ್ದರಾಗಿದ್ದರು, ಲಿಂಗಾಯತ ಧರ್ಮದಲ್ಲಿ ಧರ್ಮ ಗುರು ಬಸವಣ್ಣನವರು ಧರ್ಮ ಸ್ಥಾಪಿಸಿ ಪಂಚಾಚಾರ್ಯ, ಅಷ್ಟಾವರಣ ಹಾಗೂ ವಚನ ಸಾಹಿತ್ಯ ನೀಡಿ ಧರ್ಮದ ಉಳಿವಿಗಾಗಿ ಸರ್ವತ್ಯಾಗಿಯಾಗಿದ್ದ ಶರಣ ಆಸೆಯಂತೆ ನಾವೆಲ್ಲರೂ ಲಿಂಗಧಾರಿಗಳಾಗಿ, ಮೂಢಾಚರಣೆಯನ್ನು ಬಿಟ್ಟು ನಿಜ ಆಚರಣೆ ಕೈಗೊಳ್ಳಬೇಕಾಗಿದೆ ಎಂದರು.
ಬಿಡುವಿಲ್ಲದ ಜೀವನದಲ್ಲಿ ಧಾರ್ಮಿಕ ಅಚಾರ ವಿಚಾರಗಳಿಂದ ಕೆಲವರು ಹಿಂದೆ ಉಳದಿದ್ದರಿಂದ ಸಮಜದಲ್ಲಿ ಜಾತಿ ಮತ ಪಂತ ಎಂಬ ಬೆದ ಭಾವಗಳಲ್ಲಿ ಬದುಕಿ ಸಂಸ್ಕಾರರಹಿತವಾಗಿ ಮಾನವಿಯ ಮೌಲ್ಯಗಳಿಗೆ ಪೆಟ್ಟು ಬಿಳುತ್ತಿರುವ ಇಂತಹ ದಿನಮಾನಗಳಲ್ಲಿ ತಮ್ಮ ಮನೆಯ ಹಿರಿಯರ ಸ್ಮರಣೋತ್ಸವಕ್ಕೆ ಪೂಜ್ಯರನ್ನು ಕರೆಯಿಸಿ ಅವರಿಂದ ಸಮಾಜಕ್ಕೆ ಸಂಸ್ಕಾರದ ಅರಿವು ಮುಡಿಸುವ ಕಾರ್ಯ ಮಾಡುತ್ತಿರುವ ಸಿದ್ದನಗೌಡರ ಕುಟುಂಬದ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಿಂಗಾಯತ ಬಸವ ಸೇನೆಯ ಮುಖಂಡ ಶಂಕರ ಗುಡಸ ಮಾತನಾಡಿ, ವಿದ್ಯೆ ಕಲಿತ ಬುದ್ದಿವಂತ ಜನರೆ ತಂದೆ ತಾಯಿಗಳನ್ನ ಹಾಗೂ ಮನೆಯ ಹಿರಿಯರನ್ನ ವೃದ್ದಾಶ್ರಮಕ್ಕೆ ಸೇರಿಸುವದು ಅವರ ಕಾಳಜಿ ಇಲ್ಲದೆ ಸ್ವಾರ್ಥದಿಂದ ಬದಕುವ ಜನರ ಮಧ್ಯದಲ್ಲಿ ತಮ್ಮ ತಾಯಿಯ ಹಾಗೂ ಅಮ್ಮನ ಸ್ಮರಣೋತ್ಸವವನ್ನು ಲಿಂಗಾಯತ ನಿಜಾಚರಣೆಯೊಂದಿಗೆ ಅಚರಿಸುವದರೊಂದಿಗೆ ತಮ್ಮ ವೈಯಕ್ತಿಕ ಕಾರ್ಯಕ್ರಮ ಮಾಡಿಕೊಳ್ಳದೆ ಗ್ರಾಮದ ಕಾರ್ಯಕ್ರಮ ಮಾಡಿ ಜನರಿಗೆ ಆಧ್ಯಾತ್ಮಿಕ ಮತ್ತು ಅನ್ನಸಂತರೆ್ಣ ಮಾಡುವ ಮೂಲಕ ಗ್ರಾಮದಲ್ಲಿ ಧಾರ್ಮಿಕ ಕ್ರಾಂತಿಗೈದ ಸಿದ್ದನಗೌಡರ ಕುಟುಂಬದ ಕಾರ್ಯ ಶ್ಲಾಘನೀಯ ಎಂದರು.
ಶಿಕ್ಷಕರಾದ ಮಡಿವಾಳಪ್ಪ ಸಂಗೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವ ಬಳಗದ ದೇಮಪ್ಪ ಸಂಗೋಳ್ಳಿ, ಮಡಿವಾಳಪ್ಪ ಕೊರಿಕೊಪ್ಪ, ಗೋಪಾಲ ಚಿಕ್ಕೊಪ್ಪ, ಎಸ್.ಬಿ.ಸಿದ್ದನಗೌಡರ, ಚಿನ್ನಪ್ಪ ಹುಂಬಿ, ನಾಗಪ್ಪ ಮಾಕಿ, ಫಕೀರ್ಪ ದುಗ್ಗಾಣಿ, ರಾಜು ಮೂಗಬಸವ, ದೇಮಪ್ಪ ಯರಡಾಲ, ಮಹಾಂತೇಶ ಮಬ್ಬನೂರ,ಸೋಮಲಿಂಗಪ್ಪ ಕೋಟಗಿ ಅವರನ್ನು ಸತ್ಕರಿಸಲಾಯಿತು.
ಮಹಾಂತೇಶ ಮತ್ತಿಕೊಪ್ಪ, ಡಾ.ಎಸ್.ಬಿ.ಮುಲಿಮನಿ, ಸೋಮಲಿಂಗಪ್ಪ ಮೆಳ್ಳಿಕೇರಿ, ಮೋಹನ ವಕ್ಕುಂದ,ಗೌಡಪ್ಪ ಹೊಸಮನಿ, ಪ್ರಕಾಶ ಭರಮಗೌಡರ, ಸಂಗಪ್ಪ ಶಿಂತ್ರಿ, ಅಶೋಕ ವಿವೇಕಿ, ಮಲ್ಲಿಕಾರ್ಜುನ ವಕ್ಕುಂದ, ರಾಚಪ್ಪ ಬೋಳೆತ್ತಿನ, ಶಿವು ಮಾಕಿ, ರಾಜು ಬಾಳೆಕುಂದರಗಿ, ದೇಮಪ್ಪ ಬೂದಿಹಾಳ, ಮಲ್ಲಿಕಾರ್ಜುನ ಬೋಳೆತ್ತಿನ, ರಾಜು ಸಂಗಣ್ಣವರ, ಮಲ್ಲಿಕಾರ್ಜುನ ಹುರಕಡ್ಲಿ, ಮಲ್ಲಿಕಾರ್ಜುನ ಕರಡಿಗುದ್ದಿ, ದುಂಡಪ್ಪ ಪಣದಿ, ಸೋಮಲಿಂಗಪ್ಪ ಹುಂಬಿ, ಈರ್ಪ ಹಡಪದ, ಧರೆಪ್ಪ ಜೊತಗನ್ನವರ, ಸಂಜು ಜುಮೇತ್ರಿ, ದೀಲಾವಾರ ದುಪದಾಳ, ದಾದಾಫೀರ ಶೇಖ, ಮುನೀರ ಶೇಖ, ಕಿರಣ ಸಂಗಣ್ಣವರ, ಮುತ್ತು ಸಣ್ಣಮನಿ, ಬಸವ ಬಳಗದ ಸಾವಿರಾರು ಜನ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬೃಹತ್ ಪಾದಯಾತ್ರೆ: ಗ್ರಾಮಕ್ಕೆ ಪ್ರಥಮ ಬಾರಿ ಶ್ರಾವಣ ಮಾಸದಲ್ಲಿ ಆಗಮಿಸಿದ್ದ ಡಾ.ಅಲ್ಲಮಪ್ರಭು ಸ್ವಾಮೀಜಿಯವರನ್ನು ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮದ ಹೆಣ್ಣು ಮಕ್ಕಳು ಆರತಿ ಬೆಳಗುವ ಮೂಲಕ ಬರಮಾಡಿಕೊಂಡು ಗ್ರಾಮದ ಪ್ರಮುಖ ಬಿದಿಗಳಲ್ಲಿ ಅದರಲ್ಲಿ ಹಡಪದ ಸಮಾಜದ ಓಣಿಯ ಮೂಲಕ ಪಾದಯಾತ್ರೆ ಕೈಗೊಂಡು ಮೂಢಾಚಾರಕ್ಕೆ ಅಂತ್ಯ ಹಾಡಿದ ಪೂಜ್ಯರನ್ನ ಹಡಪದ ಸಮಾಜ ಮತ್ತು ಮುಸ್ಲಿಂ ಸಮಾಜ ಮಸೀದಿಯ ಮುಂದೆ ಶ್ರೀಗಳನ್ನು ಸತ್ಕರಿಸಿದರು. ಗ್ರಾಮದ ಬಿದಿಯಲ್ಲಿ ನಡೆದ ಧಾರ್ಮಿಕ ಪಾದ ಯಾತ್ರೆಯಲ್ಲಿ ಎಲ್ಲ ಮನೆಗಳ ಹೆಣ್ಣು ಮಕ್ಕಳು ತಮಮ ಮನೆಯ ಮುಂದೆ ರಂಗೋಲಿ ಹಾಕಿ ಓಣಿಯನ್ನು ಶೃಂಗಾರಗೊಳಿಸಿ ಪೂಜ್ಯರನ್ನು ಬರಮಾಡಿಕೊಂಡು ಸತ್ಕಾರಿಸಿದರು. ಗ್ರಾಮದ ಉಳವಿ ಚನ್ನಬಸವೇಶ್ವರ, ಅರಳಿಕಟ್ಟಿ, ಮಡಿವಾಳೇಶ್ವರ ಹಾಗೂ ಯಲ್ಲಮ್ಮ ದೇವಿಯ ಭಜನಾ ಮಂಡಳಿಯಿಂದ ಭಜನೆ ಸೇವೆಗೈದರೆ ಗ್ರಾಮದ ಪಾದಯಾತ್ರೆಯ ಉದ್ದಕ್ಕು ಅರಿವೆ ಹಾಸಿ ಪುಷ್ಪ ವೃಷ್ಠಿಮಾಡಿ ಗ್ರಾಮದಲ್ಲಿ ದೊಡ್ಡದಾದ ಜಾತ್ರೆ ಜರಗುವಂತೆ ಮಾಡಿ ಸಾವಿರಾರು ಜನ ಪಾಲ್ಗೊಳ್ಳುವ ಮೂಲಕ ಶ್ರಾವಣ ಮಾಸದ ಧಾರ್ಮಿಕ ಪಾದಯಾತ್ರೆ ಯಶಸ್ವಿಯಾಗಿಸಿದರು.