ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ಸಿಗುತ್ತದೆ - ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ
ಹೂವಿನಹಡಗಲಿ 03: ಜೀವನದಲ್ಲಿ ಎಲ್ಲರಿಗೂ ನಿತ್ಯವೂ ಅನೇಕ ಒತ್ತಡ, ನೋವು ಮತ್ತು ಹಿಂಸೆ ಇರುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.
ಅವರು ಪಟ್ಟಣದ ಗವಿಸಿದ್ದೇಶ್ವರ 26ನೇ ವರ್ಷದ ಜಾತ್ರಾ ಮೊಹೋತ್ಸವದ 3ನೇ ದಿನದ ಸದ್ಭಾವನಾ - ಭಾವೈಕ್ಯ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ವಾತಾವರಣ ತುಂಬಾ ಕುಲಷಿತವಾಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಪುರಾಣ, ಕೀರ್ತನೆಗಳ ಮೂಲಕ ಮಹಾ ಪುರುಷ ಕಥೆಗಳನ್ನು ಈಗಿನ ಯುವ ಪೀಳಿಗೆಗೆ ತಿಳಿವುದರ ಮೂಲಕ ಪೂಜ್ಯರು ನಮನ್ನೆಲ್ಲಾ ಸರಿ ದಾರಿಗೆ ತರುತ್ತಾರೆ, ನಾವೆಲ್ಲರೂ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ ಎಂದು ಉದ್ಘಾಟನೆ ನುಡಿ ನುಡಿದರು.
ಈ ಕಾರ್ಯಕ್ರಮದಲ್ಲಿ ಜಿಬಿಆರ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಾಂತಮೂರ್ತಿ. ಬಿ. ಕುಲಕರ್ಣಿ ಧರ್ಮ ಮತ್ತು ಸಮನ್ವಯ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ಬಿಜಾಪುರ ಇಟಿಗಿಯ ಹಿರೇಮಠದ ಗುರುಶಾಂತ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇಳಕಲನ ಶರಣಬಸವೇಶ್ವರ ಶಾಸ್ತ್ರಿಗಳು ಶಿವಕೀರ್ತನೆ ನೆರೆವೇರಿಸಿದರು, ಮುಖ್ಯ ಅತಿಥಿಗಳಾಗಿ ಫಾ|| ಹೆನ್ರಿ ಮೋರನ್ಸ, ರಾಮಸ್ವಾಮಿ ಮಠದ ಡಾ|| ರಾಕೇಶಯ್ಯ ಸ್ವಾಮಿಗಳು, ಪುರಸಭೆ ಅಧ್ಯಕ್ಷ ವಾರದ ಗೌಸ ಮೊಹಿದ್ದೀನ್, ವಕೀಲರಾದ ಅಟವಾಳಗಿ ಕೊಟ್ರೇಶ್, ಚಂದ್ರನಾಯ್ಕ್, ಪುರಸಭೆ ಸದಸ್ಯ ಜ್ಯೋತಿ ಮಲ್ಲಣ್ಣ, ಟಿ.ಎ.ಪಿ.ಸಿ.ಎಂ.ಎಸ್.ಎನ್. ನಿರ್ದೇಶಕ ಪಾಟೀಲ ಬಸವನಗೌಡ, ರಾಜಗುರು ಪೆಟ್ರೋಲಿಯಂನ ಮಾಲಿಕ ಭರತ್ ಕುಮಾರ ಚೌಹಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಹೆಚ್.ಕೆ.ಮಹೇಶ್ ಸ್ವಾಗತಿಸಿದರು, ಅಯ್ಯನಗೌಡರ ಕೊಟ್ರಗೌಡ್ರು ಕಾರ್ಯಕ್ರಮ ನಿರೂಪಿಸಿದರು.