ಮಾರಿಕಾಂಬಾ ದೇವಸ್ಥಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಮುಂಡಗೋಡ 15: ಶರನ್ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಹಳೂರ ಓಣಿಯ ಶ್ರೀಮಾರಿಕಾಂಬಾ ದೇವಸ್ಥಾನದಲ್ಲಿ ಇಲ್ಲಿನ ಹಿರೇಮಠ ಸಂಸ್ಥಾನದ ವೇ.ಮೂ.ರುದ್ರಮುನಿ ಸ್ವಾಮಿಗಳ ಸಮ್ಮುಖದಲ್ಲಿ ದೇವಿಗೆ ವಿಶೇಷ ಪೂಜೆ, ಘಟಸ್ಥಾಪನೆ, ದೇವಿಯ ಪಾರಾಯಣ, ಮತ್ತು ಪ್ರವಚನ ಕಾರ್ಯಕ್ರಮಗಳು ಧಾರ್ಮಿಕ ವಿಧಿ-ವಿಧಾನದಿಂದ ರವಿವಾರ ಜರುಗಿದವು.
ಉತ್ಸವದ 9 ದಿನಗಳ ಕಾಲ ರುದ್ರಮುನಿ ಸ್ವಾಮಿಗಳಿಂದ ನಂದಾದೀಪದ ಎಣ್ಣೆ ಸೇವೆ ಸಮರ್ಿಸಲಾಗುವುದು. ಪ್ರತಿದಿನ ಬೆಳಗ್ಗೆ 8-30ರಿಂದ ಸಾಮೂಹಿಕ ಪಂಚಾಮೃತ ಅಭಿಷೇಕ, ಸಾಯಂಕಾಲ 7ಗಂಟೆಯಿಂದ ಕುಂಕುಮಾರ್ಚನೆ, ನೈವೇದ್ಯ, ಪ್ರಾರ್ಥನೆ ಸೇವೆ ನಡೆಯುವುದು. ನಂತರ ರಾತ್ರಿ 8ಗಂಟೆಯಿಂದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.