ಇಂಡಿ

ಧಾರ್ಮಿಕ ಪರಂಪರೆ ವಿಶ್ವಕ್ಕೆ ಮಾದರಿ: ಪಾಟೀಲ

ಧಾರ್ಮಿಕ ಪರಂಪರೆ ವಿಶ್ವಕ್ಕೆ ಮಾದರಿ:  ಪಾಟೀಲ
ಧಾನಮ್ಮ ದೇವಿ ಪುರಾಣ ಮಹೋತ್ಸವಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು.

ಇಂಡಿ08:  ಪೂರ್ವಜರ ಪರಂಪರೆಯಿಂದ ಸಂಸ್ಕಾರಯುತ ಬದುಕು ಕೊಡುವ ದೇಶ ಭಾರತ. ಭಾರತದಲ್ಲಿ ಧಾರ್ಮಿಕತೆಗೆ ವಿಶೇಷ ಸ್ಥಾನಮಾನ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ಅವರು ಗುರುವಾರ ಸಾಯಂಕಾಲ ಪಟ್ಟಣದ ಸಿಂದಗಿ ರಸ್ತೆಯ ಧಾನಮ್ಮ ದೇವಿ ದೇವಸ್ಥಾನದಲ್ಲಿ  ಆಯೋಜಿಸಿದ್ದ ಧಾನಮ್ಮದೇವಿ ಪುರಾಣ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. 

ಭಾರತದಲ್ಲಿ ಪ್ರತಿಯೊಬ್ಬರ ಮನಸ್ಸಿಗೆ ನೆಮ್ಮದಿ ಕೊಡಲೆಂದೇ ಪೂರ್ವಜರು ಲಕ್ಷಾಂತರ ಗುಡಿಗುಂಡಾರಗಳನ್ನು, ಮಠ ಮಂದಿರಗಳನ್ನು ನಿರ್ಮಿಸಿ ಧಾರ್ಮಿಕ ಪರಂಪರೆ ಎತ್ತಿ ಹಿಡಿದಿದ್ದಾರೆ. 

ಅವರು ಎತ್ತಿಹಿಡಿದಿರುವ ಧಾರ್ಮಿಕ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಅವರ ಪರಂಪರೆ ಮುಂದುವರೆಸಿದ್ದಾದರೆ ನಮಗೆ ನೆಮ್ಮದಿಯ ಜೀವನ ಲಭಿಸುತ್ತದೆ. ಶಾಂತಿ ಸಮಾಧಾನ ದೊರೆಯುತ್ತದೆ ಕೂಡಿ ಬಾಳುವ ಬದುಕು ಕಲಿಸಿಕೊಡುತ್ತವೆ ಎಂದರು. 

ಧಾನಮ್ಮದೇವಿ ಮಂದಿರದ ಬೆಳವಣಿಗೆಗೆ ಅಗತ್ಯವಿರುವ ಅನುದಾನ ನೀಡುವದಾಗಿ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ದೂರದ ಗುಡ್ಡಾಪೂರದಲ್ಲಿ ನೆಲೆಸಿರುವ ಧಾನಮ್ಮದೇವಿಗೆ ಹೋಗುವ ಭಕ್ತರಿಗಾಗಿಯೇ ಇಂಡಿ ಪಟ್ಟಣದ ಉದ್ದಿಮೇದಾರ ಅನೀಲ ಪ್ರಸಾದ ಏಳಗಿ ಅವರ ನೇತೃತ್ವದಲ್ಲಿ ಅವರ ಗೆಳೆಯರ ಬಳಗ ಕೂಡಿಕೊಂಡು ಸ್ವಂತ ಖರ್ಚಿನಲ್ಲಿ ಲಕ್ಷಾಂತರ ಹಣ ಖರ್ಚುಮಾಡಿ ಧಾನಮ್ಮ ದೇವಿಯ ದೇವಸ್ಥಾನ ನಿರ್ಮಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು. 

ಧಾನಮ್ಮ ದೇವಿ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷ ಅನೀಲ ಪ್ರಸಾದ ಏಳಗಿ ಅಧ್ಯಕ್ಷತೆ ವಹಿಸಿದ್ದರು.  

ಕಾರ್ಯಕ್ರಮದ ಸಾನಿಧ್ಯವನ್ನು ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಸಿದ್ದಾರೂಢ ಮಠದ ಡಾ. ಸ್ವರೂಪಾನಂದ ಶ್ರೀಗಳು ಆಶಿರ್ವಚನ ನೀಡಿದರು. 

ವೇದಿಕೆಯಲ್ಲಿ ಡಾ. ಎಂ.ಜಿ.ಪಾಟೀಲ, ಎಸ್‌.ಎಸ್‌.ಹಳ್ಳಿ, ಅನಂತ ಜೈನ, ರಾಮಸಿಂಗ್ ಕನ್ನೊಳ್ಳಿ, ಶಿವು ತಾಂಬೆ ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ