ರೇಖಾ ಬಿರಾದಾರಗೆ ಪಿಎಚ್‌ಡಿ ಪದವಿ
ಲೋಕದರ್ಶನ ವರದಿ
ವಿಜಯಪುರ 06: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರೇಖಾ ಬಿರಾದಾರ ಅವರು ಸಲ್ಲಿಸಿದ್ದ “ಇಮೇಜ್ ಕಂಪ್ರೆಷನ್ ಟೆಕ್ನಿಕ್ಸ್ ವಿತ್ ಅಪ್ಲಿಕೇಷನ್ ಟು 3ಡಿ ಮೆಡಿಕಲ್ ಇಮೇಜಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ರೇಖಾ ಬಿರಾದಾರ ಅವರು ಗಣಕ ವಿಜ್ಞಾನ ವಿಭಾಗದ ಪ್ರೊ. ಅಜೀಜ್ ಮಕಾಂದಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ರೇಖಾ ಬಿರಾದಾರ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.