ಇಷ್ಟಲಿಂಗ ಪೂಜೆಯಿಂದ ಪರಮಾತ್ಮನ ಸಾಕ್ಷಾತ್ಕಾರ: ರಂಭಾಪುರಿ ಶ್ರೀ
ಬೇಲೂರು: ಇಷ್ಟಲಿಂಗ ಪೂಜೆಯಲ್ಲಿ ಪರಮಾತ್ಮನನ್ನು ಕಂಡವರು ವೀರಶೈವರು ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಕುಮಾರ ಸಮುದಾಯ ಭವನದಲ್ಲಿ ಸೋಮವಾರ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ನೇರವೇರಿಸಿ ಆಶೀರ್ವಚನ ನೀಡಿದರು.
ಇಷ್ಟಲಿಂಗ ಪೂಜೆಯಿಂದ ಇಷ್ಟಾರ್ಥ ಸಿದ್ದಿಸುವುದು. ಇಷ್ಟಲಿಂಗ ಪೂಜೆ ಕೇವಲ ವೀರಶೈವರಿಗೆ ಮಾತ್ರ ಸಿಮೀತವಾಗಿಲ್ಲ ಸರ್ವರೂ ಗುರುವಿನಿಂದ ಲಿಂಗದೀಕ್ಷೆ ಹೊಂದಿ ಇಷ್ಟಲಿಂಗ ಪೂಜೆ ನೇರವೇರಸಬಹುದಾಗಿದೆ. ರಂಭಾಪುರಿ ಪೀಠದ ಲಿಂ.ವೀರಗಂಗಾಧರ ಜಗದ್ಗುರುಗಳು ಏಕಾಂತದಲ್ಲಿದ್ದ ಶಿವಪೂಜೆಯನ್ನು ಲೋಕಾಂತಕ್ಕೆ ತಂದು ಸರ್ವರೂ ಸಹ ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಪ್ರಸ್ತುತ ಜಗದ್ಗುರುಗಳು ನಾಡಿನಾದ್ಯಂತ ಇಷ್ಟಲಿಂಗಮಹಾಪೂಜೆ ನೇರವೇರಿಸಿ ಭಕ್ತರಲ್ಲಿ ಧರ್ಮ ಸಂಸ್ಕಾರ ಪಸರಿಸುವ ಕಾರ್ಯವನ್ನು ಮಾಡಲಾಗುತ್ತದೆ.
ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಇಷ್ಟಲಿಂಗ ಪೂಜೆಯು ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವೇ ಇಷ್ಟಲಿಂಗ ಪೂಜೆಯಾದರೆ ಗುರು ಪಾದೋದಕ ಪ್ರಸಾದ ಸ್ವೀಕರಿಸುವುದರಿಂದ ಬದುಕು ಪಾವನವಾಗುದು ಎಂದರು. ಜಗದ್ಗುರುಗಳ ಇಷ್ಟಲಿಂಗ ಪೂಜೆ ಯಲ್ಲಿ ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ ಹುಲಿಕೇರಿಯ ವೀರುಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಜುಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಂಡೆಕೇರೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಶಾಸಕ ಕೆ.ಎಸ್.ಲಿಂಗೇಶ ಸೇರಿದಂತೆ ದಸರಾ ಮಹೋತ್ಸವ ಸೇವಾ ಸಮಿತಿ ಸದಸ್ಯರು ಮಹಿಳೆಯರು ಪಟ್ಟಣದ ಜನತೆ ಭಾಗಿಯಾಗಿದ್ದರು..