ಆಟೋ ಚಾಲಕರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದ ರಾಯಣ್ಣ ಅಭಿಮಾನಿ ಬಳಗ
ಮುಂಡಗೋಡ:ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್, ಪಟ್ಟಣ ಪಂಚಾಯತಿ ಆಟೋ ಸ್ಟ್ಯಾಂಡ್, ಬನ್ನಿಕಟ್ಟಿ ಆಟೋ ಸ್ಟಾಂಡ್ ಹಾಗೂ ತಾಲೂಕಿನ ಎಲ್ಲಾ ಆಟೋಗಳಿಗೂ ಕನ್ನಡ ಬಾವುಟವನ್ನು ಕಟ್ಟುವುದರ ಮುಖಾಂತರ ಆಟೋ ಚಾಲಕರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಲಾಯಿತು.
ಈ ವೇಳೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕಾರ್ಯಕರ್ತರಾದ ಅಯ್ಯಪ್ಪ ಭಜಂತ್ರಿ, ಮಂಜುನಾಥ ಕುರುಬರ, ಗುಡ್ಡಪ್ಪ ಸುಣಗಾರ, ರೇವಣ ಭಜಂತ್ರಿ, ಕುಮಾರ ಮಾಂತಣ್ಣನವರ, ಮಂಜುನಾಥ ಕಟ್ಟಿಮನಿ, ಆಸಿಫ್ ನದಾಫ್, ಸಂಜಯ ಕೂಡಲಮಠ, ಉದಯ ಕೂಡಲಮಠ, ಉಮೇಶ ರಾಯ್ಕರ ಮುಂತಾದವರು ಉಪಸ್ಥಿತರಿದ್ದರು.