ಬಳ್ಳಾರಿ

ಕನಕದುರ್ಗಮ್ಮ ದೇವಸ್ಥಾನಕ್ಕೆ ರವೀಂದ್ರಶೆಟ್ಟಿ ಭೇಟಿ

ಕನಕದುರ್ಗಮ್ಮ ದೇವಸ್ಥಾನಕ್ಕೆ  ರವೀಂದ್ರಶೆಟ್ಟಿ ಭೇಟಿ

ಬಳ್ಳಾರಿ 15: ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ಅಧ್ಯಕ್ಷ ಕೆ ರವೀಂದ್ರಶೆಟ್ಟಿಯವರು ಸೋಮವಾರ ಮುಂಜಾನೆ ಬಳ್ಳಾರಿ ನಗರದ ಆರಾಧ್ಯ ದೇವತೆ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ನಿಗಮದ ಬಳ್ಳಾರಿ ಜಿಲ್ಲಾ ಕೇಂದ್ರ ಕಛೇರಿಕ್ಕೆ ಭೇಟಿ ನೀಡಿ ಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹೊಸಪೇಟೆ ನಗರದಲ್ಲಿ ಜೋಗಿ ಜನಾಂಗದ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು, ನಿಗಮದ ಜಿಲ್ಲಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅಲೆಮಾರಿ ಜನಾಂಗದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗು ವುದೆಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಪೂಜಾರಿ ಗಾದೆಪ್ಪನವರು ಮಾತನಾಡಿ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅಲೆಮಾರಿ ಜನಾಂಗದಲ್ಲಿ ಕಡು ಬಡವರು ಜಾಸ್ತಿ ಇದ್ದಾರೆ ಇವರ ಅಭಿವೃದ್ಧಿಗೆ ನಿಗಮದ ವತಿಯಿಂದ ಸಹಾಯ ಸಿಗಬೇಕಿದೆ, ಮತ್ತು ಈ ಜನಾಂಗಕ್ಕೆ ಸರ್ಕಾರದವತಿಯಿಂದ ಒಂದು ಮನೆಯನ್ನು ಸಹ ನಿರ್ಮಿಸಿಕೊಟ್ಟಿರುವುದಿಲ್ಲ. ನಿಗಮಕ್ಕೆ ಬಂದ ಬಜೆಟ್ ಹಣ ಸರಿಯಾಗಿ ಬಳಸದಿರುವುದೇ ಇದಕ್ಕೆ ಕಾರಣ, ಆದಕಾರಣ ಸಮಾಜದವರನ್ನು ನಿಗಮದಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು ಮತ್ತು ಅದೇ ರೀತಿಯಾಗಿ ಗೊಲ್ಲ ಸಮಾಜದ ಇಬ್ಬರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕೆಂದು ವಿನಂತಿಸಿದರು. ನಿಗಮದ ಮಂಗಳೂರು ಜಿಲ್ಲಾಧ್ಯಕ್ಷ ಅನಂತ ಯಾದವ್ ಉಪಸ್ಥಿತರಿದ್ದರು.

ಸುದ್ದಿ ಓದಿ