ಮುಂದಗೋಡ

ಫೆ.1ರಂದು ಶ್ರೀಮಾರಿಕಾಂಬಾದೇವಿಯ ರಥೋತ್ಸವ

ಫೆ.1ರಂದು ಶ್ರೀಮಾರಿಕಾಂಬಾದೇವಿಯ ರಥೋತ್ಸವ

ಲೋಕದರ್ಶನ ವರದಿ

ಮುಂಡಗೋಡ:ಪ್ರತಿ ಸಲದಂತೆ ಈ ಸಲವೂ ದೇವಿಯ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಫೆ.1ರಂದು ಬೆಳಗ್ಗೆ 8ಗಂಟೆಯಿಂದ ಶ್ರೀಮಾರಿಕಾಂಬಾದೇವಿಯ ರಥೋತ್ಸವ ಜರುಗಲಿದ್ದು ಜಾತ್ರಾ ಗದ್ದುಗೆಯವರೆಗೆ ಉತ್ಸವ ಸಾಗಲಿದೆ ಮಧ್ಯಾಹ್ನ ದೇವಿ ಮೂರ್ತಿಯ ಪ್ರತಿಷ್ಠಾಪನೆ ನಂತರ ಸಾರ್ವಜನಿಕರಿಂದ ದೇವಿಗೆ ಹಣ್ಣು-ಕಾಯಿ ಸಮರ್ಪಣೆ ನಡೆಯಲಿದೆ ಎಂದು ಶ್ರೀಮಾರಿಕಾಂಬಾದೇವಿ ದೇವಸ್ಥಾನದ ಕಮಿಟಿ ಅಧ್ಯಕ್ಷ ರಮೇಶ ಕಾಮತ ಹೇಳಿದರು.  

ಪಟ್ಟಣದ ಶ್ರೀಮಾರಿಕಾಂಬಾದೇವಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ಜರುಗಿದ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2007ರಿಂದ ಆರಂಭವಾದ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಹಿಂದೆ ನಡೆದ 5 ಜಾತ್ರೆಗಳನ್ನು ಯಾವುದೆ ಅಡೆ-ತಡೆ ಇಲ್ಲದೆ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದೇವೆ. ದೇವಸ್ಥಾನದ ಕಮಿಟಿ, ಜಾತ್ರೆ ಸಮಿತಿ, ಲಕ್ಷದೀಪೋತ್ಸವ ಸಮಿತಿ, ಸಂಘ-ಸಂಸ್ಥೆ, ಕಾಳಗನಕೊಪ್ಪ, ನ್ಯಾಸಗರ್ಿ ಗ್ರಾಮಸ್ಥರು, ಪಟ್ಟಣದ ಭಕ್ತರ ತನು, ಮನ, ಧನದ ಸಹಾಯದಿಂದ ಹಾಗೂ ದೇವಿಯ ಕೃಪೆಯಿಂದ ಜಾತ್ರೆ ಅಭಿವೃದ್ಧಿ ಹೊಂದುತ್ತಿದೆ ಎಂದರು. 

ಒಟ್ಟು 5 ಹೊರಬೀಡುಗಳಿದ್ದು ಜ.10 ಮೊದಲ ಹೊರಬಿಡು, ಜ.13 ಎರಡನೇ ಹೊರಬೀಡು, ಜ.17 ಮೂರನೇ ಹೊರಬೀಡು, ಜ.20 ನಾಲ್ಕನೇ ಹೊರಬೀಡು ಮತ್ತು ಜ.24ರಂದು ಐದನೇ ಹೊರಬೀಡಿನ ದಿನಗಳಾಗಿ ನಿಗದಿಪಡಿಸಲಾಗಿದೆ. ಕೊನೆಯ ಹೊರಬೀಡು ಮಂಗಳವಾರ ಸಂಜೆ ಅಂಕಿ ಹಾಕಿ ದೇವಿಗೆ ಬಣ್ಣ ಕೊಡುವುದು. ಜ.31ರ ಮಂಗಳವಾರ ದೇವಸ್ಥಾನದಲ್ಲಿ ಶ್ರೀದೇವಿಯ ಮೂತರ್ಿ ಪ್ರತಿಷ್ಠಾಪನೆಗೊಂಡು ಜಾತ್ರೆಯ ಕಾರ್ಯಕ್ರಮಗಳು ಆರಂಭವಾಗಿ ತವರು ಮನೆ ನ್ಯಾಸಗರ್ಿ ಗ್ರಾಮದ ಹಿರಿಯರಿಂದ ಉಡಿ ತುಂಬುವ ಸೇವೆ ಜರುಗಲಿದೆ ಎಂದರು. 

ಫೆ.8ರಂದು ದೇವಿಯ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು ಮಾ.22ರ ಯುಗಾದಿ ದಿನ ಶ್ರೀಮಾರಿಕಾಂಬಾ ದೇವಸ್ಥಾನದಲ್ಲಿ ದೇವಿ ಪ್ರತಿಷ್ಟಾಪನೆ ಮಾಡಲಾಗುವುದು. ಪ್ರಥಮ ಬಾರಿ ಆರಂಭಗೊಂಡ ಜಾತ್ರೆಗೆ ಕಾರಣರು ಹಾಗೂ ರಥೋತ್ಸವದ ಜವಾಬ್ದಾರಿ ಹೊತ್ತ ಎಚ್.ಜಿ.ಕುನ್ನೂರ ಮತ್ತು ಮಲ್ಲಿಕಾರ್ಜುನ ಕುಟ್ರಿ ನಮ್ಮನ್ನು ಅಗಲಿದ್ದಾರೆ. ಈ ಸಮಯದಲ್ಲಿ ಅವರನ್ನು ಸ್ಮರಿಸಬೇಕಾಗುತ್ತದೆ ಎಂದರು. ಜಾತ್ರಾ ಕಾರ್ಯಕ್ರಮದ ರೂಪುರೇಷಗಳ ಮಾಹಿತಿ ನೀಡಿ ವಿವಿಧ ಕಮಿಟಿಗಳ ರಚನೆ ಮಾಡಲಾಯಿತು. ಬಾಬಣ್ಣ ಸಾಲಗಾಂವಿ, ಡಾ.ಪಿ.ಪಿ.ಛಬ್ಬಿ, ಕೆ.ಎನ್.ಹೆಗಡೆ. ನಾರಾಯಣ ಉಪ್ಪುಂದ, ಜ್ಞಾನದೇವ ಗುಡಿಯಾಳ, ಎಸ್.ಎಸ್.ಪಾಟೀಲ, ಬಿ.ಎಮ್.ಕೋಟಿ, ಚಂದ್ರಶೇಖರ ಕರಿಗಾರ, ವಾಸು ದಾವಣಗೇರಿ, ಅಶೋಕ ಕಲಾಲ, ಯಲ್ಲಪ್ಪ ರಾಣಿಗೇರ ಹಾಗೂ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ