ಮುಂದಗೋಡ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದ ಮೈನಳ್ಳಿ ದಂಪತಿ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದಾದ ಮೈನಳ್ಳಿ ದಂಪತಿ

ಮುಂಡಗೋಡ:ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕಾರರ ಮೂಲಕ ತಾಲೂಕಿನ ಮೈನಳ್ಳಿ ಗ್ರಾಮದ ದಂಪತಿ ಒಂದಾದರು.  

ರೇಷ್ಮಾ ಮತ್ತು ಪುಂಡಲೀಕ ಶಿಂಧೆ ಒಂದಾದ ದಂಪತಿ. 2019ರಲ್ಲಿ ರೇಷ್ಮಾ ಶಿಂಧೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಜೆಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಕೇಶವ ಕೆ. ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕಾರರ ಮೂಲಕ ದಂಪತಿ ರಾಜಿಯಾಗಿ ಒಂದಾದರು. ಈ ಸಂದರ್ಭದಲ್ಲಿ ವಕೀಲರಾದ ನಂದೀಶ ನಿಂಬಾಯಿ, ಎಸ್‌.ಪಿ.ಸಮ್ಮಸಗಿ, ಬಿ.ಎಫ್‌.ಪೂಜಾರ, ಎಂ.ಎ.ನಂದಿಕಟ್ಟಿ, ಆರ್‌.ಎನ್‌.ಹೆಗಡೆ, ದೀಪ್ತಿ ಅಂಡಗಿ, ಪವನ ಇಂಗಳೆ, ಕೃಷ್ಣ ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು. 

ಇದಲ್ಲದೆ 18 ಚೆಕ್ ಬೌನ್ಸ್‌ ಪ್ರಕರಣ, 24 ಅಮಲ್ಜಾರಿ ಪ್ರಕರಣ, 2 ಮೂಲ ದಾವಾ ಪ್ರಕರಣ, 2 ಕ್ರಿಮಿನಲ್ ಮಿಸಿಲೆನಿಯಸ್, 68 ಪೆಟ್ಟಿ ಮತ್ತು ಐ.ಪಿ.ಸಿ. ಕೇಸ್‌ಗಳು ರಾಜಿಯಾದವು ಹಾಗೂ 63,66,084ರೂ. ವಸೂಲಿಯಾಯಿತು. 150 ವ್ಯಾಜ್ಯ ಪೂರ್ವ ಪ್ರಕರಣಗಳು ನಿಖಾಲೆಯಾದವು. ಇದರಿಂದ 16,85,456ರೂ. ವಸೂಲಿಯಾಯಿತು. ಒಟ್ಟು 264 ಪ್ರಕರಣಗಳು ಇತ್ಯರ್ಥಗೊಂಡು 80,51,540ರೂ. ವಸೂಲಿ ಆಯಿತು. ಲೋಕ ಅದಾಲತ್‌ನ ನ್ಯಾಯಿಕ ಸಂಧಾನಕಾರರಾಗಿ ಇಲ್ಲಿನ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೇಶವ ಕೆ. ಮತ್ತು ನಟರಾಜ ಕಾತೂರ ನ್ಯಾಯಕೇತರ ಸಂಧಾನಕಾರರಾಗಿದ್ದರು. 


ಸುದ್ದಿ ಓದಿ