ರಾಷ್ಟ್ರೀಯ ಲೋಕ ಅದಾಲತ್: 213 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥ
ಮುದ್ದೇಬಿಹಾಳ : ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ನ್ನು ಹಮ್ಮಿಕೊಳ್ಳಲಾಗಿತ್ತು.
ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ 5891 ಬಾಕಿ ಇರುವ ಪ್ರಕರಣಗಳಲ್ಲಿ ಒಟ್ಟು 1433ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಅಪರಾಧ ಪ್ರಕರಣಗಳು, ಎಂವಿಸಿ, ಚೆಕ್ ಬೌನ್ಸ್, ಮೆಂಟೇನೆನ್ಸ್, ಪಾಲು ವಾಟ್ನಿ, ಎಲ್.ಎ.ಸಿ, ಇಪಿ,ಎಮ್ವಿಸಿ, ಅಪರಾಧ ದಂಡ ಪ್ರಕರಣಗಳು ಸೇರಿದಂತೆ ಅಬಕಾರಿ ಇಲಾಖೆಯ ಒಟ್ಟು 213 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.
ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಪ್ರಕರಣಗಳು,ಬ್ಯಾಂಕಿನ ಪ್ರಕರಣಗಳು, ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳು ಒಟ್ಟು ಸೇರಿ2758 ಪ್ರಕರಣಗಳಲ್ಲಿ 330 ಪ್ರಕರಣಗಳುರಾಜಿ ಸಂಧಾನದ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಯಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶೆ ಲಕ್ಷ್ಮೀನಿಂಗಪ್ಪಗರಗ ಹಾಗೂ ಸದಸ್ಯ ಕಾರ್ಯದಶರ್ಿ ಹಾಗೂ ಕಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಸಂಪತಕುಮಾರ ಬಳೂಲಗಿಡದ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಈ ವೇಳೆ ನ್ಯಾಯವಾದಿಗಳಾದ ಎಸ್.ಎಂ.ಕಿಣಗಿ, ಎನ್.ಜಿ.ಕುಲಕರ್ಣಿ, ಎನ್.ಬಿ.ಮುದ್ನಾಳ ಮಾತನಾಡಿ, ಲೋಕ್ಅದಾಲತ್ ಯಾವತ್ತಿದ್ದರೂ ಪಕ್ಷಗಾರರ ಸ್ನೇಹಿ.ಇಲ್ಲಿ ಪ್ರಕರಣಗಳು ಪಕ್ಷಗಾರರು ಪರಸ್ಪರಒಪ್ಪಿಕೊಂಡಂತೆ ಸಮನಾಗಿ ನ್ಯಾಯದಾನವಾಗುತ್ತದೆ. ಆದರೆ ನ್ಯಾಯಾಲಯದ ಆದೇಶದ ಮೂಲಕ ನ್ಯಾಯದಾನ ಪಡೆಯಲು ಇಚ್ಛಿಸಿದಲ್ಲಿ ನ್ಯಾಯಾಧೀಶರುಕಾಯ್ದೆ ಕಾನೂನಿನ ಅನುಸಾರಆದೇಶ ಮಾಡಿದಾಗ ಅದು ಒಬ್ಬರ ಪರವಾಗಿ, ಮತ್ತೊಬ್ಬರ ವಿರುದ್ಧವಾಗಿ ಆಗಬಹುದು.ಒಮ್ಮೆ ಸೋಲಬಹುದು ಒಮ್ಮೆಗೆಲ್ಲಬಹುದು. ಹಾಗಾಗಿ ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವದು ಒಳಿತು ಎಂದರು.
ಸದರಿ ಲೋಕ ಅದಾಲತ್ನಲ್ಲಿ ನ್ಯಾಯಾಂಗ ಸಂಧಾನಕಾರರಾಗಿ ಎಂ.ಎ.ಲಿಂಗಸೂರ ಹಾಗೂ ಎಚ್.ಜಿ.ನಾಗೋಡ ವಕೀಲರುಗಳು ಭಾಗಿಯಾಗಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಎಜಿಪಿ ಎಂ.ಆರ್.ಪಾಟೀಲ, ಹಿರಿಯ ನ್ಯಾಯವಾದಿಗಳಾದ ವಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಸಂಗಮೇಶ ಹೂಗಾರ, ವಿ.ಜಿ.ಮದರಕಲ್ಲ, ಎನ್.ಆರ್.ಮೊಕಾಶಿ, ನ್ಯಾಯವಾದಿಗಳಾದ ಬಿ.ಎ.ನಾಡಗೌಡರ, ಬಸವರಾಜ ಚಿನಿವಾರ, ಎಲ್.ಎಸ್.ಮೇಟಿ, ಎಸ್.ಆರ್.ಜೋಗಿ, ಹಸೀನಾ ಅನಂತಪೂರ, ಬಸಣ್ಣ ಮುಂದಿನಮನಿ, ಚೇತನ ಶಿವಶಿಂಪಿ, ಸಂತೋಷಎಚ್.ಎಂ, ಬಿ.ಪಿ.ಮ್ಯಾಗೇರಿ, ಪಿ.ಬಿ.ಗೌಡರ, ಎಚ್.ಟಿ.ಪೂಜಾರಿ, ಎಂ.ಆರ್.ಮುಜಾವರ ಸೇರಿದಂತೆ ಮತ್ತೀತರ ವಕೀಲರು ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ನ್ಯಾಯಾಲಯದ ಸಿಬ್ಬಂದಿಗಳಾದ ವಿ.ಸಿ.ಶಿವಣಗಿ, ಸುರೇಶ ಬಳಗಾನೂರ, ಎ.ಆರ್.ಮುಜಾವರ, ಅಶೋಕ ದಿಂಡವಾರ, ಜ್ಯೋತಿ ಹಕಾರಿ, ಅಮಿದಾ ನದಾಫ್, ಎಮ್.ಎಸ್.ಸಾಲಿಮಠ, ಪುನೀತ, ಗುರು ಲಾಳಿ, ಮಂಜುಳಾ ಕಟ್ಟಿಮನಿ, ಕಾವೇರಿ ರಾಠೋಡ, ಮಹಾಂತೇಶ್ ಹಚರೆಡ್ಡಿ, ನರ್ಮದಾ ಮರೋಳ, ಜ್ಯೋತಿ ಹೆಬ್ಬಾಳ,ಯಲ್ಲಮ್ಮ ಕುಂಬಾರ. ಮಂಜುಳಾ ಹೊಸಮನಿ, ನೀಲಮ್ಮ ಬಡಿಗೇರ, ಎಂ.ಎಫ್.ಜೇವರಗಿ.ಸೇರಿದಂತೆ ಇನ್ನಿತರ ಎಲ್ಲಾ ಸಿಬ್ಬಂದಿಗಳು ಭಾಗಿಯಾಗಿ ಲೋಕ್ ಅದಾಲತ್ ಯಶಶ್ವಿಗೆ ಪಾತ್ರರಾದರು.