ಬಳ್ಳಾರಿ

ಅತ್ಯಾಚಾರ: ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಅತ್ಯಾಚಾರ: ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಬಳ್ಳಾರಿ 12: ಜಿಲ್ಲೆಯ ಭೀಮ್ ಆರ್ಮಿ (ಭಾರತ್ ಏಕತಾ ಮಿಷನ್) ಜಿಲ್ಲಾ ಸಮಿತಿ ವತಿಯಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಚೌಡೇಶ್ವರಿ ಹಾಳ ಗ್ರಾಮದಲ್ಲಿ ಪಾಲಮ್ಮ ಎಂಬ ದಲಿತ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಸಜೀವ ದಹನವನ್ನು ಖಂಡಿಸಿ ದಿ. 12ರಂದು ಮಂಗಳವಾರ ಬೆಳಿಗ್ಗೆ 10.00ಗಂಟೆಗೆ ಬಳ್ಳಾರಿಯ ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ಮುಖಾಂತರ ಪ್ರತಿಭಟನೆ ಹಮ್ಮಿಕೊಂಡು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಅಥವಾ ಗಲ್ಲುಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಅಪರಾಧಿಯು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರಿಂದ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮವಾಗಲಿ ಅಥವಾ ಪಾಲಮ್ಮ ಅವರ ಕುಟುಂಬಕ್ಕೆ ಹಣಕಾಸಿನ ನೆರವಾಗಲಿ ಮಂಜೂರು ಆಗುವುದಿಲ್ಲ ಆದಕಾರಣ ಈ ಕೂಡಲೇ ರಾಜ್ಯ ಸರ್ಕಾರವು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರು, ಮಾನ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು, ಮಾನ್ಯ ಗೃಹ ಮಂತ್ರಿಗಳು ಮತ್ತು ಮಾನ್ಯ ಕಾನೂನು ಮಂತ್ರಿಗಳು ಒಟ್ಟಿಗೆ ತೀರ್ಮಾನವನ್ನು ಕೈಗೊಂಡು ರಾಜ್ಯ ಸರ್ಕಾರದಿಂದ ಈ ಕೊಲೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ದಿವಂಗತ ಪಾಲಮ್ಮ ಅವರ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರವನ್ನು ಮಂಜೂರು ಮಾಡಬೇಕು ಮತ್ತು ಅತ್ಯಾಚಾರಕ್ಕೆ ಪ್ರಯತ್ನಿಸಿದ ಕೊಲೆಗಡುಕನಿಗೆ ನೇಣುಗಂಬದ ಶಿಕ್ಷೆಯನ್ನು ಅಥವಾ ಎನ್‌ಕೌಂಟರ್ ಮಾಡಬೇಕೆಂದು ಆಗ್ರಹಿಸುತ್ತೇವೆ.  

ಈ ಸಂದರ್ಭದಲ್ಲಿ ಭೀಮ್ ಆರ್ಮಿ (ಭಾರತ ಏಕತಾ ಮಿಷನ್) ಬಳ್ಳಾರಿ ಜಿಲ್ಲಾಧ್ಯಕ್ಷ ರಾಘವೇಂದ್ರ.ಸಿ ಅವರು ಮಾತನಾಡಿದರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶಲು, ಉಪಾಧ್ಯಕ್ಷರು ಇಫ್ತಿಕರ್ ಅಹಮದ್, ವಿನೋದ್ ಕುಮಾರ್, ರಾಘವೇಂದ್ರ, ವೆಂಕಟೇಶ್, ಜಿಲಾನ್, ಅಸದ್, ಸುದರ್ಶನ್, ಹರಿಕೃಷ್ಣ, ಗೋವಿಂದ, ರಂಗಸ್ವಾಮಿ, ರಫೀಕ್ ಮತ್ತು ಮುಂತಾದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು 


ಸುದ್ದಿ ಓದಿ