ಗ್ರಾಮೀಣ ವಿದ್ಯಾರ್ಥಿ ತಿಪ್ಪೆರುದ್ರ ಬಿಎ ಪದವಿಯಲ್ಲಿ ರಾ್ಯಂಕ್
ಲೋಕದರ್ಶನ ವರದಿ
ಕಂಪ್ಲಿ 12: ಕಡಿಮೆ ಅಂಕ ಬಂದಿವೆ ವಿದ್ಯಾರ್ಥಿಗಳ ಜಾಯಮಾನದ ಮಧ್ಯೆ ಒಂದು ಸಬ್ಜೆಕ್ಟ್ ಫೇಲಾದರೂ ಓದಲೇಬೇಕೆನ್ನುವ ಛಲದಿಂದ ಓದಿ ರಾ್ಯಂಕ್ ಪಡೆದ ಗ್ರಾಮೀಣ ವಿದ್ಯಾರ್ಥಿ ಇದೀಗ ಶಿಕ್ಷಣ ಪ್ರೇಮಿಗಳ ಗಮನಸೆಳೆದಿದ್ದಾನೆ. ದೇವಸಮುದ್ರ ಗ್ರಾಮದ ಕೃಷಿಕ ಕುಟುಂಬದ ಮೂರುಗುಡಿ ಬಸಪ್ಪ ಯಲ್ಲಮ್ಮ ಇವರ ಪುತ್ರ ಎಂ. ತಿಪ್ಪೆರುದ್ರ ಕಂಪ್ಲಿಯ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಅಭ್ಯಾಸಿಸಿದ್ದು ಬಿಎ ಪದವಿಯಲ್ಲಿ ರಾ್ಯಂಕ್ಗಳಿಸಿದ್ದಾನೆ. ಈತ ದೇಸಮುದ್ರ ಗ್ರಾಮದ ಸಹಿಪ್ರಾ ಶಾಲೆ, ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸಿಸಿದ್ದು ಹತ್ತನೇ ತರಗತಿಯಲ್ಲಿ ಶೇ.69.28ರಷ್ಟು ಅಂಕಗಳಿಸಿದ್ದಾನೆ.
ಕಂಪ್ಲಿಯ ಷಾ.ಮಿಯಾಚಂದ್ ಸರ್ಕಾರಿ ಪಿಯೂ ಕಾಲೇಜಿನಲ್ಲಿ ಮೊದಲ ವರ್ಷದ ಸೈನ್ಸ್‌ನಲ್ಲಿ ಗಣಿತ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ಒಂದು ವರ್ಷ ವ್ಯರ್ಥವಾಗಬಾರದೆಂದು 2017ರಲ್ಲಿ ಕಂಪ್ಲಿಯ ಡಿಎಚ್‌ಎಸ್ ಕಾಲೇಜಿನಲ್ಲಿ ಖಾಸಗಿಯಾಗಿ ಆರ್ಟ್ಸ್ ಸೆಕೆಂಡ್ ಇಯರ್ ಪರೀಕ್ಷೆ ಕಟ್ಟಿ ಶೇ.71ರಷ್ಟು ಅಂಕಗಳಿಸಿದ. ಆರ್ಥಿಕ ಅನುಕೂಲವಿಲ್ಲದಿದ್ದರಿಂದ ಕೃಷಿಗಾಗಿ ಸಾಲ ಪಡೆದ ಹಣದಲ್ಲಿಯೇ ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿಗೆ ದಾಖಲಾದ. ಸತತ ಅಭ್ಯಾಸದಿಂದ ಆರನೇ ರಾ್ಯಂಕ್ಗಳಿಸಿದ. ಸದ್ಯ ಹೊಸಪೇಟೆಯ ಬಿಇಡಿ ನ್ಯಾಷನಲ್ ಕಾಲೇಜಿನಲ್ಲಿ ಬಿಇಡಿ ಅಭ್ಯಾಸಿಸುತ್ತಿದ್ದಾನೆ. ಮುಂದೆ ಹೈಸ್ಕೂಲ್ ಟೀಚರ್ ಅಥವಾ ಉಪನ್ಯಾಸಕ ಆಗಬೇಕೆನ್ನುವ ಆಶಯ ಹೊಂದಿದ್ದಾನೆ.
ಕೋಟ್: ಮೊದಲ ಮೂರರೊಳಗಿನ ಒಂದು ರಾ್ಯಂಕ್ಗಳಿಸಬೇಕೆಂಬ ಬಲವಾದ ಆಶೆಯಿತ್ತು. ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯುವ ಬಲವಾದ ಆಶೆ ಈಡೇರಲಿದೆ. ಪರೀಕ್ಷೆಯಲ್ಲಿ ಬರೆಯುವಾಗ ವಿಶೇಷ ಮೆಥೆಡ್ ಬಳಸಿದ್ದರಿಂದ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಉಪನ್ಯಾಸಕರ ಸಹಾಯ, ಸಹಕಾರ, ಪ್ರೋತ್ಸಾಹವೂ ರಾ್ಯಂಕಿಗೆ ಕಾರಣ.