ರಾನಿ
"ಬಾಲ್ಕನಿಯಲ್ಲಿರುವ ಫ್ಲವರ್ ಪಾಟ್ ತೆಗೆದು ಅಂಗಳದ ಹತ್ತಿರ ಸಾಲಾಗಿ ಇಟ್ಟು, ಈ ಹೂ ಮಾಲೆಗಳನ್ನು ಗ್ಯಾಲರಿಯಲ್ಲಿರುವ ಕಂಬಕ್ಕೆ ಕಟ್ಟಬೇಕು. ಅರ್ಚಕರು ಪೂಜೆಗೆ ಬರುವುದರೊಳಗೆ ದೇವರ ಪಾತ್ರೆಗಳನ್ನು ತೊಳೆದಿಡು". ಇದನ್ನೆಲ್ಲಾ ಕೇಳಿಸಿಕೊಂಡ ಮೋನಿಕಾ "ಹಾಂ ಅಮ್ಮವರೇ" ಎಂದು ತಲೆ ಅಲ್ಲಾಡಿಸಿದಳು. ಅಷ್ಟೇ ಅಲ್ಲ, ರಾಘವ ಸಲೋನ್ ನಿಂದ ಬರುವುದರೊಳಗೆ ಕಾಫಿ ಮಾಡಿ, ಸ್ನಾನಕ್ಕೆ ನೀರು ರೆಡಿಮಾಡು. ಹೇಳಿದೆಲ್ಲಾ ನೆನಪಿಟ್ಟಕೊ; ಆಮೇಲೆ ಒಂದು ಮಾಡಿ ಇನ್ನೊಂದು ನೆನಪಿಲ್ಲದೆ ಹಾಗೆ ಬಿಟ್ಟು ಬಿಡಬೇಡ, ಎನ್ನುತ್ತಲೇ ಪ್ರೇಮಲತಾ ಒಳಗಡೆ ನಡೆದಳು. ತಾನು ಇಷ್ಟೊಂದು ಜೋರಾಗಿ ಕರಿತ್ತಿರೋದನ್ನು ಕೇಳಿಯೂ ಕೇಳದಂತೆ ಓಡಾಡುತ್ತಿರುವ ಹೆಂಡತಿಯನ್ನು ನೋಡಿದ ಮೋಹನ, ಹತ್ತಿರ ಬಂದು "ನಿನಗೇನಾದರೂ ಕಿವಿ ಕೇಳಸಲ್ವಾ? ಆಗಿನಿಂದ ಬೀರುವಿನ ಕೀ ಕೊಡು ಎಂದು ಹೇಳುತ್ತಿದ್ದಿನಿ! ನೀ ನೋಡಿದರೆ ಹಳೆ ಸೀರಿಯಲ್ ವಿಲನ್ ಹಾಗೆ ಸೊಂಟಕ್ಕೆ ಕೀ ಸಿಕ್ಕಿಯಿಸಿಕೊಂಡು ತಿರುಗುತ್ತಿದಿಯಾ" ಎಂದನು. ಹೌದು! ನನಗೆ ಬೇರೆ ಕೆಲಸವಿಲ್ಲ ನೀವು ಕರೆದಾಗಲೆಲ್ಲಾ ಓಡಿ ಬಂದು ನಿಮ್ಮ ಸೇವೆ ಮಾಡಿಕೊಂಡು ಇರೋದಕ್ಕೆ, ನಿಮಗೆ ಅಫೀಸ್ ಬಿಟ್ಟು ಬೇರೆ ಜವಾಬ್ದಾರಿ ಉಂಟಾ! ಇನ್ನೂ ಎರಡು ದಿನದಲ್ಲಿ ರಾಘವನ ಮದುವೆ; ಮನೆಯಲ್ಲಿ ಎಷ್ಟೊಂದು ಕೆಲಸ ಉಂಟು! ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದೀರಾ? ಎಂದಳು. "ನೀನು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ, ಎಲ್ಲವನ್ನು ಕಾಂಟ್ರಾಕ್ಟಗೆ ನೀಡಿದ್ದೀವಿ:ಮತ್ತೇಕೆ ಟೆನ್ಷನ್ ಮಾಡಿಕೊಳ್ಳುತ್ತಿಯಾ? ಅಷ್ಟಕ್ಕೂ ಕಾಂಟ್ರಾಕ್ಟ ತೆಗೆದುಕೊಂಡ ವ್ಯಕ್ತಿ ಸಹ ನನ್ನ ಸ್ನೇಹಿತ. ನೀ ಹಿಂಗೆ ಬಿ.ಪಿ ಹೆಚ್ಚು ಮಾಡಿಕೊಂಡು ಓಡಾಡಿದರೆ ಆಗುವ ಕೆಲಸನೂ ಆಗೋದಿಲ್ಲ ಎಂದು ಅಲ್ಲಿಂದ ನಡೆದ. ಪ್ರೇಮಲತಾ ಗಂಡ ಹೊರ ಹೋಗಿದ ದಾರಿಯನ್ನೆ ಮುಖ ಊದಿಸಿಕೊಂಡು ದಿಟ್ಟಿಸಿ ನೋಡುತ್ತಿದಂತೆ ಪೂಜೆ ಮಾಡಲು ಅರ್ಚಕರು ಮನೆಗೆ ಬಂದಿದ್ದರು. ಅದೇ ಸಮಯಕ್ಕೆ ರಾಘವನೂ ಸಲೂನ್ನಿಂದ ಬಂದಿದ್ದನು.
"ರಾಘವನಿಗೆ ಮದುವೆ ಆಗುತ್ತಿರುವ ಹುಡುಗಿ ಪ್ರೇಮಲತಾನ ಅಣ್ಣನ ಮಗಳೆ ಆಗಿದ್ದಳು. ಈಗಿರುವ ಸಮಸ್ಯೆಗಳ ನಡುವೆ ಪ್ರೇಮಲತಾಳಿಗೆ ಮದುವೆಯೊಂದು ನಿರ್ವಿಘ್ನವಾಗಿ ಮುಗಿದರೆ ಸಾಕಾಗಿತ್ತು. ಈ ಮದುವೆಗೆ ಮೋಹನ ತಕರಾರು ಇತ್ತು. ಪಕ್ಕದ ಮನೆ ನೀಲಿ ಜೊತೆ ರಾಘವ ಮದುವೆಯಾದರೆ ಚೆನ್ನಾಗಿರುತ್ತಾನೆ. ಇವತ್ತು ಒಂದು ದಿನದ ನಮ್ಮ ಖುಷಿಗಾಗಿ ಜೀವನ ಪರ್ಯಂತ ಅವರ ಸಂತೋಷನ ಹಾಳು ಮಾಡೋದು ಎಷ್ಟು ಸರಿ?. ಮುಂದೆ ಅವರ ಖುಷಿ ಮುಂದೆ ನಮ್ಮ ಖುಷಿ ಲೆಕಕ್ಕೆ ಬರೋದಿಲ್ಲ". ಹೀಗೆ ಎಷ್ಟೇ ವಾದ ಮಾಡಿದರೂ ಕೊನೆಗೂ ಪ್ರೇಮ ತಾನು ಅಂದುಕೊಂಡ ಹಾಗೆ ಮದುವೆ ಮಾಡಲು ತಯರಾಗಿದ್ದಳು. ಇತ್ತ ರಾಘವ ನೋಡಿದರೆ ಪ್ರ್ಯಾಕ್ಟಿಲ್ ಮನುಷ್ಯ; ಯಾವುದನ್ನು ಅತಿಯಾಗಿ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದಲೇ ನೀಲಿ ಬದುಕು ಹಾಳಾಗುತ್ತಿರೋದು ಇದು ಮೋಹನನಿಗೂ ಗೊತ್ತಿತ್ತು. ಈ ನೀಲಿ ಬೇರೆ ಯಾರು ಅಲ್ಲ, ಅವರ ಪಕ್ಕದಮನೆ ಹುಡುಗಿಯೇ. ರಾಘವನಿಗೆ ಯಾವಾಗ ಮದುವೆ ಫಿಕ್ಸ ಆಯಿತೋ ಅವತಿನಿಂದ ನೀಲಿ, ಪ್ರೇಮಾಳ ಮನೆಗೆ ಹೊಗೋದನ್ನೆ ನಿಲ್ಲಿಸಿದಳು. ಈ ರಾಘವನಿಗೂ ನೀಲಿಗೂ ಪರಿಚಯ ಅಗಿದ್ದೆ ವಿಭಿನ್ನ, ವಿಶೇಷ. ನೀಲಿ ಬಗ್ಗೆ ಇನ್ನೂ ಹೇಳಬೇಕೆಂದರೆ ಹೆಸರಿಗೆ ತಕ್ಕಂತೆ ಕೃಷ್ಣ ಸುಂದರಿ. ಅಷ್ಟೇ ಗುಣವಂತೆ. ಅವಳು ತೊಡುತ್ತಿದ್ದ ಸಂಪ್ರದಾಯ ಉಡುಗೆ, ಉದ್ದ ಜಡೆ ಎಲ್ಲರನ್ನು ಆಕರ್ಷಿಸುತ್ತಿತ್ತು. ನೀಲಿ ಮತ್ತು ಅವಳ ಅಮ್ಮ ಪಕ್ಕದ ಮನೆಗೆ ಬಾಡಿಗೆಗೆ ಬಂದು ಎರಡು ವರ್ಷ ಅಗಿದ್ದರೂ ನೀಲಿಯ ಪರಿಚಯ ರಾಘವನಿಗೆ ಇರಲಿಲ್ಲ. ಯಾಕೆಂದರೆ ರಾಘವ ಮಂಗಳೂರಿಗೆ ’ಪ್ರೊಜೆಕ್ಟ ವರ್ಕ’ ಗೆ ಅಂತ ಹೋದ ಮೇಲೆ ಮನೆಗೆ ಬರೋದೆ ಅಪರೂಪವಾಗಿತ್ತು. ಒಂದು ದಿನ ರಾಘವ ಮನೆಗೆ ಬರುವ ಹೊತ್ತಿಗೆ ಪ್ರೇಮ ಮನೆಯಲ್ಲಿ ಇರಲಿಲ್ಲವಾಗಿತ್ತು. ಆ ಕಾರಣದಿಂದ ಮನೆ ಕೀಯನ್ನು ನೀಲಿ ಹತ್ತಿರ ಕೊಟ್ಟು ತನ್ನ ಮಗ ಬಂದರೆ ಕೀ ಕೊಟ್ಟುಬಿಡು ಎಂದಿದ್ದಳು. ಅವತ್ತು ಸಂಜೆ ನಾಲ್ಕು ಘಂಟೆ ಸುಮಾರಿಗೆ ರಾಘವ ನೀಲಿ ಮನೆ ಹತ್ತಿರ ಹೋಗುತ್ತಾನೆ, ಓದುದ್ದರಲ್ಲಿ ಮಗ್ನಳಾದ ನೀಲಿಗೆ ರಾಘವ ಬಂದಿದ್ದು ಗೊತ್ತಾಗಿರುವುದಿಲ್ಲ. "ಅಮ್ಮಾ ನಿಮ್ಮ ಹತ್ತಿರ ಮನೆ ಕೀ ಕೊಟ್ಟಿದ್ದರಂತಲ್ವಾ? ಅದನ್ನು ಕೊಡಬಹುದಾ ನೀಲಿ... ಎಂದಾಗ ನೀಲಿ ಥಟ್ಟನೆ ಕತ್ತೆತ್ತಿ ನೋಡುತ್ತಾಳೆ. ಯಾರೋ ಸುಂದರ ಯುವಕ ತನ್ನ ಹೆಸರನ್ನು ಕರೆದಾಗ ನೀಲಿಗೆ ಒಮ್ಮೆಲೇ, ಆಶ್ಚರ್ಯ ಮತ್ತು ಆತುರ ಎರಡು ಆಯಿತು. ಇನ್ನು ಏನಾದರೂ ಮಾತನಾಡಬೇಕೆಂದು ಅಂದುಕೊಳ್ಳುತಿರುವಾಗಲೇ ಏನು ಮಾತನಾಡದೆ ಕೀ ಕೊಟ್ಟು ಸುಮ್ಮನಾದಳು. ನೀಲಿ ಸಮಯವಿದ್ದಾಗಲ್ಲೆಲ್ಲಾ ಪ್ರೇಮ ಅವರ ಮನೆಗೆ ಹೋಗುತ್ತಿದ್ದಳು. ಮರುದಿನಾ ಹಾಗೆ ಸುಮ್ಮನೆ ಪ್ರೇಮಳ ಮನೆಗೆ ಹೋದಳು. ಅಡುಗೆ ಮನೆಯಂದ ಸದ್ದು ಬರುತ್ತಿರುವುದನ್ನು ಕೇಳಿ ಪ್ರೇಮ ಆಂಟಿಯೇ ಇರಬಹುದೆಂದು ಒಳಕ್ಕೆ ಹೋದಳು. ಆದರೆ ಅಲ್ಲಿ ರಾಘವ ಕಾಫಿ ಮಾಡುತ್ತಿರುವುದನ್ನು ನೋಡಿ ಸುಮ್ಮನಾದಳು. ಆಗ ರಾಘವ "ನೀಲಿ ಕಾಫಿ ಕುಡಿದು ಹೋಗಿ" ಎಂದನು. ನೀಲಿ ಏನು ಮಾತನಾಡದೆ ಅಲ್ಲಿಂದ ಹೊರ ಬರಲೆಂದು ತಿರುಗಿದಾಗ ರಾಘವ ಸಲುಗೆಯಿಂದ ಅವಳ ಕೈಯನ್ನು ಹಿಡಿದು ಎಳೆದ. ಅದೇ ಸಮಯಕ್ಕೆ ರಾಘವನ ಇನ್ನೊಂದು ಕೈಯಲ್ಲಿರುವ ಬಿಸಿ ಕಾಫಿ ಸರಿಯಾಗಿ ನೀಲಿಯ ಕಾಲಿನ ಮೇಲೆ ಮತ್ತು ಮೈ ಮೇಲೆ ಬಿದ್ದಿತ್ತು. ನೀಲಿ ಒಂದೇ ಸಮನೆ ಕಿರುಚಿದಳು. ರಾಘವನಿಗೂ ಏನು ಮಾಡಬೇಕೆಂದು ತಿಳಿಯದೇ ಫ್ರಿಡ್ಜ್ ಅಲ್ಲಿರುವ ಐಸ್ ಕ್ಯೂಬ್ನ್ನು ಅವಳಿಗೆ ನೀಡುತ್ತಾ "ನಾನು ಹೇಳಿದ ಮಾತು ಕೇಳಿದ್ದರೆ ಹೀಗೆ ಆಗುತ್ತಿರಲಿಲ್ಲ. ಅಮ್ಮಾ ಊರಿಂದ ನಾಳೆ ಬರತ್ತಾರೆ. ಅಮ್ಮ ಯಾವಾಗಲು ನಿನ್ನ ಬಗ್ಗೆನೇ ಹೇಳುತ್ತಿರುತ್ತಾರೆ. ಈಗಾಗಲೇ ಬೇಕಾದಷ್ಟು ಹೇಳಿದ್ದಾರೆ" ಎಂದು ಅವಳ ಕಡೆ ಓರೆ ನೋಟ ಬೀರಿ ಮುಗುಳು ನಕ್ಕನು. ಆಗ ನೀಲಿಗೆ ಇನ್ನಷ್ಟು ಕೋಪ ಬಂತು ಇದನ್ನು ಗಮನಿಸಿದ ರಾಘವ ಇದಕ್ಕೆಲ್ಲ ಕೋಪಮಾಡಿಕೊಂಡರೆ ಹೇಗೆ? ಅಮ್ಮಾ ನಿನ್ನ ಬಗ್ಗೆ ಕೆಟ್ಟದ್ದೇನು ಹೇಳಿಲ್ಲ. ತುಂಬಾ ಒಳ್ಳೆ ಹುಡುಗಿ ಎಂದು ಹೇಳುತ್ತಿದ್ದರು ಅಷ್ಟೇ. ನನಗೆ ನಿನ್ನ ತರಹ ಪೆದ್ದು ಪೆದ್ದು ಹಾಗೆ ಆಡುವ ಹುಡುಗಿನ ರೇಗಿಸುವುದೆಂದರೆ ತುಂಬಾ ಇಷ್ಟ...ಹಾಗೆ ಹೇಳುತ್ತಿದಂತೆ ನೀಲಿ ನಿಮ್ಮ ಕಾಫಿನೂ ಬೇಡ ನೀವು ಬೇಡ ಎದು ಹೊರ ನಡೆದಳು.
ನೀಲಿ ಎಲ್ಲರಿಗೂ ಇಷ್ಟವಾಗುವ ಹುಡುಗಿ. ಅದರಲ್ಲೂ ಪ್ರೇಮಾಳಿಗೆ ತುಂಬಾ ಹತ್ತಿರವಾಗಿದ್ದಳು. ಅದರೂ ಅವಳೇ ನೀಲಿ ಮದುವೆಗೆ ಅಡ್ಡಿಯಾಗಿದ್ದಳು. ಮೋಹನ, ಎಷ್ಟೋ ಸಾರಿ ಇದೇ ವಿಷಯಕ್ಕೆ ವಾದ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ರಾಘವ ಅಮ್ಮನ ಮಾತಿನಂತೆ ಮದುವೆಗೆ ಒಪ್ಪಿದ್ದನು. ರಾಘವ ಸ್ನಾನ ಮುಗಿಸಿ ಶರ್ಟು, ಪಂಚೆ ತೊಟ್ಟು ಪೂಜೆಗೆ ಕುಳಿತ್ತಿರುತ್ತಾನೆ. ಪ್ರೇಮ ಮದುವೆ ಹಾಲ್ಗೆ ಏನೇನು ತೆಗೆದುಕೊಂಡು ಹೋಗಬೇಕೆಂದು ಎತ್ತಿಕೊಳ್ಳುತ್ತಿದ್ದಾಳೆ. ಇನ್ನೊಂದು ಕಡೆ ನೀಲಿ ನೋವಿನ ಭಾರವನ್ನೆಲ್ಲಾ ಹೊತ್ತು ಅಲೆಗೆ ಮುಖವೊಡ್ಡಿ ಳ ಊರಿಂದಾಚೆ ದುಃಖವನ್ನು ಜೀಕುತ್ತಿದ್ದಾಳೆ. ಈ ಪ್ರೀತಿ, ಪ್ರೇಮ, ಅನುರಾಗ, ಮುಂದುವರೆದರೆ ಪ್ರಣಯ ಇವುಗಳ ಅಂತ್ಯ ನೋವೆನಾ? ಅಥವಾ ಅಂತ್ಯವಿಲ್ಲದ ಪ್ರೀತಿಯೊಳಗೆ ಪ್ರೇಮಿಗಳು ನುಸುಳಿ ಅಲ್ಲಿ ಇರಲಾರದೇ ಒದ್ದಾಡಿ ನನ್ನಂತೆ ವಿಷಾದಿಸುತ್ತಿರುತ್ತಾರ? ಅವತ್ತು ರಾಘವ ಎಷ್ಟು ಹತ್ತಿರವಾಗಿದ್ದ ಮನಸ್ಸಿಗೂ ದೇಹಕ್ಕೂ ಹತ್ತಿರ ಬಂದು ಬೆರಳಲ್ಲಿ ನನ್ನನ್ನು ಬೆವರಂತೆ ಕೊಡವಿ ನಡೆದ. ಕೆನ್ನೆ ಮೇಲೆ, ಮನಸ್ಸಿನ ಮೇಲೆ ಗುರುತುಗಳನ್ನು ಉಳಿಸಿಟ್ಟ. ಮನಸ್ಸು ಕೆಟ್ಟರೆ ಯಾರ ಕಣ್ಣಿಗೂ ಕಾಣದಂತೆ ಅಡಗಿಸಬಹುದು. ಈ ದೇಹ,ಮನಸ್ಸು ಎರಡನ್ನು ದೋಚಿ ಹೋದವ, ಈಗ ಮದುವೆ ಮಂಟಪದಲ್ಲಿ ನೀ ಎಲ್ಲರಿಗೂ ಹೊಸಬ. ಆದರೆ ನಾನು ಅನಾಮಿಕಳು. ನನ್ನ ಕನಸನ್ನು, ಮನಸ್ಸನ್ನು ಕೆಂಡದ ಮೇಲೆ ಸುರಿದವನಿಗೆ ನಾ ಯಾವ ಶಿಕ್ಷೆ ನೀಡಲಾಗಲಿಲ್ಲ. ಈಗ ನನ್ನ ಸಾಂತ್ವನ ಮಾಡಲು ಬರುವ ಅಲೆಗಳೂ ನನಗೆಂದೆ ಬಂದಿದೆ ಎಂದರೆ ನಾನು ಹೇಗೆ ನಂಬಲಿ. ಕೂಗುವ ಮನದ ದನಿಗೆ ಉಸಿರು ಭಾರವಾಗಿರುವಾಗ ಯಾರ ತಪ್ಪು ಎನ್ನಲಿ. ಅಷ್ಟೋತ್ತಿಗೆ ಹಿಂದಿನಿಂದ ಯಾರೋ ಭುಜವನ್ನು ಅಲುಗಾಡಿಸಿದಾಗೆ ಆದಾಗ ನೀಲಿ ತಿರುಗಿ ನೋಡುತ್ತಾಳೆ. ಆಗ ಅಮ್ಮಾ ಬಿಗಿಯಾಗಿ ನೀಲಿ ಕೈನ್ನು ಹಿಡಿದು ಮನೆ ಕಡೆ ನಡೆಯುತ್ತಾಳೆ. ಈ ಹೃದಯಕ್ಕೆ ಕಣ್ಣ ರೆಪ್ಪೆಯಂತೆ ಕಾಯುವ ಕಾವಲುಗಾರ ಇರಬೆಕ್ಕಿತ್ತು. ಆಗ ಇಂತಹ ಅನಾಹುತಗಳು ಸಂಭಹಿಸುವುದಿಲ್ಲವಾಗಿತ್ತು. ಹೀಗೆ ದಾರಿ ಉದ್ದಕ್ಕೂ ನೀಲಿ ವಿರಹಗೀತೆ ಸುರಿಯುತ್ತಾಳೆ. ನೀಲಿ ಪ್ರತಿ ಕ್ಷಣ ರೋಧನೆಯಲ್ಲಿ ನಲುಗುತ್ತಿರುವುದನ್ನು ನೋಡಿ ಅಮ್ಮಾ "ನಿನು ನಿನ್ನ ಪಾಡಿಗೆ ಇದಿದ್ದರೆ ಈ ಪ್ರೀತಿ ಪ್ರೇಮ ಅಂತ ಯಾವ ಸಮಸ್ಯೆಯೇ ಬರುತ್ತಿರಲಿಲ್ಲ. ಇದರಲ್ಲಿ ನಿನ್ನ ತಪ್ಪು ಹೆಚ್ಚಾಗಿ ಇರೋದು, ಹೇಳಬೇಕಾಗಿರುವುದೆಲ್ಲಾ ಮುಚ್ಚಿಟ್ಟು ತಪ್ಪುಮಾಡಿದೆ, ಈಗ ನೊಂದುಕೊಂಡರೆ ಯಾರಿಗೆ ನಷ್ಟ . ಆಗಿದೆಲ್ಲಾ ಮರೆತು ಬಿಡು. ಪ್ರೇಮ ಅವರು ಹೇಳಿದ್ದಾರೆ ಯಾವುದನ್ನು ಮನಸ್ಸಲ್ಲಿ ಇಟ್ಟುಕೊಳ್ಳದೆ ಮದುವೆಗೆ ಬರಬೇಕು ಎಂದು, ಅಷ್ಟಕ್ಕೂ ನಿನಗೆ ಪ್ರಿಡ್ಸ ಕಾಯಿಲೆ ಇರುವುದು ಗೊತ್ತಿದ್ದು ಮದುವೆ ಮಾಡಿಕೊಳ್ಳೋಕೆ ಅವರಿಗೇನು ಮತಿಭ್ರಮೆಯೇ?.. ಆದರೆ ನೀಲಿ ಅಮ್ಮಾ ಹೇಳಿದ ಮಾತನ್ನು ಯಾವುದು ಕೇಳಿಸಿಕೊಳ್ಳದೆ .. ತನ್ನ ಲೋಕದಲ್ಲಿಯೇ ಮುಳುಗಿದ್ದಾಳೆ. "ಎದುರಿಗೆ ಬಂದವನ ಮುಖ ನೋಡಲು ಮನಸ್ಸಿಲ್ಲದೆ ನಾನು ಸಿಟ್ಟಿನಲ್ಲೇ ಇದ್ದೆ; ಮೊದಲು ಮಾತು ಶುರು ಮಾಡಿದ್ದೇ ಅವನು "ಇದು ನಮ್ಮ ಕೊನೆಯ ಭೇಟಿ ಇರಬಹುದು. ಪ್ರತಿಯೊಂದು ನನ್ನದೇ ತಪ್ಪು ಎಂದುಕೊಂಡರೆ ನೀನು, ಅದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಈಗಿರುವ ಸಮಸ್ಯೆ ಏನೆಂದು ನಿನಗೆ ಗೊತ್ತಿರಬಹುದು ನಿನಗಿರುವ ಇಷ್ಟು ದೊಡ್ಡ ಕಾಯಿಲೆ ಮುಚ್ಚಿಟ್ಟಿರೋದೆ ನಿನ್ನ ತಪ್ಪು. ಈಗ ಅಮ್ಮನ ಒಪ್ಪಿಸೋದು ತುಂಬಾ ಕಷ್ಟ, ನನಗೆ ನಿನ್ನ ಮದುವೆ ಆಗುವುದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಅಮ್ಮ ಒಪ್ಪಿಕೊಳ್ಳಬೇಕಲ್ಲಾ?"ಎಂದನು. ಎಲ್ಲವನ್ನು ಕೇಳಿಸಿಕೊಂಡ ನೀಲಿ ಇಷ್ಟು ದೊಡ್ಡ ಕಾಯಿಲೆ ಎಂದರೆ...? ಅದನ್ನು ಗುಣಪಡಿಸಲು ಅಸಾಧ್ಯವೇನು ಇಲ್ಲ. ಮನಸ್ಸು ಮಾಡಿದರೆ ಕಾಯಲೆ ಗುಣಮಾಡಬಹುದು ಆದರೆ ನಿಮ್ಮ ಮನಸ್ಸಿನ ಕಾಯಿಲೆ ಯಾರಿಂದಲೂ ಗುಣಮಾಡಲು ಸಾಧ್ಯವಿಲ್ಲ." ಹಾಗಲ್ಲ ನೀಲಿ ಮದುವೆಯೆಂದರೆ ನನ್ನ ಒಬ್ಬನ ನಿರ್ಧಾರವಲ್ಲ ನನಗೂ ನೀನೆಂದರೆ ತುಂಬಾ ಇಷ್ಟ, ಹಾಗಂತ ಭಾವನೆಗೆ ಜೋತು ಬಿದ್ದು ಅರ್ಥವಿಲ್ಲದ ನಿರ್ಧಾರ ತೆಗೆದುಕೊಳ್ಳಲು ಆಗೋದಿಲ್ಲ. ಸ್ವಲ್ಪ ನೀನೆ ಪ್ರ್ಯಾಕ್ಟಿಕಲಾಗಿ ಥಿಂಕ್ ಮಾಡಿ ನೋಡು. "ಹೌದು, ಪ್ರೀತಿ ಎಂದರೆ ಮನಸ್ಸಿಗೆ ಬಂದ ಹಾಗೆ ಅನುಭವಿಸಿ ಮತ್ತೆ ಎಲ್ಲಾ ಮರೆತುಬಿಡೋದು, ಇಲ್ಲ ಕ್ಷಮೆ ಭಿಕ್ಷೆ ಕೇಳಿ ಹೊಂದಾಣಿಕೆ ಮಾಡಿಕೊಳ್ಳೋದು ಆಗಿದ್ದರೆ ಈ ಪ್ರೀತಿ ಎಂಬ ಮುಖವಾಡ ಯಾಕೆ ಬೇಕ್ಕಿತ್ತು. ಇನ್ನೂ ಎಷ್ಟು ವರ್ಷ ಬಿಟ್ಟು ಬೇಕಾದರು ತಿರುಗಿ ಬಂದು ನೋಡು ನಾನು ಹೀಗೆ ಇರತ್ತೀನಿ. ಇದರಲ್ಲಿ ಯಾವುದೇ ಬದಲಾವಣೆ ಇರಲ್ಲ". ಎಂದು ಹೇಳುವುದರೊಳಗೆ ರಾಘವ ಕಣ್ಣಿಂದ ದೂರವಾಗಿದ್ದ. ಎಷ್ಟೋತ್ತಿಗೆ ರಾಘವನ ಯೋಚನೆಯಲ್ಲಿ ಅವಳಿಗೆ ನಿದ್ದೆ ಬಂದಿದೆಯೋ ಗೊತ್ತಿಲ್ಲ. ಅಮ್ಮಾ, ಬೆಳಿಗ್ಗೆ ಎದ್ದು "ನಿನಗೆ ರಾತ್ರಿ ಊಟ ಮಾಡಿ ಮಲಗಬೇಕು ಎನ್ನುವುದು ಗೊತ್ತಾಗಲ್ವಾ?" ಎಂದು ಬೊಬ್ಬೇ ಹೊಡಿಯುವಾಗಲೇ ಗೊತ್ತಾಗಿದ್ದು ಇಂದು ರಾಘವನ ಮದುವೆ ಎಂದು. ಈ ಆಡಂಬರದ ನಡುವೆ ನೀಲಿಯ ಒದ್ದಾಟ ಯಾರು ಕೇಳದಂತಾಗಿತ್ತು. ಮದುವೆ ಮನೆಯಲ್ಲಿ ಸಾವಿರ ಕಂಗಳ ನಡುವೆ ರಾಘವ ನೀಲಿಯ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ನೀಲಿಯ ಕಣ್ಣಲ್ಲಿ ಕಂಬನಿ ಕೆಂಡದಂತೆ ಕೆನ್ನೆಯ ಮೇಲೆ ತೇಲಿ ಹೋಗುತಿತ್ತು. ಅಂದು ಅಲೆಗಳು ’ರಾನಿ’ (ರಾಘವ್ಘನೀಲಿ)ಬರೆದಾಗಲೆಲ್ಲಾ ಅಳಿಸಿಹಾಕುತ್ತಿತ್ತು. ಇಂದು ನೀಲಿಯೇ ತನ್ನ ಕೈಯಾರೆ ಎಲ್ಲವನ್ನು ಅಳಿಸುತ್ತಿದ್ದಾಳೆ.
ಎಂ.ಜಿ. ತಿಲೋತ್ತಮೆ
ಭಟ್ಕಳ