ರಾಣೇಬೆನ್ನೂರಿನಲ್ಲಿ ಪ್ರೇಕ್ಷಕರ ಮನಗೆದ್ದ ರಂಗೋತ್ಸವ
ಆಧುನಿಕ ಜೀವನ ಶೈಲಿಯ ವೈಭವೀಕರಣದ ಮೋಹಕ್ಕೆ ಸಿಕ್ಕು ಹಣ. ಅಧಿಕಾರ ಮತ್ತು ಪ್ರತಿಷ್ಠೆಯ ಬೆನ್ನು ಹತ್ತಿದ ಶಿಕ್ಷಿತ ಸಮುದಾಯವು ತಮ್ಮ ಮಹದಾಸೆಯ ಈಡೇರಿಕೆಗಾಗಿ ಅತಿಯಾದ ಪ್ರೀತಿ. ಮಮತೆ. ಹಾಗೂ ಉನ್ನತ ಹುದ್ದೆ ದೊರಕಿಸುವ ಹುಚ್ಚಿಗೆ ಮರುಳಾಗಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಒಂಟಿತನದ ಬದುಕಿನಲ್ಲಿ ಏಕಾಂಗಿತನದ ತಲ್ಲಣಗನ್ನು ಅನುಭವಿಸುತ್ತಾರೆ.ಹಳ್ಳಿಯ ಆಸ್ತಿ ಪಾಸ್ತಿಯನ್ನೆಲ್ಲಾ ಮಾರಿ ನಗರಗಳ ಆಧುನಿಕ ಜೀವನಕಾಕಾಗಿ ಅಲ್ಲಿಯೇ ಪ್ಲಾಟ್ ಗಳನ್ನೂ ಕೊಂಡು ಅನಾಥ ಬದುಕನ್ನು ನಡೆಸುತ್ತಾರೆ. ಮಾನವೀಯ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿ ಹಣ. ಆಸ್ತಿ ಒಡವೆಗಳೇ ಮುಖ್ಯ ಎಂಬ ವಿಷ ಜಾಲಕ್ಕೆ ಬಲಿಯಾಗಿ ತಾವೂ ಒಂಟಿ ಬದುಕಿನಲ್ಲಿ ಸಾಯುತ್ತಾರೆ ಎಂಬ ಕಥಾ ಹಂದರ ನಾಟಕ “ನೆಮ್ಮದಿ ಅಪಾರ್ಟ್ ಮೆಂಟ್” ಪ್ರೇಕ್ಷಕರನ್ನು ಕೊನೆಯತನಕ ಹಿಡಿದಿಡುವುದರಲ್ಲಿ ಯಶಸ್ವಿಯಾಯಿತು.ವಿದೇಶದಲ್ಲಿರು ಮಗ ಹಾಗೂ ಪಕ್ಕದ ಕ್ರಾಸ್ ನ ಅಪಾರ್ಟ್ ಮೆಂಟ್ ನಲ್ಲಿರುವ ಮಗಳು ತಂದೆ ತೀರಿ ಹೋದ ಎಂಬ ಸುದ್ದಿಯನ್ನು ಕೇಳಿದ ತಕ್ಷಣ ಕಕ್ಕುಲತೆಯ ನೋವಿನ ನಾಟಕವಾಡುತ್ತಾ ಹಣ. ಆಸ್ತಿಯನ್ನು ಕಬಳಿಸುವ ನಾಟಕವಾಡುತ್ತಾರೆ. ಮಗ ತನ್ನ ಹೆಸರಿಗೆ ವಿಲ್ ಬರೆಯದೆ ಅನಾಥಾಶ್ರಮಕ್ಕಾಗಿ ಆಸ್ತಿ ನೀಡಿ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ ಅರ್ಧ ದಾರಿಯಿಂದಲೇ ಮರಳಿ ಹೋಗುತ್ತಾನೆ. ಪೋಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಕೊಂಡು ಹಣ ಕೀಳಲು ಬರುತ್ತಾರೆ. ಗೆಳೆಯ ವರದರಾಜ್ ಹಾಗೂ ಮನೆಯವರನ್ನೆಲ್ಲಾ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಅಂತಿಮವಾಗಿ ಲಾಯರ್ ಬಂದು “ತಂದೆ ತೀರಿಕೊಂಡಿಲ್ಲ ಬದುಕಿದಾದಾರೆ” ಎಂದು ಖಚಿತಪಡಿಸಿದಾಗ ಎಲ್ಲರೂ ಆಶ್ಚರ್ಯದಿಂದ ಅವಕ್ಕಾಗಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳುತ್ತಾರೆ.
ಹಣ, ಆಸ್ತಿ, ಅಧಿಕಾರಕ್ಕಾಗಿ ಒಂಟಿತನದ ಬದುಕಿನ ಜಂಜಾಟದಲ್ಲಿ ಮಾನವೀಯ ಮೈಲ್ಯಗಳನ್ನೇ ಮರೆತು ಜೀವನನಾಂದವನ್ನು ಕಳೆದುಕೊಂಡು ಬದುಕುವ ಆಧುನಿಕ ಜನಜೀವನದ ನಗರಗಳ ಬದುಕನ ರಸಾನುಭವವನ್ನು ಪ್ರೇಕ್ಷಕರ ಮನದಾಳಕ್ಕೆ ಇಳಿಸುವಲ್ಲಿ ಪ್ರಬುದ್ದ ನಟನೆಯ ಮೂಲಕ ನಟರು ಯಶಸ್ಸಿಯಾಗಿದ್ದಾರೆ. ಆಧುನಿಕ ಜೀವನಶೈಲಿಯ ವಾಸ್ತವವಾದಿ ನಾಟಕವು ಸರಳ ಉಡುಗೆ ತೊಡುಗೆ. ಜನಪದ. ಸಿನಿಮಾ ಮತ್ತು ರಂಗಗೀತೆಗಳನ್ನು ಬಳಸಿಕೊಂಡ ರೆಡಿಮೇಡ್ ಸಂಗೀತ ಸಂಯೋಜನೆ ಆಧುನಿಕವಾಗಿಯೇ ಇತ್ತು. ಲಗು ಹಾಸ್ಯದ ಮೂಲಕವೇ ಮಾನವನ ಸೂಕ್ಷ್ಮ ಸಂವೇದನಾ ವಿಷಯವನ್ನು ಪ್ರೇಕ್ಷಕರಿಗೆ ತಲುಪಿಸಿದ್ದು ನಾಟಕ ಬಂಧದ ಗಟ್ಟಿತನವನ್ನು ಎತ್ತಿ ಹಿಡಿಯುತ್ತದೆ.ಒಟ್ಟಾರೆ ನಾಟಕವು ರಂಗ ತರಬೇತಿಯ ಸಂದರ್ಭದಲ್ಲಿ ಸಂಯೋಜನೆಗೊಂಡ (ಇಂಪ್ರ್ಯೂವೈಜೇಷನ್) ಋಠಿಡಿಠಚಿಣಠ ಆದಂತೆ ಕಾಣುತ್ತದೆ. ಸರಳವಾದ ಬೆಳಕಿನ ಸಂಯೋಜನೆ ಸೂಕ್ತವೆನಿಸಿತ್ತು. ಅಭಿನಯಿಸಿದ ಪ್ರತಿಯೊಂದು ಪಾತ್ರವೂ ಜೀವಂತಿಕೆಯಿಂದ ಕೂಡಿತ್ತು. ಸಣ್ಣ ಕಥೆಯೊಂದನ್ನು ಬೇಕು ಅಂತಲೇ ಒಂದೂವರೆ ತಾಸಿನವರೆಗೆ ಎಳೆದಂತೆ ಕಂಡು ಮಧ್ಯೆ ಮಧ್ಯೆ ಉಪ ಪಾತ್ರಗಳ ಪರಿಚಯ ಮತ್ತು ಹಾಸ್ಯವನ್ನು ಸೇರಿಸಿದ್ದು ಸಾಬೀತುಪಡಿಸಿತು.ಏನೇ ಆದರೂ ಆ ವಿಷಯವೂ ಎಲ್ಲೂ ಮುಖ್ಯೆ ಕಥೆಗೆ ದಕ್ಕೆ ತರಲಿಲ್ಲವಾದ್ದರಿಂದ ನಾಟಕ ತನ್ನ ನಿರಂತರತೆಯನ್ನು ಕಾಪಿಟ್ಟುಕೊಂಡು ಯಶ ಕಂಡಿತು. ವರದರಾಜ. ಮತ್ತು ವಾಚ್ಮ್ಯಾನ್ ಪಾತ್ರಧಾರಿಗಳು ನಾಟಕದ ಕೇಂದ್ರ ಬಿಂಧುವಿನಂತೆ ಗೋಚರಿಸಿದರು. ಹಾಸ್ಯ ಪಾತ್ರದಲ್ಲಿ ಸಾಜಿ ತನ್ನ ಪ್ರತಿಭೆಗೆ ಸಾಣಿ ಹಿಡಿದರು.ಆಧುನಿಕ ಜೀವನ ಶೈಲಿಯ ಪ್ಲಾಟ್ ವಾಸಿಗಳ ತಲ್ಲಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಾಟಕ ನೆಮ್ಮದಿ ಅಪಾರ್ಟ್ ಮೆಂಟ್ ಷ್ರೇಕ್ಷಕರ ಮನದಲ್ಲಿ ಉಳಿಯಿತು. ಮೂರನೇ ದಿನ ಪ್ರದರ್ಶನಗೊಂಡ ಕುವೆಂಪು ವಿರಚಿತ “ಚಂದ್ರಹಾಸ” ನಾಟಕವು ಗ್ರೀಕ್ ನಾಟಕಕಾರ ಯೂರಿಪಿಡಿಸ್ ನ ದೊರೆ ಈಡಿಪಸ್ ನಾಟಕದ ಕಥಾ ವಸ್ತುವನ್ನೂ ನೆನಪಿಗೆ ತಂದಿತು. ಕೆಟ್ಟವರಿಗೆ ಕೆಟ್ಟದ್ದೇ ಆಗುತ್ತದೆ. ಒಳ್ಳೆಯವರನ್ನು ವಿಧಿ ಹೇಗಾದರೂ ರಕ್ಷಿಸುತ್ತದೆ. ಎಂಬ ಸಂದೇಶವನ್ನು ತಿಳಿಸಿತು. ದುಷ್ಟಬುದ್ದಿ ಎಂಬ ಮಂತ್ರಿಯು ರಾಜ್ಯದ ಉತ್ತರಾಧಿಕಾರಿ ತಾನೇ ಆಗಬೇಕೆಂಬ ದುರಾಸೆಯಿಂದ ರಾಜಕುಮಾರನನ್ನೆ ಕೊಲ್ಲಿಸಲು ಹೋಗಿ ಕೊನೆಗೆ ತನ್ನ ಮಗನನ್ನೇ ಕೊಲ್ಲಿಸಿ. ಆ ದುಃಖವನ್ನು ಸಹಿಸಲಾರದೆ ತನ್ನ ಜೀವವನ್ನು ತಾನೇ ತೆಗೆದುಕೊಳ್ಳುತ್ತಾನೆ. ಜೈಮಿನಿ ಭಾರತದಲ್ಲಿ ಬರುವ ಕಡಥೆಯೊಂದನ್ನು ಕುವೆಂಪು ಅವರು ಸ್ವಲ್ಪ ಬದಲಾವಣೆಯನ್ನು ಮಾಡಿ ರಂಗರೂಪಕ್ಕೆ ತಂದಿದ್ದಾರೆ. ಹುಟ್ಟಿನಿಂದಲೇ ರಾಜಪುತ್ರನಾದರೂ ಅದೃಷ್ಠಹೀನ ಹಾಗೂ ಅನಾಥನಾಗಿ ದಾದಿಯೊಬ್ಬಳ ಆರೈಕೆಯಲ್ಲಿ ಬೆಳೆಯುತ್ತಾನೆ. ರಾಜಪುರೋಹಿತನಾದ ಗಾವಲನು ಬೀದಿ ಬೀದಿ ಅಲೆಯುತ್ತಿದ್ದ ಈ ಬಾಲಕನ ತೇಜಸ್ಸನ್ನು ಕಂಡು ಈ ಬಾಲಕ ಮುಂದೊಂದು ದಿನ ನಮ್ಮ ದೇಶದ ರಾಜನಾಗುತ್ತಾನೆ ಎಂದು ಭವಿಷ್ಯ ನುಡಿಯುತ್ತಾನೆ.
ಮಂತ್ರಿಯಾದ ದುಷ್ಟಬುದ್ದಿ ತನ್ನ ಮಗನೇ ರಾಜನಾಗಬೇಕೆಂದು ಬಯಸಿ ಆ ಬಾಲಕನನ್ನು ಕೊಲ್ಲಿಸುವ ನಾನಾ ತಂತ್ರಗಳನ್ನು ಹೆಣೆಯುತ್ತಾನೆ. ಆದರೆ ದೈವೀಕೃಪೆಯಿಂದ ಬಾಲಕ ಚಂದ್ರಹಾಸ ಬದುಕುಳಿಯುತ್ತಾನೆ. ಮಕ್ಕಳಿಲ್ಲದ ಚಂದನಾವತಿಯ ರಾಜನನ್ನು ಸೇರಿ ರಾಜಕುಮಾರನಾಗುತ್ತಾನೆ.
ಚಂದ್ರಹಾಸ ಬದುಕುಳಿದಿರುವ ಸುದ್ದಿಯನ್ನು ತಿಳಿದ ದುಷ್ಟಬುದ್ದಿ ಹೇಗಾದರೂ ಮಾಡಿ ಅವನನ್ನು ಕೊನೆಗಾಣಿಸಬೇಕೆಂದು ಏಕಾಂಗಿಯಾಗಿ ತನ್ನ ಮಗನ ಬಳಿ ಪತ್ರ ಕೊಡಲು ಕಳುಹಿಸುತ್ತಾನೆ.ವಿಷ ಹಾಕಿ ಕೊಲ್ಲು ಎಂಬ ಪತ್ರವನ್ನು ಓದಿದ ಮಗಳು ಅದನ್ನೂ ತಿದ್ದಿ ವಿಷೆಯಳೊಂದಿಗೆ ಮದುವೆಯಾಗು ಎಂದು ಮಾಡುತ್ತಾಳೆ. ಸಾಯಬೇಕಾದವನು ಅಳಿಯನಾದ ಆದರೂ ಅವನನ್ನು ಕೊಲ್ಲಲೇಬೇಕೆಂದು ನಿರ್ಧರಿಸಿ ಅಳಿಯನನ್ನು ಪೂಜಾ ಸಾಮಾಗ್ರಿಗಳೊಂದಿಗೆ ಕತ್ತಲಲ್ಲಿ ಚಂಡಿಕಾಲಯಕ್ಕೆ ಕಳುಹಿಸಿ ಅಲ್ಲಿಗೆ ಕೊಲೆಗಡುಕರನ್ನು ಕಳುಹಿಸುತ್ತಾನೆ.
ಆದರೆ ಅಲ್ಲಿ ಆದುದೇ ಬೇರೆ ಇವನ ಬದಲಿಗೆ ಹಲ್ಲೆಗೊಳಗಾದವನು ದುಷ್ಟಬುದ್ದಿಯ ಮಗ ಮದದನು. ಯಾರನ್ನೋ ಕೊಲ್ಲಲು ಹೋಗಿ ತನ್ನ ಮಗನನ್ನೆ ಕಳೆದುಕೊಂಡ ದುಷ್ಟಬುದ್ದಿಯು ಪುತ್ರಶೋಕ ತಡೆಯಲಾರದೆ ತನ್ನ ಕತ್ತಿಯಿಂದ ತಾನೇ ಇರಿದುಕೊಂಡು ಸಾಯುತ್ತಾನೆ. “ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ” ಎಂಬಂತೆ ನಾಟಕದಲ್ಲಿ ಒಳಿತು ಕೆಡುಕುಗಳ ನಡುವಿನ ಸಂಘರ್ಷದಲ್ಲಿ ಕೊನೆಗೆ ಒಳಿತಿಗೆ ಮಾತ್ರ ಜಯ ಸಿಗುತ್ತದೆ ಎನ್ನುವುದನ್ನು ನಾಟಕ ಸ್ಪಷ್ಟಪಡಿಸುತ್ತದೆ. ಮೂರು ದಿನಗಳ ಕಾಲ ನಡೆದ ಈ ನಾಟಕೋತ್ಸವದಲ್ಲಿ ಮೂರೂ ನಾಟಕದಲ್ಲಿ ನಾಡಿನ ವಿವಿಧ ಜಿಲ್ಲೆಯ ಕಲಾವಿದರಾದ ಉದಯಕುಮಾರ. ಸುನಿಲ್ ಕುಮಾರ ಎಸ್. ಶಂಕರ ಎಂ ಗಂಗಾವತಿ. ಸುಮಿತ್ರ.! ಆರ್ ಜಿ. ಆನಂದ ಸುಲದಾಳ. ಮಹಂತೇಶ ಬೆಳ್ಳಕ್ಕಿ. ನಿಶಾಂತ್ ಮೈಸೂರು. ಸುನಿತಾ ದೇವು ಜೋರೆ. ಶಿಲ್ಪಾ ನಾಗರಾಜ. ಕೃಷ್ಣ ಆ ಬಡಿಗೇರ. ಶಿವಕುಮಾರ ಎಂ ರೋಹಿತ್ ಅಶೋಕ ಕಲಬುರಗಿ. ಜೀವನ್ ಗೌಡ ಚಾಮರಾಜನಗರ. ಮುಂತಾದ ನಟರು ತಮ್ಮ ವೃತ್ತಿಪರ ಅಭಿನಯದ ಕೌಶಲ್ಯವನ್ನು ಪ್ರದರ್ಶಿಸಿದರು.
ರಂಗ ಸಜ್ಜಿಕೆ. ಬೆಳಕು. ಉಡುಗೆ. ಸಂಗೀತ ಎಲ್ಲವೂ ಕಥಾ ವಸ್ತುವಿಗೆ ಪೂರಕವೆನಿಸಿದ್ದವು.
ಖ್ಯಾತ ನಿರ್ಧೇಶಕರಾದ ಪ್ರಮೋದ ಶಿಗ್ಗಾವ್ .ನವೀನ್ ಮಂಡ್ಯ ಹಾಗೂ ಭೀಮೇಶ್ ಅವರ ಶ್ರಮ ಸಾರ್ಥಕವಾಗಿದೆ.
ರಾಣೇಬೆನ್ನೂರಿನ ಶಾಸಕರಾದ ಶ್ರೀ ಅರುಣಕುಮಾರ ಅವರ ಕಲಾ ಪೋಷಕ ಸಹೃದಯತೆಯಿಂದ ಸಾಣೇಹಳ್ಳಿ ಮಠದ ಸ್ಥಳಿಯ ಭಕ್ತರಾದ ಶ್ರೀ ಜಿ ಜಿ ಹೊಟ್ಟಿಗೌಡ್ರ. ರುದ್ರ್ಪ ಮಾರೇರ. ಹಾಗೂ ಬಿ ಪಿ ಶಿಡೇನೂರು ಅವರು ರಂಗೋತ್ಸವವನ್ನು ಸಂಘಟಿಸಿ ರಾಣೇಬೆನ್ನೂರಿನ ರಂಗಾಸಕ್ತರಿಗೆ ರಂಗ ರಸದೌತಣವನ್ನು ನೀಡಿದರು.
- ವೆಂಕಟೇಶ ಈಡಿಗರ
ರಂಗಕರ್ಮಿ/ರಂಗ ಸಾಹಿತಿ
ರಾಣೇಬೆನ್ನೂರು
- * * * -