ಬಳ್ಳಾರಿ

ಹಿಂದೂ ಸನಾತನ ಸಂಸ್ಖೃತಿಯನ್ನು ಉಳಿಸಲು ರಂಗೋಲಿ ಸ್ಪರ್ಧೆ: ರುಕ್ಮಿಣಿ

ಹಿಂದೂ ಸನಾತನ ಸಂಸ್ಖೃತಿಯನ್ನು ಉಳಿಸಲು ರಂಗೋಲಿ ಸ್ಪರ್ಧೆ: ರುಕ್ಮಿಣಿ

ಬಳ್ಳಾರಿ ಜ 13: ನಗರದಲ್ಲಿ ದೇಶದ ಹಿಂದೂ ಸನಾತನ ಸಂಸ್ಖೃತಿಯನ್ನು ಉಳಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದ ಎಂ.ಜಿ.ಎಂ.ಟ್ರಸ್ಟ್‌ ಹಾಗೂ ದಿವಾಕರಬಾಬು ಅಭಿಮಾನಿ ಬಳಗ ಮತ್ತು ಜಿಲ್ಲಾಯುವ ಕಾಂಗ್ರೆಸ್ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ  ರಂಗೋಲಿ ಸ್ಪರ್ದೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂ.ಜಿ.ಎಂ.ಟ್ರಸ್ಟ್‌ ನ ಕಾರ್ಯದರ್ಶಿ ರುಕ್ಮಿಣಿ ದಿವಾಕರಬಾಬು ತಿಳಿಸಿದ್ದಾರೆ. ಎಂ.ಜಿ.ಎಂ ಟ್ರಸ್ಟ್‌. ದಿವಾಕರಬಾಬು ಅಭಿಮಾನಿ ಬಳಗ ಹಾಗೂ  ಜಿಲ್ಲಾ ಯುವ ಕಾಂಗ್ರೆಸ್ ಜಂಟಿಯಾಗಿ ರಂಗೋಲಿ ಸ್ಪರ್ಧೆಯನ್ನು ನಗರದ 13 ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  

ಕಳೆದ 5 ವರ್ಷಗಳಿಂದ ಎಂ.ಜಿ.ಎಂ  ಶಾಲೆಯ ವಿದ್ಯಾರ್ಥಿನಿಯರಿಗೆ ಜನವರಿ13 ರಂದು ಸರ್ಧೆ ಏರಿ​‍್ಡಸಿ ಬಹುಮಾನ ವಿತರಿಸಿ ಪ್ರೋತ್ಸಾಹ ನೀಡುತ್ತಲಿದ್ದೇವೆ ಕಳೆದ ವರ್ಷದಿಂದ ನಗರಾದ್ಯಂತ ರಂಗೋಲಿ ಸ್ಪಧೆೆರ್ ಹಮ್ಮಿಕೊಳ್ಳಲು ನಿರ್ಧಾರಿಸಲಾಗಿತ್ತು. ಸಾಮಾನ್ಯವಾಗಿ ಮಕರ ಸಂಕ್ರಾತಿ ದಿನದಂದು ಮನೆಯ ಮುಂದೆ ರಂಗೋಲಿ ಬಿಡಿಸುವುದು ವಿಶೇಷವಾದ ಆಚರಣೆ ಇದೆ. ವಿದ್ಯಾರ್ಥಿಗಳ ತಮ್ಮ ಮನಸ್ಸಿನಲ್ಲಿ ಇರತಕ್ಕಂತ ಪ್ರತಿಬಿಂಬವನ್ನು ರಂಗೋಲಿಯ ಬಣ್ಣದ ಮೂಲಕ ಚಿತ್ರ ಬಿಂಬಿಸಿದ್ದಾರೆ. ಇಂದಿನ ದಿನಮಾನಗಳಲ್ಲಿ ಯಾಂತ್ರಿಕ ಜೀವನದ ಮಧ್ಯೆ  ನಮ್ಮ ಸಂಸ್ಕೃತಿ ಮತ್ತು ಆಚರಣೆಯನ್ನು ನಾವು ಮರೆಯುತ್ತಲಿದ್ದೇವೆ. ಇದನ್ನು ಮತ್ತೇ ಜನರಿಗೆ ನೆನಪಿಸುವ ಹಾಗೂ ಪ್ರೋತ್ಸಾಹಿಸುವ ಕಾರ್ಯ ಕ್ಕೆಮುಂದಾಗಿದೆ ಎಂದರು.  

ಇಂದು ರಂಗೋಲಿ ಸ್ಪರ್ಧೆ ಹಾಗೂ  ಬಹುಮಾನ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ. ಎಂ.ಜಿ.ಎಂ ಶಾಲೆಯ ಮೈದಾನ.3 ನೇ ವಾರ್ಡ ನ ಬಾಲಾಂಜಿನೇಯ ಸ್ವಾಮಿ ಸ್ವಾಮಿ ದೇವಸ್ಥಾನದ ಬಳಿ. ಕಪಲ್ ರಸ್ತೆಯ ಲಾ ಕಾಲೇಜ್ ಮೈದಾನ, ವಿಯಾನಿ ವಿದ್ಯಾಶಾಲೆ,ರಾಘವೇಂದ್ರ ಕಾಲೋನಿಯ ರೂಟ್ಸ್‌ ಪಬ್ಲಿಕ್ ಸ್ಕೂಲ್, ಕೋಟೆ  ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ನಂತರ ಮಿಲ್ಲಾರ ಪೇಟೆಯ ಸೋಸೈಟಿ ರೈಸ್ ಮಿಲ್, ಕಾಕರ್ಲ  ತೋಟ,ಶ್ರೀರಾಂಪುರ ಕಾಲೋನಿಯ ಮೈದಾನ, ಲಿಮ್ರಾ ರೈಸ್ ಮಿಲ್, ಬಾಲ ಬೋಧನೆ  ಶಾಲೆ, ನೆಹರು ಕಾಲೋನಿಯ ಪಾರ್ಕನಲ್ಲಿ ರಂಗೋಲಿ ಸ್ಪರ್ಧೆಯನ್ನು ಏರಿ​‍್ಡಸಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.  

ವಿಜೇತರಿಗೆ ಬಹುಮಾನ ವಿತರಣೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಮಾಜಿ ಶಾಸಕ ನಾರಾ ಸೂರ್ಯ ನಾರಯಣರೆಡ್ಡಿ ಹಾಗೂ ಪಾಲಿಕೆ ಸದಸ್ಯ ನಂದೀಶ್, ನಗರದ ಇತರ ಭಾಗಗಳಲ್ಲಿ ಮುಖಂಡರುಗಳಾದ ಮಹಾನಗರ ಪಾಲಿಕೆ ಸದಸ್ಯ ಪ್ರಭಂಜನ್, ಕಾಂಗ್ರೆಸ್ ಪಕ್ಷದ  ಮಹಿಳಾ ಅಧ್ಯಕ್ಷೆ ಮಂಜುಳ, ಮಾಜಿ ಪಾಲಿಕೆ ಸದಸ್ಯ ಎಂ.ರಾಘವೇಂದ್ರ, ಎಂ.ತುಳಸಿರಾಮ್, ವಿನಯ್ ಕುಮಾರ್ ಯುವ ಕಾಂಗ್ರೆಸ್ ಅಧ್ಯಕ್ಷ ಚಾಂದ್‌ಭಾಷ, ವೇಣುಗೋಪಾಲ್, ಸುನೀಲ್, ಬಿ.ಎಸ್‌.ವಲಿ, ಸಾಧಿಕ್, ಗೌತಮ್, ಸಮೀರ್,  ಜಿ.ತರುಣ್, ಶಿವರಾಮ್, ಜಿಲ್ಲಾ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಗೂ ದಿವಾಕರಬಾಬು ಅಭಿಮಾನಿಗಳ ಬಳಗದ ಮುಖಂಡರುಗಳು ನೇತೃತ್ವ ವಹಿಸಿದ್ದರು. 


ಸುದ್ದಿ ಓದಿ