ಮಾಂಸ ತಿನ್ನೋದಿಲ್ವಂತೆ ಮೋಹಕತಾರೆ!
ಬೆಂಗಳೂರು,
ಡಿಸೆಂಬರ್ 30: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಮೋಹಕತಾರೆ ರಮ್ಯಾ, ಸಂಪೂರ್ಣವಾಗಿ
ಮಾಂಸಾಹಾರ ತ್ಯಜಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಮಾಂಸಾಹಾರ
ತ್ಯಜಿಸಿರುವ ಬಗ್ಗೆ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, 'ಈ ವರ್ಷದ ಆರಂಭದಲ್ಲಿ ನಾನು
ಸಸ್ಯಾಹಾರಿಯಾಗಿ ಮಾರ್ಪಟ್ಟಿದ್ದೇನೆ. ಮತ್ತು ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಅನೇಕ
ಕಾರಣಗಳಿಗಾಗಿ ನಿಮ್ಮ ದೇಹಕ್ಕೆ ಪ್ರೋಟೀನ್ ಬೇಕು. ಆದರೆ ನಾನು ಮಾಂಸಾಹಾರವಿಲ್ಲದೆ ಚೆನ್ನಾಗಿ ಇರುತ್ತೇನೆ.'
ಎಂದಿದ್ದಾರೆ.
ರಮ್ಯಾ ನಿರ್ಧಾರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
'ನಾನು ಸಸ್ಯಾಹಾರದ ಬಗ್ಗೆ ಆಲೋಚಿಸುತ್ತೇನೆ. ಇದು ಕಷ್ಟ ಎನ್ನುವುದು ಗೊತ್ತು. ನಾನು ತುಂಬಾ ಇಷ್ಟ ಪಡುವ ಐಸ್ ಕ್ರೀಮ್ ಸೇರಿದಂತೆ ಬೇರೆ ಪರ್ಯಾಯಗಳಿವೆ ಎಂದು ನನಗೆ ತಿಳಿದಿದೆ. ನಾನು ನನ್ನ ಮನಸ್ಸನ್ನು ರೂಪಿಸಿಕೊಳ್ಳಬೇಕು.' ಎಂದು ಬರೆದುಕೊಂಡಿದ್ದು, ಸ್ನೇಹಿತರ ಜೊತೆ ಹೋಟೆಲ್ ನಲ್ಲಿ ಕುಳಿತಿರುವ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.