ಸಿಂಧಗಿ

ಅಂಚೆ ಮತ ಎಣಿಕೆಯಲ್ಲಿ ರಮೇಶ್ ಭೂಸನೂರ ಮುನ್ನಡೆ!

ಅಂಚೆ ಮತ ಎಣಿಕೆಯಲ್ಲಿ ರಮೇಶ್ ಭೂಸನೂರ ಮುನ್ನಡೆ!

ಸಿಂದಗಿ, ನ 2: ಬೆಳಗ್ಗೆ 8 ಗಂಟೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ಮತ  ಎಣಿಕೆ ಆರಂಭಗೊಂಡಿದೆ. ಅಂಚೆ ಮತ‌ ಎಣಿಕೆಯಲ್ಲಿ‌ ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮುನ್ನಡೆ ಸಾಧಿಸಿದ್ದಾರೆ. 1296 ಅಂಚೆ ಮತಗಳ ಎಣಿಕೆ ಮಾಡಲಾಗುತ್ತಿದ್ದು, ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮುನ್ನಡೆ ಸಾಧಿಸಿದ್ದಾರೆ.

ಸಿಂದಗಿ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 2,34,437, ಪುರುಷ ಮತದಾರರು 1,20,939, ಮಹಿಳಾ ಮತದಾರರು 1,13,466, ಇತರೆ ಮತದಾರರು 32, ಚಲಾವಣೆಯಾದ ಒಟ್ಟು ಮತಗಳು 1,62,852, ಪುರುಷರು 85,859, ಮಹಿಳೆಯರು 76,990, ಇತರೆ ಮತದಾರರು 3, ಒಟ್ಟು ಮತದಾನ ಪ್ರತಿಶತ 69.47, ಅಖಾಡಲ್ಲಿರೋ ಅಭ್ಯರ್ಥಿಗಳು ಒಟ್ಟು 6. ಅಶೋಕ ಮನಗೂಳಿ ಕಾಂಗ್ರೆಸ್ ಪಕ್ಷ, ನಾಜಿಯಾ ಅಂಗಡಿ ಜೆಡಿಎಸ್ ಪಕ್ಷ, ರಮೇಶ ಭೂಸನೂರ ಬಿಜೆಪಿ ಪಕ್ಷ, ಡಾ.ಸುನಿಲ್ ಕುಮಾರ್ ಹೆಬ್ಬಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಪಕ್ಷೇತರರಾಗಿ ಜಿಲಾನಿ ಮುಲ್ಲಾ ಹಾಗೂ ದೀಪಿಕಾ ಎಸ್ ಸ್ಪರ್ಧಿಸಿದ್ದಾರೆ.

ಸುದ್ದಿ ಓದಿ