ಹಗರಿಬೊಮ್ಮನಹಳ್ಳಿ

ಜ.20ರಂದು ಹಂಪಾಪಟ್ಟಣದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

ಜ.20ರಂದು ಹಂಪಾಪಟ್ಟಣದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.ಜ.07: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಜ.20ರಂದು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀಹಾಲಸ್ವಾಮಿ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಹಂಪಾಪಟ್ಟಣ ಗ್ರಾಮದಲ್ಲಿ ಹೆಚ್ಚು ಸಾರ್ವಜನಿಕ ಸಮಾರಂಭಗಳು ಹಾಗೂ ಧಾಮರ್ಿಕ ಕಾರ್ಯಕ್ರಮಗಳು ನಡೆಯುತ್ತವೆ ಇದಕ್ಕೆ ಆ ಗ್ರಾಮದವರ ಸಹಕಾರ ಮುಖ್ಯವಾಗಿದೆ. ಹಂಪಾಪಟ್ಟಣ ಗ್ರಾಮದಲ್ಲಿ ಇದೇ ತಿಂಗಳ ಜನೆವರಿ 19 ಮತ್ತು 20ರಂದು ನಡೆಯುವ ಧಾಮರ್ಿಕ ಕಾರ್ಯಕ್ರಮದಲ್ಲಿ ಮೊದಲ ದಿನ ವಿಘ್ನೇಶ್ವರ, ಈಶ್ವರ, ಶರಣಬಸವೇಶ್ವರ, ನಂದಿಮೂರ್ತಿಗಳ ಪ್ರತಿಷ್ಠಾಪನಾ ಮತ್ತು ಗಣ ಹೋಮ, ರುದ್ರ ಹೋಮ, ವಿಶೇಷ ಪೂಜೆಗಳು ಜರುಗುತ್ತವೆ ಎರಡನೇ ದಿನ ಜ.20ರಂದು ಮಹಾಸ್ವಾಮಿಗಳು ಪಟ್ಟಾಭಿಷೇಕವಾದ ನಂತರ ಇದೇ ಪ್ರಥಮ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಹಂಪಾಪಟ್ಟಣ ಗ್ರಾಮದಲ್ಲಿ ಇಲ್ಲಿಯವರೆಗೂ ಯಾವುದೇ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ನಡೆದಿರುವುದಿಲ್ಲ ಅದ್ದರಿಂದ ಸ್ವಾಮಿಗಳ ಪುರ ಪ್ರವೇಶ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಮುಖ್ಯವಾಗಿ ಧರ್ಮಸಭೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಲು, ಗ್ರಾಮದ ದೈವಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೇರಿ ಹಮ್ಮಿಕೊಂಡಿರುವ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರು ತನು, ಮನ, ಧನದೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಅಪರೂಪಕ್ಕೊಮ್ಮೆ ಲೋಕ ಕಲ್ಯಾಣಕ್ಕಾಗಿ ಜರುಗುವ ಇಂತಹ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ, ಸೇವೆ ಸಲ್ಲಿಸುವವರು ಕಾರ್ಯಕ್ರಮ ಸಮಿತಿಯನ್ನು ಸಂಪರ್ಕಿಸುವಂತೆ ಕರೆ ನೀಡಿದರು. 

 ಶ್ರೀಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಹಂಪಾಪಟ್ಟಣದ ಗ್ರಾಮದಲ್ಲಿ ಎಂದಿಗೂ ನಡೆಯುವ ಧಾಮರ್ಿಕ ಕಾರ್ಯಕ್ರಮಗಳಿಗೆ ಸಹಕಾರ ಪ್ರತಿಯೊಬ್ಬರದಿರುತ್ತೆ. ಆದರೆ, ಇದು ಗ್ರಾಮದಲ್ಲಿಯೇ ವಿಶೇಷವಾದ ಕಾರ್ಯಕ್ರಮವಾಗಿದೆ. ದೈವಸ್ಥರು, ಗ್ರಾಮದ ಯುವಕರು, ಮಹಿಳೆಯರು ಹಮ್ಮಿಕೊಂಡಿರುವ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದರು.ಗ್ರಾಮದ ಪ್ರಭುಗೌಡ್ರು, ಎಲೆಗಾರ್ ಕುಬೇರಪ್ಪ, ಶಿವನಗೌಡ್ರು, ಕುರುಬ ಸಮುದಾಯದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ್, ಓ.ಬಸವರಾಜ, ಶರಣಪ್ಪ, ಮಂಜುನಾಥ, ಮಠದ ಸೇವಕ ಖಾನಾವಳಿ ಬಸವರಾಜಪ್ಪ, ಮತ್ತಿತರರು ಇದ್ದರು 

ಸುದ್ದಿ ಓದಿ