ದೂರದರ್ಶನದಲ್ಲಿ ಮತ್ತೆ ರಾಮಾಯಣ ಪ್ರಸಾರ....!
ನವದೆಹಲಿ, ಅ೭ - ನವರಾತ್ರಿ ಹಬ್ಬದ ಸಂದರ್ಭದಲ್ಲಿ, ರಮಾನಂದ್ ಸಾಗರ್ ಅವರ ರಾಮಾಯಣ ಧಾರವಾಹಿಯನ್ನು ಮುಂದಿನ ೧೦ ದಿನಗಳವರೆಗೆ ಡಿಡಿ ನ್ಯಾಷನಲ್‌ನಲ್ಲಿ ಚಲನಚಿತ್ರ ರೂಪದಲ್ಲಿ ಪ್ರಸಾರ ಮಾಡಲಾಗುತ್ತದೆ.
ಪ್ರಸಾರ ಭಾರತಿ ಸಿಇಒ ಶಶಿಶೇಖರ್ ವೇಂಪತಿ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ರಾಮಾಯಣದ ಪ್ರಸಾರ ವಿವರಗಳಿಗಾಗಿ ಡಿಡಿ ನ್ಯಾಷನಲ್ ಮತ್ತು ಪ್ರಸಾರಭಾರತಿ ಟ್ವಿಟರ್ ಹ್ಯಾಂಡಲ್ ಸಂಪರ್ಕಿಸುವಂತೆ ತಿಳಿಸಿದ್ದಾರೆ.