ರಾಮದುರ್ಗ

ರಾಮದುರ್ಗ ವಿಧಾನಸಭಾ ಕ್ಷೇತ್ರ: ಒಟ್ಟು ಪ್ರತಿಶತ 71 ರಷ್ಟು ಮತದಾನ

ರಾಮದುರ್ಗ ವಿಧಾನಸಭಾ ಕ್ಷೇತ್ರ: ಒಟ್ಟು ಪ್ರತಿಶತ 71 ರಷ್ಟು ಮತದಾನ

ರಾಮದುರ್ಗ 07: ಲೋಕಸಭಾ ಚುನಾವಣೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಶಾಂತಿಯುತ ಮತದಾನವಾಗಿದೆ. ಒಟ್ಟು ಪ್ರತಿಶತ 71 ರಷ್ಟು ಮತದಾನವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪ್ರಶಾಂತ ಹನಗಂಡಿ ತಿಳಿಸಿದರು. 

ಪಟ್ಟಣದ ಮತಗಟ್ಟೆ ಸಂಖ್ಯೆ 176, ಗುದಗೊಪ್ಪ ಗ್ರಾಮದ ಮತಗಟ್ಟೆ ಸಂಖ್ಯೆ68 ಹಾಗೂ ದಾಡಿಬಾಂವಿಯ ಮತಗಟ್ಟೆ ಸಂಖ್ಯೆ 38ರಲ್ಲಿ ಮತದಾನ ಆರಂಭಕ್ಕೂ ಮುನ್ನ ಮತಯಂತ್ರದಲ್ಲಿ ತಾಂತ್ರಿಕದೋಷ ಕಂಡು, ಮತದಾನ ವಿಳಂಬವಾಗಿ ಆರಂಭಗೊಂಡಿತು. ಅಧಿಕಾರಿಗಳ ತಕ್ಷಣ ಸ್ಥಳಕ್ಕೆ ಧಾವಿಸಿ ತಾಂತ್ರಿಕ ದೋಷ ಸರಿಪಡಿಸಿದರು. ಇದನ್ನು ಹೊರತುಪಡಿಸಿ ಯಾವದೇ ತೊಂದರೆಯಾಗಿರುವದಿಲ್ಲ ಎಂದು ಹೇಳಿದರು. 

ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ಹೊರತು ಪಡಿಸಿದರೆ ಯಾವುದೇ ಅಹಿತಕರ ಘಟನೆ ನಡೆದಿರುವದಿಲ್ಲಾ, ಪೊಲೀಸರು ಮಧ್ಯ ಪ್ರವೇಶಿಸಿ ಪರಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಈರಣ್ಣ ಪಟ್ಟಣಶೆಟ್ಟಿ ವರದಿಗಾರರಿಗೆ ತಿಳಿಸಿದರು.  

ಬೆಳಗಿನ ವೇಳೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತುಕೊಂಡ ಮತದಾನ ಮಾಡಿದರು. ತಾಪಮಾನ 40ರ ಗಡಿ ದಾಟಿದ್ದ ಮಧ್ಯಾಹ್ನ ಮಾತ್ರ ಮತಗಟ್ಟೆಗೆ ಜನ ಬರಲಿಲ್ಲ. ಸಂಜೆಯಾಗುತ್ತಿದ್ದಂತೆ ಮತ್ತೆ ಸರತಿ ಸಾಲಿನಲ್ಲಿ ನಿಂತು ಮತದಾನ ನಡೆಸಿದರು. ಮತದಾನಕ್ಕೆ ಸಂಜೆ 6ಕ್ಕೆ ಸಮಯ ನಿಗದಿಯಾಗಿತ್ತಾದರೂ ಮತದಾನ ಕೇಂದ್ರದ ಒಳಗಿದ್ದ ಜನ ಹೆಚ್ಚಾಗಿದ್ದರಿಂದ ಸಂಜೆ7ರ ತನಕವೂ ಮತದಾನಕ್ಕೆ ಅವಕಾಶ ನೀಡಲಾಯಿತು. 


ಸುದ್ದಿ ಓದಿ