ಮುಂದಗೋಡ

ಸಂಭ್ರಮದ ರಂಜಾನ್ ಆಚರಣೆ

ಸಂಭ್ರಮದ ರಂಜಾನ್ ಆಚರಣೆ

ಲೋಕದರ್ಶನ ವರದಿ  

ಮುಂಡಗೋಡ:ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಿದರು.    

ಬೆಳಗ್ಗೆ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ನೂರಾನಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಕಲಘಟಗಿ ರಸ್ತೆಯಲ್ಲಿರುವ ಈದ್‌ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ತಾಲೂಕಿನ ಪಾಳಾ, ಭದ್ರಾಪುರ, ಇಂದೂರ, ಹುನಗುಂದ, ಮಳಗಿ, ಕಾತೂರ ಹಾಗೂ ಮುಂತಾದ ಗ್ರಾಮಗಳಲ್ಲಿ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು. ಸಿಪಿಐ ಎಸ್‌.ಎಸ್‌.ಸಿಮಾನಿ ನೇತೃತ್ವದಲ್ಲಿ ತಾಲೂಕಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಏರಿ​‍್ಡಸಲಾಗಿತ್ತು. 


ಸುದ್ದಿ ಓದಿ