ಮನರಂಜನೆ

ಮಗಧೀರ' ನಿಗೆ ಕೊರೊನಾ

ಮಗಧೀರ' ನಿಗೆ ಕೊರೊನಾ

ಬೆಂಗಳೂರು, ಡಿಸೆಂಬರ್.29:ಮೆಗಾಸ್ಟಾರ್ ಕುಟುಂಬದ ಕುಡಿ ರಾಮ್ ಚರಣ್ ಅವರಿಗೆ ಕೋವಿಡ್ -19 ಸೋಂಕು ತಗುಲಿದೆ.

ಈ ವಿಷಯವನ್ನು ಖುದ್ದು ರಾಮ್ ಚರಣ್ ಅವರು ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ನನಗೆ ಕೊರೊನಾ-19 ಸೋಂಕು ಇರುವುದು ದೃಢಪಟ್ಟಿದೆ. ಆದರೆ, ಯಾವುದೇ ಲಕ್ಷಣಗಳಿಲ್ಲ. ಸದ್ಯ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು, ಶೀಘ್ರವೇ ಗುಣಮುಖನಾಗಿ ಹೊರ ಬರುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ‌.

ಕೆಲ ದಿನಗಳಿಂದ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ಮುಂಜಾಗ್ರತಾ ಕ್ರಮವಾಗಿ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಿ  ಎಂದು ಅವರು ಮನವಿ ಮಾಡಿದ್ದಾರೆ.

ಸುದ್ದಿ ಓದಿ