ರಕ್ಷಾ ಬಂಧನವೂ ಪ್ರೀತಿವಾತ್ಸಲ್ಯದ ಕುರುಹುವಾಗಿದೆ
ಹಿಂದುಗಳಿಗೆ ಮಹಾಭಾರತವು ಒಂದು ಅದ್ಭುತ ಮಹಾಕಾವ್ಯವಾಗಿದೆ. ಮಹಾಭಾರತದಲ್ಲಿ ಕೌರವರ ಮತ್ತು ಪಾಡವರ ಮಧ್ಯದಲ್ಲಿ ಪಗಡೆ ಆಟದ ಸ್ಪಧರ್ೆ ನಡೆಯುತ್ತದೆ.ಈ ಪಗಡೆಯ ಸ್ಪಧರ್ೆಯಲ್ಲಿ ಧರ್ಮರಾಜ ತನ್ನ ಎಲ್ಲ ರಾಜ್ಯವನ್ನು ಪಣವಾಗಿರಿಸಿ ಆ ಆಟದಲ್ಲಿ ಪಾಂಡವರು ಸೋಲುತ್ತಾರೆ.ಕೊನೆಯಲ್ಲಿ ಧರ್ಮರಾಜ ತನ್ನ ಸತಿಯಾದ ದ್ರೌಪದಿಯನ್ನು ಪಣವಾಗಿರಿಸಿ ಅವಳನ್ನು ಸಹ ಸೋಲುತ್ತಾನೆ.ಜಯದ ಸಂಭ್ರಮದಲ್ಲಿ ದುಯೋಧನ ಎದುರಿನಲ್ಲಿ ದುಶ್ಯಾಸನನು ದ್ರೌಪದಿಯ ಸೀರೆಯನ್ನು ಎಳೆದು ಮಾನಾಪಹರಣ ಮಾಡಲು ತೊಡಗಿದಾಗ ದುಯರ್ೊಧನನು ಗಹಗಹಸಿ ನಗುತ್ತಾನೆ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆಯುವಾಗ ಚಿಂತಾಕ್ರಾಂತಳಾಗಿ ತನ್ನ ಅಣ್ಣನಾದ ಶ್ರೀ ಕೃಷ್ಣಪರಮಾತ್ಮನನ್ನು ಮನದಲ್ಲಿ ನೆನೆದು ತನ್ನ ಮಾನ ಕಾಪಾಡಲು ಹೇಳುತ್ತಾಳೆ. ಆಗ ತಂಗಿಯ ಕೂಗಿಗೆ (ಧ್ವನಿಗೆ) ಸ್ಪಂದಿಸಿ ದುಶ್ಯಾಸನನು ಎಷ್ಟೇ ಸೀರೆ ಸೆಳೆದರೂ ಕೂಡಾ ಅವಳ ಮಾನ ಕಾಪಾಡಲು ಒಂದರ ಮೇಲೊಂದು ಸೀರೆಯನ್ನು ಬಿಟ್ಟು ತಂಗಿಯಾದ ದ್ರೌಪದಿಯ ಮಾನವನ್ನು ರಕ್ಷಿಸುತ್ತಾನೆ.ಇದರ ಸವಿನೆನಪಿಗಾಗಿ ದ್ರೌಪದಿಯು ನೂಲಹುಣ್ಣಿಮೆಯ ದಿವಸ ತನ್ನ ಸೀರೆಯ ಸೆರಗನ್ನು ಹರಿದು ಶ್ರೀ ಕೃಷ್ಣನ ಬಲಗೈಯಿಗೆ ಕಟ್ಟುತ್ತಾಳೆ.ಸೀರೆಯ ಸೆರಗವೇ ರಕ್ಷಾಬಂಧನದ ಮೂಲ ಉದ್ದೇಶ.
ಅಣ್ಣತಮ್ಮಂದಿರರು ಅಕ್ಕತಂಗಿಯರಿಂದ ರಕ್ಷಾಬಂಧನವನ್ನು ಕಟ್ಟಿಸಿಕೊಂಡು ಅವರ ಜೀವನುದ್ದಕ್ಕೂ ಅವರ ಮಾನ ಕಾಪಾಡುವದು ಇದರ ಹಿಂದಿನ ತಾತ್ಪರ್ಯವಾಗಿದೆ.ಅಕ್ಕತಂಗಿಯರು ಅಣ್ಣತಮ್ಮಂದಿರರಿಗೆ ಪ್ರೀತಿಯದ್ಯೋತಕವಾಗಿ ರಕ್ಷಾಬಂಧನವನ್ನು ಕಟ್ಟಿ ಆರತಿಯನ್ನು ಬೆಳಗುತ್ತಾರೆ.ಅಲ್ಲದೆ ಸವಿರುಚಿಯ ಪಂಚಪಕ್ವಾನ್ನ ಅಡಿಗೆಗಳನ್ನು ಮಾಡಿ ಅಣ್ಣ ತಮ್ಮಂದಿರರಿಗೆ ಉಣ್ಣಿಸಿ ಸಂಭ್ರಮಿಸುವದುಂಟು.
ಹಿಂದೂಗಳಲ್ಲಿ ರಕ್ಷಾಬಂಧನವು ಅಣ್ಣ-ತಮ್ಮಂದಿರರ ಮತ್ತು ಅಕ್ಕತಂಗಿಯರ ಪ್ರೀತಿ ವಾತ್ಸಲ್ಯದ ಸಂಕೇತವಾಗಿದೆ. ಕೇವಲ ಪ್ರತಿಯೊಬ್ಬರು ರಕ್ಷಾಬಂಧನವು ಕಟ್ಟಿಸಿಕೊಂಡರೆ ಸಾಲದು.ಅವರು ಅಕ್ಕತಂಗಿಯರ ಜೀವನದಲ್ಲಿ ಕಷ್ಟ ಸುಖಗಳಲ್ಲಿ ಸ್ಪಂದಿಸಿ ಅವರ ಬಾಳು ಬೆಳಕಾಗಲು ಎಲ್ಲ ಸಹೋದರರು ಸಹಕರಿಸುವುದು ಬಹಳ ಮಹತ್ವದ್ದು ಆಗಿದೆ. ನೋವಿನ,ದು:ಖದ ಪ್ರಸಂಗದಲ್ಲಿ ಅಣ್ಣ-ತಮ್ಮಂದಿರರು ಅವರ ಬದುಕಿನಲ್ಲಿ ನೇರವಾಗಿ ಸಹಾಯಹಸ್ತ ಚಾಚುವದು.ಪ್ರತಿಯೊಬ್ಬ ಸಹೋದರರ ಆದ್ಯ ಕರ್ತವ್ಯವಾಗಿದೆ. ಸಹೋದರಿಯರ ಮಾನ ಎಲ್ಲಕ್ಕಿಂತ ಮಿಗಿಲಾದದ್ದು. ಸಹೋದರರು ತಮ್ಮ ಪ್ರಾಣಪಕ್ಷಿ ಇರುವವರೆಗೂ ಸದಾ ಅವರ ಮಾನ ರಕ್ಷಣೆಗಾಗಿ ಸೇವಾ ಮನೋಭಾವನೆಯಿಂದ ನಡೆದುಕೊಂಡು ಅವರ ಬಾಳು ಬೆಳಗಿಸಲು ಸದಾ ಕಂಕಣಬದ್ದರಾಗಬೇಕೆಂದು ನಮ್ಮ ಹಿರಿದಾಸೆಯಾಗಿದೆ.
ಇಂದು ಕಾಲೇಜಿನಲ್ಲಿ ಯುವಕರು ಯುವತಿಯರನ್ನು ರೇಗಿಸುವದು, ಚುಡಾಯಿಸುವದು ಸವರ್ೆ ಸಾಮಾನ್ಯವಾಗಿದೆ. ಯುವಕರು ಬಾಳು ಉಜ್ವಲವಾಗಲು ಯುವತಿಯರು ಅವರ ಮನಪರಿವರ್ತನೆಗಾಗಿ ಅವರ ಕೈಗೆ ರಕ್ಷಾಬಂಧನವನ್ನು ಕಟ್ಟಿ ಸಹೋದರ ಸಹೋದರಿಯಾಗಿ ಬಾಳು ಸಾಗಿಸೋಣ ಎಂಬ ಉದಾತ್ತ ಧ್ಯೇಯವನ್ನು ಹೊಂದಿದ್ದಾರೆ.
ಆದ್ದರಿಂದ ಯುವಕರು ಭಾವೀ ಜೀವನವನ್ನು ಉಜ್ವಲಗೊಳ್ಳಬೇಕಾದರೆ ಯುವತಿಯರೊಂದಿಗೆ ಸಹೋದರತ್ವ ಭಾವನೆಯನ್ನು ಇರಿಸಿಕೊಳ್ಳಬೇಕು.ರಕ್ಷಾಬಂಧನದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಜೀವನುದ್ಧಕ್ಕೂ ಸಹೋದರಿಯರಾಗಿ ಬಾಳು ಸಾಗಿಸಲೆಂಬುದು ನಮ್ಮ ಹೆಬ್ಬೆಯಕೆ ಆಗಿದೆ.
- ಕೆ.ಬಿ.ಮರೋಬ
ಮುಧೋಳ
ಮೊ.9980292864