ರಕ್ಷಾ ಬಂಧನ: ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದ ನಾರಿಯರು
ಲೋಕದರ್ಶನ ವರದಿ
ಕಂಪ್ಲಿ 22: ರಕ್ಷಾ ಬಂಧನ ನಿಮಿತ್ತ ಪುರಸಭೆ ಆವರಣದ ಮುಂದೆ ಪುರಸಭೆ ಸದಸ್ಯರು, ಮತ್ತು ಸಿಬ್ಬಂದಿ, ಪೊಲೀಸ್, ಸರ್ಕಾರಿ ಆಸ್ಪತ್ರೆ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಬಿಜೆಪಿ ಮಹಿಳಾ ಮೋರ್ಚಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಗಳಿಂದ ಭಾನುವಾರ ರಕ್ಷಾ ಬಂಧನ ಆಚರಿಸಲಾಯಿತು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಟಿ.ರಬಿಯಾ ನಿಸಾರ್
ಮೆಹರುನ್ನಿಸಾ, ಲಕ್ಷ್ಮೀ ಸಲೀಮಾ, ಸದಸ್ಯರಾದ ಆರ್.ಆಂಜಿನೇಯ, ವಿ.ಎಲ್.ಬಾಬು, ಪ್ರಮುಖರಾದ ಬಿ.ಸಿದ್ದಪ್ಪ, ಎನ್.ಪುರುಷೋತ್ತಮ, ಕೊಡಿದಲ ರಾಜು, ಎಚ್.ಎಂ.ವಿರುಪಾಕ್ಷಿ ಸೇರಿ ಇತರರಿದ್ದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಿಂದಲೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ನಾಗರೀಕರಿಗೆ ರಾಖಿ ಕಟ್ಟಿದರು. ಸಂಚಾಲಕಿ ಸಕಲೇಶ್ವರಿ ಅಕ್ಕನವರು, ಮೊನಿಕಾ, ಅನಿಲ್, ತಿಪ್ಪೆಸ್ವಾಮಿ ಸೇರಿ ಇತರರಿದ್ದರು.