ಶಿಶುಪಾಲನಾ ಕೇಂದ್ರದಲ್ಲಿ ರಾಜ್ಯೋತ್ಸವ
ಲೋಕದರ್ಶನ ವರದಿ
ಮುಂಡಗೋಡ:ಪಟ್ಟಣದ ಲಮಾಣಿ ತಾಂಡಾದಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳು, ಶಿಕ್ಷಕರೊಂದಿಗೆ ಪಾಲಕರು ಮಂಗಳವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.
ಈ ವೇಳೆ ಮಾತನಾಡಿದ ಮಗುವಿನ ತಾಯಿ ಶಾರದಾ ಲಮಾಣಿ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿದೆ ಎಂದು ಹೇಳಿ ರಾಜ್ಯೋತ್ಸವದ ಶುಭಾಶಯ ಕೋರಿದರು. ಶಿಕ್ಷಕಿ ಕವಿತಾ ಲಮಾಣಿ, ಸಹಾಯಕಿ ಲಲಿತಾ ಲಮಾಣಿ ಪಾಲಕರಾದ ರೂಪಾ ಲಮಾಣಿ, ವಾಸು ಲಮಾಣಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.