ಪಂಚಮಸಾಲಿ ಜಿಲ್ಲಾ ಪ್ರ.ಕಾರ್ಯದರ್ಶಿಯಾಗಿ ರಾಜಶೇಖರ ಗೌಡ ನೇಮಕ
ಲೋಕದರ್ಶನ ವರದಿ
ಕಂಪ್ಲಿ 07: ತಾಲೂಕಿನ ರಾಮಸಾಗರ ಗ್ರಾಮದ ಎಚ್.ಟಿ.ರಾಜಶೇಖರ ಗೌಡ ಇವರನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳನ್ನಾಗಿ, ಯುವಘಟಕದ ರಾಜ್ಯಾಧ್ಯಕ್ಷ ಮಂಜುನಾಥ ಕ.ನವಲಗುಂದ್ ಅವರು ನೇಮಕಗೊಳಿಸಿ ಆದೇಶ ನೀಡಿದ್ದಾರೆ. ಪಂಚಮಸಾಲಿ ಸಮಾಜವನ್ನು ಸಂಘಟಿಸುವಲ್ಲಿ ಕ್ರಿಯಾಶೀಲತೆಯಿಂದ ಅಹರ್ನಿಶಿ ಸೇವೆ ಸಲ್ಲಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.