ಬಳ್ಳಾರಿ

ರಾಜೀವ್ ಗಾಂಧಿ, ದಿ. ದೇವರಾಜ ಅರಸು ಹುಟ್ಟುಹಬ್ಬ ಆಚರಣೆ

ರಾಜೀವ್ ಗಾಂಧಿ, ದಿ. ದೇವರಾಜ ಅರಸು ಹುಟ್ಟುಹಬ್ಬ ಆಚರಣೆ

ಹೊಸಪೇಟೆ 21: ವಿಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಹಂಪಿ ರಸ್ತೆಯ ಮುತ್ಯಾಲಮ್ಮ ದೇವಸ್ಥಾನದ ಎದುರುಗಡೆ  6ನೇ ವಾರ್ಡ್‌ ಕಾಂಗ್ರೆಸ್ ಅಭಿಮಾನಿಗಳಿಂದ ವರಮಹಾಲಕ್ಷ್ಮಿ ಪೂಜೆ ಹಾಗೂ ಮಾಜಿ ಪ್ರಧಾನಿಗಳಾದ ದಿ. ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ  ಹುಟ್ಟುಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ  ಅಧ್ಯಕ್ಷ ಹೆಚ್‌.ಎನ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ಹಾಗೂ ಭಾರತ ದೇಶದ ಮಾಜಿ ಪ್ರಧಾನಿಗಳಾದ ದಿ. ರಾಜೀವ್ ಗಾಂಧಿಯವರ ಮತ್ತು ಮಾಜಿ ಮುಖ್ಯಮಂತ್ರಿಗಳಾದ ದಿ. ದೇವರಾಜ ಅರಸು ರವರ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.  


ಇಂದು ಮತಿಯವರಿಂದ ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಎಲ್ಲ ಮಹಿಳೆಯರಿಗೆ ಅರಿಶಿನ ಕುಂಕುಮ ಉಡಿ ತುಂಬುವುದರ ಮೂಲಕ ವರಮಹಾಲಕ್ಷ್ಮಿ ಪೂಜೆಯನ್ನು ಆರಂಭಿಸಲಾಯಿತು. ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷರು ವೆಂಕಟರಮಣ ಸರ್, ಅಲೆಮಾರಿ ಜನಾಂಗದ ಕಾಂಗ್ರೆಸ್ ಮುಖಂಡರು ಸಣ್ಣಮಾರ​‍್ಪ , ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷ ಮಾರಣ್ಣ ನವರು, ಸೇವಾದಳ ಜಿಲ್ಲಾ ಉಪಾಧ್ಯಕ್ಷ ಅಯೂಬ್ ಭಾಷ ಅವರು ಕಾಂಗ್ರೆಸ್ ಸೇವಾದಳ ತಾಲೂಕ್ ಅಧ್ಯಕ್ಷ ಪರಶುರಾಮ್, ಕಾಂಗ್ರೆಸ್ ಸೇವಾದಳ ತಾಲೂಕು ಉಪಾಧ್ಯಕ್ಷ ನಾಗರಾಜ್ ರವರು, ಕಾಂಗ್ರೆಸ್ ಅಭಿಮಾನಿಗಳಾದ ಲಿಂಗಣ್ಣ ನಾಯಕ, ಖಾದರ್ ಭಾಷಾ, ಎಸ್ಸಿ ಘಟಕದ ಅಧ್ಯಕ್ಷರು ವಿಜಯಕುಮಾರ್  ಕಾಂಗ್ರೆಸ್ ಬ್ಲಾಕ್  ಪ್ರಧಾನ ಕಾರ್ಯದರ್ಶಿ ಇಂದುಮತಿ, ಕಾಂಗ್ರೆಸ್ ಬ್ಲಾಕ್ ಸಹ ಕಾರ್ಯದರ್ಶಿ ಮಂಜುಳಾರವರು, ಹೇಮಲತಾ, ಲಕ್ಷ್ಮಿ, ನರ್ಗೆಸ, ಶಾರದಾ, ಅಶ್ವಿನಿ ಹಾಗೂ ಆರನೇ ವಾರ್ಡಿನ ಎಲ್ಲಾ ಪದಾಧಿಕಾರಿಗಳು ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ