ಸಂಘಟನೆಗಳು ಸಾಮಾಜಿಕ ಸೇವೆಗೆ ಆದ್ಯತೆ ನೀಡಲು ರಾಜೇಶ್ವರಿ ಸುಬ್ಬರಾಯಿಡು ಕರೆ
ಬಳ್ಳಾರಿ08: ಬರೀ ಸರ್ಕಾರ ಮಾತ್ರವಲ್ಲದೆ, ಸಂಘಟನೆಗಳು ಸಹ ಜನಪರ ಕೆಲಸ ಮಾಡುವುದರಿಂದ ರಾಜ್ಯಕ್ಕೆ ಹಾಗೂ ಸಂಘಟನೆಗಳ ಮುಖಂಡರಿಗೂ ಹೆಸರು ತರವಂತಹ ಕಾರ್ಯ ನಡೆಸಲಿ ಎಂದು ಮಹಾನಗರ ಪಾಲಿಕೆ ಮಹಾಪೌರ ರಾಜೇಶ್ವರಿ ಸುಬ್ಬರಾಯಿರು ತಿಳಿಸಿದ್ದಾರೆ.
ಮಾಜಿ ಸಚಿವ ಎಂ. ದಿವಾಕರ ಬಾಬು ರವರ 65 ನೇ ಜನ್ಮ ದಿನಾಚರಣೆಯ ಅಂಗವಾಗಿ ಎಸ್.ಪಿ ಸರ್ಕಲ್ ನಲ್ಲಿ36 ನೇ ವಾರ್ಡ್ ಮಾಜಿ ನಾಮ ನೀರ್ದೇಶಿತ ಸದಸ್ಯ ರಾಮಾಂಜೀನೇಯಲು.ದಾರದ ಮಿಲ್ ಶೇಖರ,ಸೂರಿ, ಡಿಶ್ ರಾಮಾಂಜಿನಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಕೇಕ್ ಕತ್ತರಿಸಿ ಸಿಹಿ ವಿತರಿಸುವ ಮೂಲಕ ಮಾತನಾಡಿದರು.
ರಾಜೇಶ್ವರಿ ಸುಬ್ಬರಾಯಿಡು, ಮಾಜಿ ಸಚಿವ ದಿವಾಕರ ಬಾಬು ಅಭಿಮಾನಿ ಬಳಗ ಜನ್ಮ ದಿನಾಚರಣೆಯನ್ನು ಸಮಾಜ ಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಮುಂದಾಗಿದ್ದು ಶಾಘ್ಳನೀಯ, ಮಾಜಿ ಸಚಿವ ದಿವಾಕರ ಬಾಬು ಅಧಿಕಾರವಿದ್ದಾಗ ಬಳ್ಳಾರಿಯ ಅಭಿವೃದ್ದಿಗೆ ಸಾಕಷ್ಟ್ರು ಶ್ರಮಿಸಿದ್ದಾರೆ, ಇದಕ್ಕೆ ಉದಾಹರಣೆ ಎಂದರೇ ಇಂದಿಗೂ ಅವರ ಕೈಗೊಂಡ ಕಾರ್ಯಗಳು ಮತ್ತು ಜನತೆ ಅಭಿಮಾನ ಪ್ರತಿ ಕಾಲೋನಿಯಲ್ಲಿ ಕಂಡು ಬರುತ್ತದೆ, ತಮ್ಮ ರಾಜಕೀಯ ಜೀವನಲ್ಲಿ ಎಂದಿಗೂ ಅಧಿಕಾರದ ದರ್ ತೊರಿದವರಲ್ಲ, ಸರಳ, ಸಜ್ಜನ ವ್ಯಕ್ತಿಯಾಗಿದ್ದಾರೆ.ಇವರಿಂದ ಇನ್ನು ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಡಬೇಕಿದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಎಂ.ವಿವೇಕ್ ಮಾತನಾಡಿ ಅಂದಿನ ಸಿದ್ದರಾಮಯ್ಯನವರ ಬೆಂಗಳೂರಿನಿಂದ ಬಳ್ಳಾರಿಯ ಪಾದಯಾತ್ರೆಯಲ್ಲಿ, ಬಳ್ಳಾರಿ ಕಾರ್ಯಕ್ರಮದ ಜವಾಬ್ಥಾರಿವಹಿಸಿದ್ದು. ಇಂದಿನ ಜೊಡೋ ಯಾತ್ರೆಯಲ್ಲಿ ತಮನ್ನು ತೊಡಗಿಸಿಕೊಂಡಿದ್ದಾಗ ಕಂಡ ಜನತೆ ಅವರಿಗೆ ಅಭೂತ ಬೆಂಬಲ ಹಾಗೂ ಶುಭಕೋರಿದ್ದಾರೆ, ಅವರ ಪ್ರತಿ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳ ಬಳಗ ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ನಡೆಸುತ್ತಾ ಬಂದಿದ್ದು ನೋಡಿದರೇ ಇವರ ಜನಪ್ರಿಯತೆ ಸಾಕ್ಷಿಯಾಗಿ ಕಂಡು ಬರುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಶೇಖರ್ ಮಾತನಾಡಿ ಎಂ. ದಿವಾಕರ ಬಾಬು ರವರು ಅಂದಿನ ಅಕ್ರಮ ಗಣಿಗಾರಿಕೆಯ ವಿರೋಧಿಸಿ ಬೆಂಗಳೂರಿಗೆ ಬೈಕ್ ರಾ್ಯಲಿ, ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಮತ್ತು ನಗರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜೈಲುಪಾಲಾಗಿದ್ದ ಅಂದಿನ ದಿನಗಳು ಮರೆಯುಂತಿಲ್ಲ, ದಿಟ್ಟ ಹೋರಾಟಗಾರ ನೇರ ಮಾತಿನ ನಾಯಕ ಇಂದಿಗೂ ಬಳ್ಳಾರಿ ಜನತೆಯ ಬಹಳಷ್ಟು ಅಭಿಮಾನವಿದ್ದು ಜನಪರ ಕಾರ್ಯ ನಡೆಸುವ ಮೂಲಕ ಜನತೆಯ ಬಳಿ ತೆರಳುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಉಪ ಮಹಾಪೌರರಾದ ಮಾಲನ್ ಬೀ, ಹಿರಿಯ ಮುಖಂಡರಾದಬೇವಿನ ಹಾಳ್ ಹನುಮಂತಪ್ಪ, ಪಾಲಿಕೆ ಸದಸ್ಯರುಗಳಾದ ರಾಮಾಂಜಿನೇಯಲು, ಗಾದೆಪ್ಪ,ಎಂ. ಪ್ರಭಂಜನ್, ವಿವೇಕ್, ಕುಬೇರ, ಶಿವರಾಜ್,ರಾಜಶೇಖರ್,ಜಬ್ಬಾರ್,ಮಾಜಿ ಸದಸ್ಯ ಸರ್ಮಾಸ್, ಜಗನಾಧ್,ಯರಿ್ರಸ್ವಾಮಿ,ದೇವಿನಗರ ಮಹಮ್ಮದ್,ಅಸುಂಡಿ ನಾಗರಾಜ್ ಗೌಡ,ಚಾಂದ್ ಭಾಷ,ವೇಣುಗೋಪಾಲ್,ತೇಜಾ, ಸಗೀರ್ ಅಹಮ್ಮದ್,ಶಿವರಾಮ ಕೃಷ್ಣ,ತರುಣ್,ಸಮೀರ್, ಅಬ್ಥುಲ್,ಅನ್ವರ ಭಾಷ.ಸೂರಿ,ಸೀನಾ,ಇರ್ಾನ್ ಪಠಾಣ ಸೇರಿದಂತೆ ಇನ್ನಿತರು ಭಾಗವಹಿಸಿದ್ದರು,ಸ