ರಾಜರಾಜೇಶ್ವರಿ ಕಾಲೇಜು: ರಾಜ್ಯಮಟ್ಟದ ಸ್ವಚ್ಛತಾ ಸೇವೆಯಲ್ಲಿ ಪ್ರಥಮ
ರಾಣೆಬೆನ್ನೂರು 19: ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾಮ ವಿದ್ಯಾಲಯವು, ತನ್ನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯದಲ್ಲಿ ಅತ್ಯುತ್ತಮ ಏನ್ ಎಸ್ ಎಸ್ ಎಂದು ಸಾಧನೆ ಮೆರೆದು ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇತ್ತೀಚೆಗೆ 2022 ಮತ್ತು 2023ನೇ ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯಮಟ್ಟದ ಸ್ವಚ್ಛತಾ ವಿಶೇಷ ಶಿಬಿರವು, ಕೇಳಿ ಶಿಕ್ಷಣ ಸಂಸ್ಥೆ, ಯುವಜನ ಸೇವಾ ಕ್ರೀಡಾ ವಿಭಾಗ ಬಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಯೋಗದಲ್ಲಿ ವಿಶೇಷ ಶಿಭಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಆರ್ ಟಿ ಇ ಎಸ್, ಬಿ ಎ ಜೆ ಎಸ್ ಎಸ್, ರಾಜರಾಜೇಶ್ವರಿ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಸ್ವಚ್ಛತಾ ಕಾರ್ಯದಲ್ಲಿ ಕಾಲೇಜಿನ ಘಟಕವು. ಸ್ವಚ್ಛತಾ ಸೇವಾ ಕಾರ್ಯದಲ್ಲಿ ಅತ್ಯುತ್ತಮ ಘಟಕವೆಂದು ಹೊರಹೊಮ್ಮಿದೆ.
ಘಟಕದ ನಾಗರತ್ನ ಮಲಗೌಡ್ರ ಪ್ರತಿಭಾ ಹೊಟ್ಟೆಗೌಡ್ರ, ದುರ್ಗಾ ರಾಥೋಡ್, ಪ್ರಿಯಾ ಪುಟ್ಟನಗೌಡ್ರ ಇವರುಗಳು ಅತ್ಯುತ್ತಮ ಶಿಬಿರಾರ್ಥಿಗಳು ಎಂದು ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗಾಗಿ ಅಭಿನಂದನಾ ಸಮಾರಂಭವು ಏರ್ಪಡಿಸಲಾಗಿತ್ತು. ಕಾರ್ಯಧ್ಯಕ್ಷ ವಿ.ಪಿ ಲಿಂಗನಗೌಡ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳಾಗಿ ಶಾಸಕ ಅರುಣ್ ಕುಮಾರ್ ಪೂಜಾರ್,ರಾಜ್ಯ ಸಂಯೋಜನಾಧಿಕಾರಿ ವೈ ಎಂ ಉಪ್ಪಿನ್, ವಿಜಯಪುರ ಕುಲ ಸಚಿವ ಪ್ರೊ :ಬಿ.ಎಸ್. ನವಿ, ಸದಸ್ಯರಾದ ಬಿ.ಎಸ್.ಪಟ್ಟಣಶೆಟ್ಟಿ, ಕಾರ್ಯಕ್ರಮ ಅಧಿಕಾರಿ, ಪ್ರಾಚಾರ್ಯ ನಾರಾಯಣ ನಾಯಕ್ ಎ,ವೀರೇಶ್ ಕುರಹಟ್ಟಿ ಡಾ: ಕವಿತಾ ಗಡ್ಡದಗೂಳಿ, ಉಪನ್ಯಾಸಕರಾದ ಕಾರ್ತಿ ಕ್ ಹೂಗಾರ್, ಮಂಜಪ್ಪ ಸಿ ಎಸ್, ವೀರಣ್ಣ ಸಿ.ಕೆ.ಸೇರಿದಂತೆ ಮತ್ತಿತರೆ ಉಪನ್ಯಾಸಕರು ಸದಸ್ಯರು ಪಾಲ್ಗೊಂಡಿದ್ದರು.