ಮುಂದಗೋಡ

ಪಟ್ಟಣ ಪಂಚಾಯಿತಿ ಕೃಪೆ, ಪ್ರತೀ ಮಳೆಯಲ್ಲೂ ಜಲಕ್ರೀಡೆ ಆಡುವ ಮುಂಡಗೋಡದ ಜನ

ಪಟ್ಟಣ ಪಂಚಾಯಿತಿ ಕೃಪೆ, ಪ್ರತೀ ಮಳೆಯಲ್ಲೂ ಜಲಕ್ರೀಡೆ ಆಡುವ ಮುಂಡಗೋಡದ ಜನ

ಮುಂಡಗೋಡ 22: ಪಟ್ಟಣದ ಬಂಕಾಪುರ ರಸ್ತೆ, ಹಾಗೂ ಯಲ್ಲಾಪುರ ರಸ್ತೆಗಳಲ್ಲಿ  ಮಳೆ ಅವಾಂತರದಿಂದ ಸುಮಾರು ಗಂಟೆಗಳ ಕಾಲ ಎರಡು ರಸ್ತೆಗಳಲ್ಲಿ ನೀರು ನಿಂತು ಕೆರೆಯಂತೆ ಕಾಣತಿತ್ತು.  ಸೋಮವಾರ ಮಧ್ಯಾಹ್ನ ಸುರಿದ ಜೋರಾದ ಮಳೆಗೆ ಪಟ್ಟಣದ ಬಂಕಾಪುರ ರಸ್ತೆಯಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೇ ರಸ್ತೆಯ ಮೇಲೆ ನಿಂತು. ಮಳೆಯಲ್ಲೂ ಜಲಕ್ರೀಡೆ ಆಡುವ ಮುಂಡಗೋಡದ ಜನ ನಿಂತು ಬೈಕ್ ಸವಾರರು ಮತ್ತು ಪಾದಚಾರಿಗಳು ಪರದಾಡುವ ಸ್ಥಿತಿ ಕಂಡು ಬಂದಿದೆ.    

ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ.ಬಂಕಾಪುರ ರಸ್ತೆ ಪೆಟ್ರೋಲ್ ಬಂಕ್ ಹಾಗೂ  ಅಂಗಡಿಗಳ ನಡುವೆ ಮಳೆ ನೀರು ಹೋಗುವ ಸೂಕ್ತ ವ್ಯವಸ್ಥೆ ಮಾಡದ ಕಾರಣ  ಸಾಕಷ್ಟು ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೆಲವು ಭಾಗಗಳಲ್ಲಿ ಮಳೆಯ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯ ಮೇಲೆ ನಿಂತಿರುದ ರಿಂದ ಸಾರ್ವಜನಿಕರ ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಪ್ರತಿ ವರ್ಷದಂತೆಯೇ ಬಂಕಾಪುರ ರಸ್ತೆಯ ರವಿ ಹೆಗಡೆ ಆಸ್ಪತ್ರೆಯಿಂದ ಹಿಡಿದು ಸಿಂಡಿಕೇಟ್ ಬ್ಯಾಂಕ್‌ವರೆಗೆ ಎರಡು ಮೂರು ಅಡಿ ನೀರು ನಿಂತು ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬೈಕ್ ಸವಾರರು ಹರಸಾಹಸ ಪಡುತ್ತಾ ತಮ್ಮ ಬೈಕ್‌ಗಳನ್ನು ಗುಂಡಿಯಂತಾದ ರಸ್ತೆಯಲ್ಲಿ ದಾಟಿಸಿಕೊಂಡು ಹೋಗುವ ದೃಶ್ಯ ಕಂಡು ಬಂತು.  

ಬಂಕಾಪುರ ರಸ್ತೆಯಲ್ಲಿ ಇರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಪ್ರತಿ ವರ್ಷ ಮಳೆಗಾಲದಲ್ಲಿ ಈ ಜಾಗದಲ್ಲಿ ನೀರು ನಿಲ್ಲುವ ಸಮಸ್ಯೆ ಎದುರಾಗುತ್ತಿದ್ದು ಕಳೆದ ಬಾರಿ ರಸ್ತೆಯ ಪಕ್ಕದಲ್ಲಿರುವ ಅಂಗಡಿ ಮತ್ತು ಮನೆಗಳಲ್ಲಿಯೂ ಮಳೆ ಹೊಕ್ಕು ಅವಾಂತರ ಸೃಷ್ಟಿಯಾಗಿತ್ತು. ಸಂಬಂಧಪಟ್ಟ ಪಟ್ಟಣ ಪಂಚಾಯತಿವರು ಚರಂಡಿಗಳಲ್ಲಿ ನೀರು ಹರಿದು ಹೋಗುವಂತೆ ಮಾಡಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ