ಮಳೆ ನೀರು ಸಂಗ್ರಹಣ ಅಭಿಯಾನ: ಬೀದಿನಾಟಕದಿಂದ ಜಾಗೃತಿ
ಚಿಕ್ಕೋಡಿ10: ನೆಹರು ಯುವ ಕೇಂದ್ರ, ಬೆಳಗಾವಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ ಗ್ರಾಮ ಪಂಚಾಯತ ಖಡಕಲಾಟ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಖಡಕಲಾಟ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ “ಮಳೆ ನೀರು ಸಂಗ್ರಹಣ ಅಭಿಯಾನ” ಕುರಿತು ಸಮೂದಾಯಕ್ಕೆ ಜಾಗೃತಿ ಮೂಡಿಸುವ ಬೀದಿನಾಟಕ ನಡೆಯಿತು.
ರಂಗದರ್ಶನ ಗ್ರಾಮೀಣ ವಿಕಾಸ ಸಂಘ, ಧುಳಗನವಾಡಿ ತಂಡದವರು “ಜೀವ ಜಲ” ಬೀದಿನಾಟಕ ಜಾಗೃತಿ ಹಾಡುಗಳ ಮುಖಾಂತರ ಮಳೆ ನೀರು ಸಂಗ್ರಹಣೆ, ನೀರು ಇಂಗಿಸುವಿಕೆ, ಅಂತರ್ಜಲ ಹೆಚ್ಚಿಸುವುದು, ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಜೊತೆಗೆ ನೀರಿನ ಮೀತ ಬಳಕೆ ಕುರಿತು ನೇರೆದ ಗ್ರಾಮಸ್ಥರಿಗೆ ಮನ ಮುಟ್ಟುವಂತೆ ಕಲಾ ಪ್ರದರ್ಶ ನೀಡಿ ಅರಿವು ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಫುಲಾಬಾಯಿ ಗಾವಡೆ, ಹಾಗೂ ಗ್ರಾಮ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಜಾಗೃತಿ ಕಲಾ ತಂಡದಲ್ಲಿ ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಮಾರುತಿ ಕಮತೆ, ವಿಷ್ಣು ಹಲಗೇಕರ, ಶಂಕರ ಖೊತ, ಅಪ್ಪಾಸಾಹೇಬ ಚಿಮನೆ, ಪುಂಡಲೀಕ ನಾಯಿಕ, ಸಂತ್ರಾಮ ಮಯೂರ, ಸಾವಿತ್ರಿ ಹಳಕಲ, ಸುಜಾತಾ ಮಗದುಮ್ಮ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಣ ಕುರಿತು ಸಾರ್ವಜನಿಕರಿಗೆ ಭಿತ್ತಿ ಪತ್ರ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ವಿತರಿಸಲಾಯಿತು.